Advertisement

ಏಕದಿನ ಸರಣಿ ಗೆಲ್ಲುವ ಹುಮ್ಮಸ್ಸಿನಲ್ಲಿ ಭಾರತ ;ದಕ್ಷಿಣ ಆಫ್ರಿಕಾ 99ಕ್ಕೆ ಆಲೌಟ್

06:59 PM Oct 11, 2022 | Team Udayavani |

ನವದೆಹಲಿ: ಏಕದಿನ ಸರಣಿಯ ಮಂಗಳವಾರ ನಡೆಯುತ್ತಿರುವ ಮೂರನೇ ಮತ್ತು ಸರಣಿ ನಿರ್ಣಾಯಕ ಏಕದಿನ ಪಂದ್ಯದಲ್ಲಿ ದ್ವಿತೀಯ ದರ್ಜೆಯ ಭಾರತ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾವನ್ನು 99 ರನ್ ಗಳಿಗೆ ಆಲೌಟ್ ಮಾಡಿದೆ.

Advertisement

ಕಳೆದ ಕೆಲವು ದಿನಗಳಿಂದ ದೆಹಲಿಯ ಭಾರೀ ಮಳೆಯ ನಂತರ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯ ಒದ್ದೆಯಾದ ಮೈದಾನದಿಂದಾಗಿ ಟಾಸ್ ವಿಳಂಬವಾಯಿತು.

ಇದನ್ನೂ ಓದಿ : ಪಾಕಿಸ್ಥಾನ ಉತ್ತಮ ತಂಡ ಆದರೆ…; ಸ್ಪಿನ್ನರ್ ಚಹಾಲ್ ದೊಡ್ಡ ಹೇಳಿಕೆ

ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.27.1 ಓವರ್ ಗಳಲ್ಲಿ ಅಗ್ಗದ 99 ರನ್ ಗಳಿಗೆ ಎಲ್ಲಾ ವಿಕೆಟ್ ಗಳನ್ನೂ ಕಬಳಿಸಿತು. ಕುಲದೀಪ್ ಯಾದವ್ ಬಿಗಿ ದಾಳಿ ನಡೆಸಿ 4.1 ಓವರ್ ಗಳಲ್ಲಿ 1 ಮೇಡನ್ ಸಹಿತ 4 ವಿಕೆಟ್ ಕಿತ್ತರು. ವಾಷಿಂಗ್ಟನ್ ಸುಂದರ್, ಸಿರಾಜ್, ಶಾಬಾಜ್‌ ಅಹ್ಮದ್‌ ತಲಾ 2 ವಿಕೆಟ್ ಕಿತ್ತು ಗಮನ ಸೆಳೆದರು. ಆಫ್ರಿಕಾ ಪರ ಹೆನ್ರಿಚ್‌ ಕ್ಲಾಸೆನ್‌ ಗರಿಷ್ಠ 34 ರನ್ ಗಳಿಸಿದರು. ಜನ್ನೆಮಾನ್‌ ಮಾಲನ್‌ 15, ಮಾರ್ಕೊ ಜಾನ್ಸೆನ್‌ 14 ರನ್ ಹೊರತು ಪಡಿಸಿ ಉಳಿದ ಯಾವ ಆಟಗಾರರೂ ಒಂದಂಕಿ ದಾಟಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next