ಪುತ್ತೂರು : ಭರತನಾಟ್ಯದ ಕೆಲವು ಪರಿಕಲ್ಪನೆಗಳನ್ನು ಇಟ್ಟುಕೊಂಡು ಎರಡು ಕೈಗಳಲ್ಲಿ ವಿಭಿನ್ನ ತಾಳ ಪ್ರಯೋಗ ಮಾಡಿರುವ ವಿದ್ವಾನ್ ಮಂಜುನಾಥ್ ಅವರ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ.
ಇದನ್ನೂ ಓದಿ : ಸಾರ್ವಜನಿಕ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಲು ಕ್ರಮ: ಡಾ.ಸುಧಾಕರ್
ಭರತನಾಟ್ಯದ ಕೆಲವು ಪರಿಕಲ್ಪನೆಗಳನ್ನು ಇಟ್ಟುಕೊಂಡು ಮಾಡಿರುವ, ಎರಡು ಕೈಗಳಲ್ಲಿ ವಿಭಿನ್ನ ತಾಳ ಪ್ರಯೋಗ ಪ್ರತಿಷ್ಠಿತ ” ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ” ನಲ್ಲಿ ದಾಖಲೆ ಆಗಿದ್ದು, 23 ನಿಮಿಷ, 52 ಸೆಕೆಂಡುಗಳಲ್ಲಿ 20 ವಿಭಿನ್ನ ರೀತಿಯ ದ್ವಿತಾಳ ಪ್ರಕ್ರಿಯೆಯಾಗಿದ್ದು, ಇಡೀ ಭಾರತದಲ್ಲೇ ದ್ವಿತಾಳ ಪ್ರಯೋಗದ ಪ್ರಪ್ರಥಮ ದಾಖಲೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಜುನಾಥ್, ಈ ಸಾಧನೆಯ ಹಿಂದಿನ ಶಕ್ತಿಯಾದ ನನ್ನ ಗುರುಗಳಿಗೆ ನಾನು ಎಂದಿಗೂ ಕೃತಜ್ಞನಾಗಿರುತ್ತೇನೆ. ಸಾಧನೆಗೆ ಬೆನ್ನೆಲುಬಾಗಿ ಇದ್ದ ಎಲ್ಲರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಬಿಎಸ್ ವೈ ನೇತೃತ್ವದಲ್ಲಿ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 56ನೇ ಸಭೆ.!