Advertisement

India bans; ಚೀನಾಕ್ಕೆ ಭಾರತದ ಸೆಡ್ಡು: ವಿದೇಶಿ ಕಂಪ್ಯೂಟರ್‌, ಟ್ಯಾಬ್ ಬ್ಯಾನ್‌

11:20 AM Aug 04, 2023 | |

ತಕ್ಷಣದಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗಳು, ಕೆಲ ಶ್ರೇಣಿಯ ಪರ್ಸನಲ್‌ ಕಂಪ್ಯೂಟರ್‌ ಆಮದು ಹಾಗೂ ದೇಶದಲ್ಲಿ ಮಾರಾಟ ನಿಷೇಧಿಸಲಾಗಿದೆ. ಭದ್ರತೆ ದೃಷ್ಟಿಯಿಂದ, ಕಂಪ್ಯೂಟರ್‌ ಹಾಗೂ ಅದಕ್ಕೆ ಸಂಬಂಧಿತ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಲು ಈ ತೀರ್ಮಾನ ನೆರವಾಗಲಿದೆ. ಚೀನಾದ ಉತ್ಪನ್ನಗಳ ದಾಳಿ ನಿಯಂತ್ರಿಸಲು ನಿರ್ಧಾರ ನೆರವಾಗಲಿದೆ.

Advertisement

ಕೇಂದ್ರದ ಆದೇಶವೇನು?
*ಎಚ್‌ಎಸ್‌ಎನ್‌ 8741 ಕೆಟಗರಿ ವ್ಯಾಪ್ತಿಯಲ್ಲಿ ಬರುವ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಕಂಪ್ಯೂಟರ್‌ ಗಳನ್ನು ಆಮದು ಮಾಡಿ ದೇಶದಲ್ಲಿ ಮಾರಾಟ ನಿಷೇಧ.
*ಸರ್ವರ್‌ಗಳು, ಆಲ್‌ ಇನ್‌ ಒನ್‌ ಪರ್ಸನಲ್‌ ಕಂಪ್ಯೂಟರ್‌ಗಳು, ಅಲ್ಟ್ರಾ ಸ್ಮಾಲ್‌ ಕಂಪ್ಯೂಟರ್‌ಗಳ ಮೇಲೆ ನಿರ್ಬಂಧ.

ಪರವಾನಗಿ ಬೇಕು
* ಡೇಟಾ ಪ್ರೊಸೆಸಿಂಗ್‌ ವ್ಯವಸ್ಥೆಗೆ ಇರುವ ಮಷಿನ್‌ ಗಳು, ಮೈಕ್ರೋ ಕಂಪ್ಯೂಟರ್‌ಗಳನ್ನು ತರಿಸಿಕೊಳ್ಳುವುದರ ಮೇಲೆ ನಿಷೇಧ ಇದೆ. ಆದರೆ, ಅದಕ್ಕೆ ಸಂಬಂಧಿಸಿದಂತೆ ಪರವಾನಗಿ ಹೊಂದಿದ್ದರೆ ಆಮದು ಮಾಡಿಕೊಳ್ಳಬಹುದು.

*ಅವುಗಳ ಉದ್ದೇಶ ಈಡೇರಿದ ಬಳಿಕ ಅವುಗಳನ್ನು ನಾಶಪಡಿಸಬೇಕು. ಇಲ್ಲದಿದ್ದರೆ, ಮೂಲ ರಾಷ್ಟ್ರಕ್ಕೆ ವಾಪಸ್‌ ಮಾಡಬೇಕು.

ಭದ್ರತೆಗೆ ಆದ್ಯತೆ
ವಿದೇಶದಿಂದ ಆಮದಾಗುವ ಉತ್ಪನ್ನಗಳು ಖಾಸಗಿ ಮಾಹಿತಿಗೆ ಅಪಾಯ ಒಡ್ಡಬಹುದೆಂಬ ಕಾರಣದಿಂದ ಈ ಕ್ರಮ ಕೈಗೊಳ್ಳ
ಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಭದ್ರತೆಗೆ ಆದ್ಯತೆ ನೀಡುವುದು ಮುಖ್ಯ ಉದ್ದೇಶ ಎನ್ನುತ್ತಾರೆ.

Advertisement

ಇಂಥ ಕ್ರಮವೇಕೆ?
* ಚೀನಾದಲ್ಲಿ ಜೋಡಿಸಿದ ಕಂಪ್ಯೂಟರ್‌, ಟ್ಯಾಬ್ಲೆಟ್‌ಗಳ ಮೇಲೆ ನಿಷೇಧ. ಅವುಗಳನ್ನು ದೇಶದಲ್ಲಿಯೇ ಉತ್ಪಾದಿಸಲು ಇಂಥ ಕ್ರಮ.

*ದೇಶದಲ್ಲಿಯೇ ಉತ್ತಮ ಗುಣಮಟ್ಟದ ಕಂಪ್ಯೂಟರ್‌ ಮತ್ತು ಇತರ ವಸ್ತುಗಳ ಉತ್ಪಾದನೆ ಮಾಡಲು ಉತ್ತೇಜನ.

*ಚೀನಾ, ಕೊರಿಯಾಗಳಲ್ಲಿ ಜೋಡಿಸಿದ ಕಂಪ್ಯೂಟರ್‌ಗಳಿಂದ ದೇಶದ ಭದ್ರತೆಗೆ ಆತಂಕ. ಹೀಗಾಗಿ, ಈ ನಿರ್ಧಾರ ಜಾರಿ

ವಿನಾಯಿತಿಗಳೂ ಇವೆ
*ಬ್ಯಾಗೇಜ್‌ ವ್ಯಾಪ್ತಿಯಲ್ಲಿ ಅಂದರೆ ವೈಯಕ್ತಿಕ ಬಳಕೆಗಾಗಿ ಕಂಪ್ಯೂಟರ್‌, ಟ್ಯಾಬ್ಲೆಟ್‌, ಲ್ಯಾಪ್‌ಟಾಪ್‌ಗಳನ್ನು ವಿದೇಶಗಳಿಂದ ಖರೀದಿ.

*ಸಂಶೋಧನೆ ಮತ್ತು ಅಭಿವೃದ್ಧಿ, ದುರಸ್ತಿ, ಪರೀಕ್ಷೆಗೆ ಒಳಪಡಿಸುವ ವ್ಯಾಪ್ತಿಯಲ್ಲಿ ಒಂದು ಕನ್‌ಸೈನ್‌ಮೆಂಟ್‌ಗೆ 20ರ ಕಂಪ್ಯೂಟರ್‌ಗಳವರೆಗೆ ರಿಯಾಯಿತಿ.

65% ಚೀನಾದಿಂದಲೇ ಕಂಪ್ಯೂಟರ್‌ ಸಂಬಂಧಿತ ವಸ್ತುಗಳ ಆಮದು

ಕೆಲವೊಂದು ಹಾರ್ಡ್‌ವೇರ್‌ಗಳು ದೇಶದ ಜನರ ವೈಯಕ್ತಿಕ ಮಾಹಿತಿಗೆ ಧಕ್ಕೆ ತರುವ ಸಾಧ್ಯತೆಗಳಿವೆ. ಜನರ ಎಲ್ಲ ಹಂತದ ಭದ್ರತೆಗಾಗಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.
●ಸರ್ಕಾರದ ಹಿರಿಯ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next