Advertisement

INDIA bloc ಜಾತ್ಯತೀತತೆಯನ್ನು ಜೋಕ್ ಮಾಡುತ್ತಿದೆ: ಮಾಜಿ ಪ್ರಧಾನಿ ದೇವೇಗೌಡ

07:09 PM Mar 09, 2024 | Team Udayavani |

ಬೆಂಗಳೂರು: ಇಂಡಿಯಾ ಮೈತ್ರಿಕೂಟವು ಜಾತ್ಯತೀತತೆಯನ್ನು ಹಾಸ್ಯ ಮಾಡಿದ ಗುಂಪಾಗಿದೆ ಎಂದು ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಶನಿವಾರ ಹೇಳಿಕೆ ನೀಡಿದ್ದಾರೆ.

Advertisement

ಇಂಡಿಯಾ ಮೈತ್ರಿಕೂಟದ ಮೇಲಿನ ತೀಕ್ಷ್ಣ ವಾಗ್ದಾಳಿಯಲ್ಲಿ, ”ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಟಿಎಂಸಿ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರೈಲ್ವೆ ಸಚಿವರಾಗಿರಿಲಿಲ್ಲವೇ? ಅದೇ ರೀತಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ತಂದೆ ಮತ್ತು ಮಾಜಿ ಸಿಎಂ ಎಂ. ಕರುಣಾನಿಧಿ ಅವರು ಆರು ವರ್ಷಗಳ ಕಾಲ ಬಿಜೆಪಿಯ ಮೈತ್ರಿ ಕೂಟದಲ್ಲಿದ್ದರು. ಅವರ ಅಳಿಯ ಅಂದಿನ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದರು.ಈಗ ಟಿಎಂಸಿ ಮತ್ತು ಡಿಎಂಕೆ ಇಂಡಿಯಾ ಮೈತ್ರಿಕೂಟದ ಭಾಗವಾಗಿಲ್ಲವೇ ” ಎಂದು ಪ್ರಶ್ನಿಸಿದರು.

“ನಾವು ಹಲವಾರು ನಿದರ್ಶನಗಳನ್ನು ಉಲ್ಲೇಖಿಸಬಹುದು. ಈ ದೇಶದಲ್ಲಿ ಜಾತ್ಯತೀತತೆ ಎಂದು ಕರೆಯಲ್ಪಡುವ, ಯಾರಾದರೂ ಅದರ ಬಗ್ಗೆ ಮಾತನಾಡಿದರೆ, ಜನರು ಅದನ್ನು ತಮಾಷೆ ಎಂದು ಹೇಳುತ್ತಾರೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಕೈಜೋಡಿಸಿದ್ದಾರೆ. ಈ ಬೆಳವಣಿಗೆಗಳು ಜಾತ್ಯತೀತತೆಯ ನಿಜವಾದ ಅರ್ಥಕ್ಕೆ ಸರಿಹೊಂದುವುದಿಲ್ಲ ಎಂದು ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅನುಭವದ ಮಾತುಗಳನ್ನಾಡಿದರು.

ಜೆಡಿಎಸ್ ಪಕ್ಷ ಕೋಮುವಾದಿ ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂಬ ಕಾಂಗ್ರೆಸ್‌ನ ಆರೋಪದ ಕುರಿತು ಕಿಡಿ ಕಾರಿ, ಮಾಜಿ ಪ್ರಧಾನಿ, ಹಳೆಯ ಪಕ್ಷ ಎಷ್ಟು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮಾತ್ರ ಎಂದು ವ್ಯಂಗ್ಯವಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿ, ”ಮೋದಿ ಅವರು ವಾಜಪೇಯಿಗಿಂತ ಭಿನ್ನ. ವಾಜಪೇಯಿ ಅವರ ನಾಯಕತ್ವದಲ್ಲಿ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ 180 ಕ್ಕಿಂತ ಹೆಚ್ಚು ಸ್ಥಾನಗಳನ್ನು ದಾಟಲು ಸಾಧ್ಯವಾಗಲಿಲ್ಲ, ಆದರೆ ಮೋದಿ 282 ಸ್ಥಾನಗಳನ್ನು ಪಡೆಯಿತು. ಅವರ ಮೊದಲ ಅವಧಿಯಲ್ಲಿ ಎನ್ ಡಿಎ ಪಾಲುದಾರರು 350 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿತು. ಈಗ ಅವರು ಮೈತ್ರಿಯೊಂದಿಗೆ 400 ಸ್ಥಾನಗಳನ್ನು ದಾಟುವ ಗುರಿ ಹೊಂದಿದ್ದಾರೆ. ಮೋದಿಯವರ ನಾಯಕತ್ವವು ಭಾರತದಲ್ಲಿ ಮಾತ್ರವಲ್ಲದೆ ಇತರ ದೇಶಗಳಲ್ಲಿಯೂ ಗುರುತಿಸಲ್ಪಟ್ಟಿದೆ” ಎಂದರು.

Advertisement

“ಭಾರತದಲ್ಲಾಗಲಿ ಅಥವಾ ಹೊರಗಾಗಲಿ ಇಂದಿನ ವಾತಾವರಣವು ಮೋದಿಯವರಿಗೆ ಮನ್ನಣೆಯನ್ನು ನೀಡಿದೆ. ವಿರೋಧ ಪಕ್ಷಗಳು ಯಾವುದೇ ನಿಲುವು ಹೊಂದಿಲ್ಲ ಮತ್ತು ಸಂಬಂಧವಿಲ್ಲದ ವಿಷಯಗಳನ್ನು ಮಾತನಾಡುತ್ತಾರೆ. ನಾನು ಅವರ ಮೇಲೆ ಕಟುವಾಗಿ ವರ್ತಿಸಲು ಬಯಸುವುದಿಲ್ಲ. ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ” ಎಂದರು.

ಮೋದಿ ಇಂದು ಅತ್ಯಂತ ಎತ್ತರದ ನಾಯಕ ಎಂಬುದನ್ನು ಅರಿತುಕೊಳ್ಳಬೇಕು. ಇದನ್ನು ಜನರು ಒಪ್ಪಿಕೊಳ್ಳಬೇಕು ಎಂದು ವಿಪಕ್ಷಗಳಿಗೆ ಸಲಹೆ ನೀಡಿದರು.

ಬಿಜೆಪಿಯೊಂದಿಗೆ ಸೀಟು ಹಂಚಿಕೆ ಕುರಿತು ಪ್ರತಿಕ್ರಿಯಿಸಿ “ನಾಳೆ ಏನಾಗಲಿದೆ ಎಂದು ನಾನು ಊಹಿಸಲು ಸಾಧ್ಯವಿಲ್ಲ, ಕುಮಾರಸ್ವಾಮಿ ಪಕ್ಷದ ಪ್ರಶ್ನಾತೀತ ನಾಯಕ. ಅವರು ನಿರ್ಧರಿಸಬೇಕು. ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಎಲ್ಲದರ ಬಗ್ಗೆ ಚರ್ಚಿಸುತ್ತಾರೆ ಮತ್ತು ಸರಿಯಾದ ತಿಳುವಳಿಕೆಯೊಂದಿಗೆ ಬರುತ್ತಾರೆ ”ಎಂದರು.

Advertisement

Udayavani is now on Telegram. Click here to join our channel and stay updated with the latest news.

Next