ದುಬೈ: ಗೆಲುವಿನ ಓಟವನ್ನು ಮುಂದುವರಿಸಿರುವ ಹಾಲಿ ಚಾಂಪಿಯನ್ ಭಾರತ ತಂಡ ಅಂಧರ ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ವಿರುದ್ಧ 7 ವಿಕೆಟ್ ಜಯ ಸಾಧಿಸಿದೆ. ಶುಕ್ರವಾರ ನಡೆದ ಲೀಗ್ ಹಂತದ ಪಂದ್ಯದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಗೆಲುವು ಸಾಧಿಸಿತು. ಈ ಮೂಲಕ ನೇಪಾಳ ಮತ್ತು ಬಾಂಗ್ಲಾ ವಿರುದ್ಧ ಗೆಲುವು ಸಾಧಿಸಿ ಆತ್ಮವಿಶ್ವಾಸದಲ್ಲಿದ್ದ ಪಾಕಿಸ್ತಾನ ತಂಡಕ್ಕೆ ಭರ್ಜರಿ ಆಘಾತ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 40 ಓವರ್‌ಗೆ 8 ವಿಕೆಟ್ ಕಳೆದುಕೊಂಡು 282 ರನ್ ಬಾರಿಸಿತ್ತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನುಹತ್ತಿದ ಭಾರತ 34.5 ಓವರ್‌ಗೆ 285 ರನ್ ಬಾರಿಸಿ ಗೆಲುವು ಸಾಧಿಸಿತು.
ದೀಪಕ್, ವೆಂಕಟೇಶ್ ತಲಾ ಅರ್ಧ ಶತಕ: ಶ್ರೀಲಂಕಾ ವಿರುದಟಛಿ ಭರ್ಜರಿ ಶತಕ ಬಾರಿಸಿ ಭಾರತದ ಗೆಲುವಿಗೆ ಕಾರಣವಾಗಿದ್ದ ದೀಪಕ್ ಮಲಿಕ್ ಮತ್ತೂಮ್ಮೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. 71 ಎಸೆತ ಎದುರಿಸಿದ ದೀಪಕ್ ಅಜೇಯ 79 ರನ್ ಬಾರಿಸಿದರು. ಮತ್ತೂಬ್ಬ ಬ್ಯಾಟ್ಸ್‌ಮನ್ ವೆಂಕಟೇಶ್ 55 ಎಸೆತದಲ್ಲಿ 64 ರನ್ ಬಾರಿಸಿದರು. ಅನುಭವಿ ಆಟಗಾರ ಅಜಯ್ ರೆಡ್ಡಿ 34 ಎಸೆತದಲ್ಲಿ 47 ರನ್ ದಾಖಲಿಸಿದರು. ವೆಂಕಟೇಶ್ ಮತ್ತು ಅಜಯ್ ರೆಡ್ಡಿ 4ನೇ ವಿಕೆಟ್‌ಗೆ 106 ರನ್ ಬಾರಿಸಿ ತಂಡವನ್ನು
ಗೆಲುವಿನ ದಡ ಸೇರಿಸಿದರು.
ಭಾರತ ಚುರುಕಿನ ದಾಳಿ: ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಪಾಕಿಸ್ತಾನಕ್ಕೆ ಭಾರತೀಯ ಬೌಲರ್‌ಗಳ ಚುರುಕಿನ ದಾಳಿ ಮತ್ತು ಆಕರ್ಷಕ ಕ್ಷೇತ್ರರಕ್ಷಣೆಯಿಂದ ದೊಡ್ಡ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ. ಆದರೆ 3ನೇ ವಿಕೆಟ್‌ಗೆ ಜತೆಯಾದ ಮೊಹಮ್ಮದ್ ಜಮೀಲ್ ಮತ್ತು ನಾಯಕ ನಿಸಾರ್ ಅಲಿ 137 ರನ್ ಜತೆಯಾಟ ನೀಡಿದರು. ಇದು ಅಂಧರ ವಿಶ್ವಕಪ್‌ನಲ್ಲಿ 3ನೇ ವಿಕೆಟ್‌ಗೆ ದಾಖಲಾದ ಗರಿಷ್ಠ ಮೊತ್ತವಾಗಿದೆ. ಜಮೀಲ್ ಅಜೇಯ 94 ರನ್ ದಾಖಲಿಸಿದರು. ಇದು ಪಾಕಿಸ್ತಾನದ ಪರ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 2014ರಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು ಸೋಲಿಸಿ
ಚಾಂಪಿಯನ್ ಆಗಿತ್ತು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ 40 ಓವರ್‌ಗೆ 282/8 (ಜಮೀಲ್ ಅಜೇಯ 94, ನಿಸರ್ ಅಲಿ 63), ಭಾರತ 34.5 ಓವರ್‌ಗೆ 285/3 (ದೀಪಕ್ ಮಲಿಕ್ ಅಜೇಯ 79, ವೆಂಕಟೇಶ್ 64).