Advertisement
ನಾಯಕತ್ವ ಪ್ರಶ್ನಾರ್ಹ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದ ನಾಯಕ ಸಂಜಯ್ ರಾವತ್ ಮಾತನಾಡಿ ಕಾಂಗ್ರೆಸ್‌ಗಿಂತ ಹೊರತಾಗಿರುವ ಪಕ್ಷದ ನಾಯಕರು ಮೈತ್ರಿಕೂಟಕ್ಕೆ ನಾಯಕರಾಗುವುದಿದ್ದರೆ ಅದಕ್ಕೆ ನಮ್ಮ ಬೆಂಬಲ ಇದೆ. ಆ ಬಗ್ಗೆ ಚರ್ಚೆಗೆ ಸಿದ್ಧ. ಈಗಿನ ನಾಯಕತ್ವ ಪ್ರಶ್ನಾರ್ಹವಾಗಿದೆ’ ಎಂದಿದ್ದಾರೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಎಂವಿಎ ಸೋಲಿನ ಬಳಿಕ ಇಂಡಿಯಾ ಮೈತ್ರಿಕೂಟಕ್ಕೆ ನಾಯಕಿಯಾಗುವ ಬಯಕೆಯನ್ನು ಮಮತಾ ವ್ಯಕ್ತಪಡಿಸಿದ್ದರು. ಆ ಬಳಿಕ ಮೈತ್ರಿಯೊಳಗೆ ಅವರಿಗೆ ಬೆಂಬಲ ಹೆಚ್ಚಾಗಿದೆ. ಮೊದಲು ಸಮಾಜವಾದಿ ಪಕ್ಷ, ಅನಂತರ ಶಿವಸೇನೆ (ಉದ್ಧವ್ ಬಣ), ಎನ್‌ಸಿಪಿ (ಶರದ್ ಪವಾರ್ ಬಣ) ಮಮತಾಗೆ ಬೆಂಬಲ ತೋರಿದ್ದವು. ಅಚ್ಚರಿಯೆಂದರೆ ಲೋಕಸಭಾ ಚುನಾವಣೆವರೆಗೆ ಬಿಜೆಪಿ ಗೆಳೆಯನಾಗಿಯೇ ಇದ್ದ ಜಗನ್ ಮೋಹನ್ ರೆಡ್ಡಿ ನಾಯಕತ್ವದ ವೈಎಸ್‌ಆರ್‌ಸಿಪಿ ಕೂಡ ಇಂಡಿಯಾ ಕೂಟ ಸೇರಿಕೊಂಡು, ಮಮತಾ ನಾಯಕತ್ವವನ್ನು ಬೆಂಬಲಿಸಿದ್ದಾರೆ.