ಬೆಂಗಳೂರು: ಚಿಕ್ಕ ವಯಸ್ಸಿನಲ್ಲೇ ಕವಿತೆಗಳನ್ನು ಬರೆಯುವ ಮೂಲಕ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಪ್ರತಿಷ್ಠಿತ “ಇಂಡಿಯಾ
ಬುಕ್ ಆಫ್ ರೆಕಾರ್ಡ್’ ದಾಖಲೆ ಮುಡಿಗೇರಿಸಿಕೊಂಡಿದ್ದಾಳೆ. ಜತೆಗೆ, ಏಷ್ಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಗ್ರ್ಯಾಂಡ್ ಮಾಸ್ಟರ್ ಎಂಬ ದಾಖಲೆಗೆ ಸೇರ್ಪಡೆಯಾಗಿದ್ದಾಳೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ನೀಡುವ ಪ್ರಶಸ್ತಿಯನ್ನು ನಗರದ ಬಿಷಪ್ ಕಾಟನ್ ಗ ರ್ಲ್ಸ್ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಅಮನ
ತನ್ನದಾಗಿಸಿಕೊಂಡಿದ್ದಾಳೆ. ಆ ಮೂಲಕ ಅತೀ ಚಿಕ್ಕ ವಯಸ್ಸಿನಲ್ಲೇ ಅತ್ಯಂತ ಕಿರಿಯ ಕವಯಿತ್ರಿ ಎಂಬ ಹೆಗ್ಗಳಿಕೆ ಪಡೆದಿದ್ದಾಳೆ.
12 ವರ್ಷದ ಈ ವಿದ್ಯಾರ್ಥಿನಿಯ 61ಕ ವನಗಳನ್ನು ಒಳಗೊಂಡ ಪುಸ್ತಕ ಈಗಾಗಲೇ ಪ್ರಕಟಿಸಲಾಗಿದೆ. ಸಪ್ನಾ ಬುಕ್ ಹೌಸ್‌ನಿಂದ 2020ರ ನವೆಂಬರ್‌ನಲ್ಲಿ “ಎಕೋಸ್ ಆಫ್ ಸೋಲ್ಫುಲ್ ಪದ್ಯಗಳು’ ಎಂಬ ಶೀರ್ಷಿಕೆಯಡಿ ಈ ಪುಸ್ತಕ ಪ್ರಕಟವಾಗಿತ್ತು. ಬಳಿಕ ಜುಲೈ 26 (2021)ರಲ್ಲಿ ಈಕೆ, ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಅತ್ಯಂತ ಕಿರಿಯ ಕವಿಯತ್ರಿ ಹಾಗೂ ಏಷ್ಯಾ ಬುಕ್ ಆಪ್ ರೆಕಾರ್ಡ್‌ನಲ್ಲಿ ಗ್ರ್ಯಾಂಡ್ ಮಾಸ್ಟರ್ ಎಂಬ ದಾಖಲೆ ಮಾಡಿದ್ದಾಳೆ ಎಂದು ಅಮನಳ ತಾಯಿ ಡಾ.ಟಿ.ಎಸ್. ಲತಾ ತಿಳಿಸಿದ್ದಾರೆ.
ಇದನ್ನೂ ಓದಿ:ಕನ್ನಡದಲ್ಲಿ ತೆರೆ ಕಾಣಲಿದೆ ಹಾಲಿವುಡ್ ‘ಶಾಂಗ್-ಚಿ’ ಸಿನಿಮಾ
ಅಮನ ಇಲ್ಲಿಯವರೆಗೆ 275ಕ್ಕೂ ಹೆಚ್ಚು ಕವಿತೆಗಳನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆದಿದ್ದಾಳೆ. ಅವಳ ಎರಡನೇ ಪುಸ್ತಕ ಪ್ರಕಟವಾಗುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೇ, ಅಮನಳ ಅನೇಕ ಕವಿತೆಗಳು ಪತ್ರಿಕೆ ಮತ್ತು ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಬಿಷಪ್ ಕಾಟನ್ ಗರ್ಲ್ಸ್ ಶಾಲೆಯ ಶಿಕ್ಷಕ ರು ಹರ್ಷ ವ್ಯಕ್ತಪಡಿಸಿದ್ದಾರೆ.