ನವದೆಹಲಿ:ದೇಶದಲ್ಲಿ ಗೋಧಿ ಬೆಲೆ ಏರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಗೋಧಿ ರಫ್ತು ಮಾಡುವುದನ್ನು ತಕ್ಷಣ ಜಾರಿಗೆ ಬರುವಂತೆ ಭಾರತ ನಿಷೇಧ ಹೇರಿದ್ದು, ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:‘ಡಿಟೆಕ್ಟಿವ್ ತೀಕ್ಷ್ಣ’ : 7 ಭಾಷೆಗಳಲ್ಲಿ ಪ್ರಿಯಾಂಕಾ ಉಪೇಂದ್ರ ನಟನೆಯ 50ನೇ ಚಿತ್ರ
ಏತನ್ಮಧ್ಯೆ ಪ್ರಕಟಣೆ ಹೊರಡಿಸುವ ಮೊದಲು ಅಥವಾ ನಂತರ ಗೋಧಿ ರಪ್ತು ಸಾಗಣೆಗೆ ಪಾವತಿಯಾಗಿರುವ ವಹಿವಾಟಿಗೆ ಅನುಮತಿ ನೀಡಲಾಗುವುದು ಎಂದು ಮೇ 13ರಂದು ಡಿಜಿಎಫ್ ಟಿ (ವಿದೇಶಿ ವ್ಯಾಪಾರದ ಮಹಾ ನಿರ್ದೇಶನಾಲಯ) ಹೊರಡಿಸಿರುವ ಪ್ರಕಟಣೆಯಲ್ಲಿ ಹೇಳಿದೆ.
ಭಾರತದಿಂದ ಗೋಧಿ ರಫ್ತು ವಹಿವಾಟನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ ಎಂದು ಡಿಜಿಎಫ್ ಟಿ ಸ್ಪಷ್ಟಪಡಿಸಿದೆ. ಭಾರತ ಸರ್ಕಾರವು ಇತರ ದೇಶಗಳಿಗೆ ಆಹಾರ ಭದ್ರತೆಯ ಅಗತ್ಯ ಪೂರೈಸಲು ಹಾಗೂ ವಿದೇಶಗಳ ಕೋರಿಕೆ ನೆಲೆಯಲ್ಲಿ ಅನುಮತಿ ನೀಡಲಾಗುವುದು ಎಂದು ವಿವರಿಸಿದೆ.
ಡಿಜಿಎಫ್ ಟಿ ಹೊರಡಿಸಿರುವ ಮತ್ತೊಂದು ಅಧಿಸೂಚನೆಯಲ್ಲಿ ಈರುಳ್ಳಿ ಬೀಜಗಳ ರಫ್ತುಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಕೆ ಮಾಡುವುದಾಗಿ ಘೋಷಿಸಿದೆ. ಈರುಳ್ಳಿ ಬೀಜಗಳ ರಫ್ತು ನೀತಿಯನ್ನು ನಿರ್ಬಂಧಿತ ಕೆಟಗರಿಯಲ್ಲಿ ಈ ಮೊದಲು ಸೇರಿಸಲಾಗಿತ್ತು.