Advertisement

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

02:10 PM Nov 25, 2024 | Team Udayavani |

ಬೆಳ್ತಂಗಡಿ: ಚತುರ್ದಾನ ಪರಂಪರೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತಮ್ಮ 76 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ನೇಮಕವಾಗಿದ್ದಾರೆ.

Advertisement

ಓರ್ವ ವ್ಯಕ್ತಿ ಕಳೆದ 50 ವರ್ಷಗಳಿಂದ  ಅತೀ ಹೆಚ್ಚು ಪಾರಂಪರಿಕ, ಸಾಂಸ್ಕೃತಿಕ ವಸ್ತುಗಳ ಸಂಗ್ರಹದ ಜತೆಗೆ 7500 ತಾಳೆ ಗರಿ ಹಸ್ತಪ್ರತಿ, 21,000 ಕಲಾ ಪ್ರಕಾರ, 25,000 ಅತೀ ಹಳೇಯ ಮತ್ತು ಅಪರೂಪದ ಪುಸ್ತಕಗಳು, 100 ವಿಂಟೇಜ್ ವಾಹನಗಳ ಸಂಗ್ರಹವು ಬೆಳ್ತಂಗಡಿ ಮಂಜೂಷ ಸಂಗ್ರಹಾಲಯದಲ್ಲಿರುವ ಅಪರೂಪದ ವಸ್ತುಗಳನ್ನು ಪರಿಗಣಿಸಿ ನ.25 ರಂದು ಹುಟ್ಟುಹಬ್ಬದ ದಿನದಂದು ಈ ಪ್ರಶಸ್ತಿಯನ್ನು ಹಸ್ತಾಂತರಿಸಲಾಗಿದೆ.

ಡಾ.ಹೆಗ್ಗಡೆ ಹುಟ್ಟುಹಬ್ಬದಂದು ರಾಜ್ಯಾದ್ಯಂತ ಗಣ್ಯರು, ಅಭಿಮಾನಿಗಳು ಶುಭಹಾರೈಸಿದರು. ನ.26 ರಿಂದ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಆರಂಭಗೊಳ್ಳಲಿದ್ದು ಕ್ಷೇತ್ರದಲ್ಲಿ ಸಂಭ್ರಮ ಸಡಗರ ಮನೆಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next