Advertisement

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಸೇರಿದ ಹಾಲುಗೆನ್ನೆಯ ಕಂದ

01:03 PM Oct 28, 2022 | Team Udayavani |

ಹುಬ್ಬಳ್ಳಿ: ಜ್ಞಾಪಕ ಶಕ್ತಿಯಿಂದಾಗಿ 1 ವರ್ಷ 10 ತಿಂಗಳ ಮಗುವೊಂದು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಸೇರ್ಪಡೆಯಾಗಿದೆ. ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಬುಡರಕಟ್ಟಿಯ ಆರ್ನಾ ಪಾಟೀಲ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದಾಳೆ.

Advertisement

ತರಕಾರಿ, ಹಣ್ಣು, ಪ್ರಾಣಿಗಳ ಹೆಸರು, ಕನ್ನಡ ಹಾಗೂ ಇಂಗ್ಲಿಷ್‌ ವರ್ಣಮಾಲೆ ಗುರುತಿಸುವುದು ಹಾಗೂ ಹೇಳುತ್ತಾಳೆ. ಇನ್ನೂ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳ ಹೆಸರು ಹಾಗೂ ಗುರುತಿಸುತ್ತಾಳೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಗುವಿನ ತಂದೆ ಸಿದ್ರಾಮಗೌಡ ಪಾಟೀಲ, ಅವಳ ಮೇಲೆ ಯಾವುದೇ ಒತ್ತಡ ಹಾಕದೆ ಅವಳ ಇಷ್ಟಕ್ಕೆ ಬಿಟ್ಟಿದ್ದೇವೆ. ಅವಳ ಜ್ಞಾಪಕ ಶಕ್ತಿ ಕುರಿತು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ಗೆ ತಿಳಿಸಿದಾಗ ಸಂಪೂರ್ಣ ವಿಡಿಯೋ ಮಾಡಿ ಕಳುಹಿಸಲು ತಿಳಿಸಿದ್ದರು. ಅದರಂತೆ ಕಳುಹಿಸಿದ್ದೆವು ಎಂದರು.

ತಾಯಿ ವಿದ್ಯಾಶ್ರೀ ಪಾಟೀಲ ಮಾತನಾಡಿ, ಮನೆಕೆಲಸ ನಂತರ ಮಗಳಿಗೆ ವಸ್ತುಗಳನ್ನು, ಪ್ರಾಣಿಗಳನ್ನು ಕಣ್ಣಿಗೆ ಕಾಣುವ ವಸ್ತುಗಳ ಬಗ್ಗೆ ಹೇಳಿ ಅವಳಿಂದ ಹೇಳಿಸುವ ಪರಿಪಾಠ ರೂಢಿಸಿಕೊಂಡಿದ್ದೆ. ಒಂದೆರಡು ಬಾರಿ ಹೇಳಿದ್ದನ್ನು ನೆನಪಿನಲ್ಲಿಟ್ಟುಕೊಂಡು ಆಗಾಗ ಹೇಳುತ್ತಿರುವುದು ಅಚ್ಚರಿ ಎನ್ನಿಸಿತು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next