ಕೋಲ್ಕತ್ತಾ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು ವೈಟ್ ವಾಶ್ ಮಾಡಿದ ಭಾರತ ತಂಡ ಟಿ20 ರಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದೆ. ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಮೂರೂ ಪಂದ್ಯಗಳನ್ನು ರೋಹಿತ್ ಪಡೆ ಗೆದ್ದು ಬೀಗಿದೆ.
ಈ ಸರಣಿ ಜಯದೊಂದಿಗೆ ಭಾರತ ತಂಡ ಟಿ20 ಕ್ರಿಕೆಟ್ ರಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದೆ. 2016ರ ಫೆಬ್ರವರಿ ಬಳಿಕ ಇದೇ ಮೊದಲ ಬಾರಿಗೆ ಭಾರತ ತಂಡ ಟಿ20 ಕ್ರಿಕೆಟ್ ನಲ್ಲಿ ಅಗ್ರಸ್ಥಾನಕ್ಕೇರಿದೆ.
ಭಾರತ ತಂಡದ 269 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿದೆ. ಇಂಗ್ಲೆಂಡ್ ಕೂಡಾ 269 ಅಂಕ ಹೊಂದಿದೆ. ಶ್ರೇಯಾಂಕದ ಅವಧಿಯಲ್ಲಿ 39 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇಂಗ್ಲೆಂಡ್ ಮತ್ತು ಭಾರತ ಎರಡೂ ಒಂದೇ ರೇಟಿಂಗ್ ಹೊಂದಿದ್ದರೆ, ಭಾರತವು ಒಟ್ಟು 10,484 ಅಂಕಗಳನ್ನು ಹೊಂದಿದೆ. ಇಂಗ್ಲೆಂಡ್‌ನ 10,474 ಅಂಕ ಹೊಂದಿದೆ. ಹೀಗಾಗಿ ಭಾರತಕ್ಕೆ ಅಗ್ರಸ್ಥಾನಕ್ಕೆ ಲಭ್ಯವಾಗಿದೆ.
ಇದನ್ನೂ ಓದಿ:ಅಪರೂಪದ ಮದುವೆ: 38 ಇಂಚು ಎತ್ತರದ ವರನಿಗೆ, 5.3 ಅಡಿ ಎತ್ತರದ ವಧು: ಕೂಡಿಬಂದ ಕಂಕಣ ಭಾಗ್ಯ
ಈತನ್ಮಧ್ಯೆ, ರೋಹಿತ್ ಶರ್ಮಾ ಅವರು ಟಿ20 ಕ್ರಿಕೆಟ್‌ನಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಸರಣಿ ವೈಟ್‌ವಾಶ್‌ಗಳಿಗೆ ತಂಡವನ್ನು ಮುನ್ನಡೆಸಿದ ಮೊದಲ ಭಾರತೀಯ ನಾಯಕರಾದರು. ರೋಹಿತ್ ಈ ಹಿಂದೆ ಶ್ರೀಲಂಕಾ (2017), ವೆಸ್ಟ್ ಇಂಡೀಸ್ (2018), ನ್ಯೂಜಿಲೆಂಡ್ (2021) ವಿರುದ್ಧ ನಾಯಕತ್ವ ವಹಿಸಿ ಕ್ಲೀನ್ ಸ್ವೀಪ್ ಮಾಡಿದ್ದರು. ಅವರು ಪಾಕಿಸ್ತಾನದ ಸರ್ಫರಾಜ್ ಅಹ್ಮದ್ (5), ಮತ್ತು ಅಫ್ಘಾನಿಸ್ತಾನದ ಅಸ್ಗರ್ ಅಫ್ಘಾನ್ (4) ನಂತರ ಈ ಸಾಧನೆ ಮಾಡಿದ ಮೂರನೇ ನಾಯಕರಾಗಿದ್ದಾರೆ.
ಟಿ20 ರಾಂಕಿಂಗ್
- ಭಾರತ – 269
- ಇಂಗ್ಲೆಂಡ್ – 269
- ಪಾಕಿಸ್ತಾನ – 266
- ನ್ಯೂಜಿಲೆಂಡ್ – 255
- ದಕ್ಷಿಣ ಆಫ್ರಿಕಾ – 253
- ಆಸ್ಟ್ರೇಲಿಯಾ – 249
- ವೆಸ್ಟ್ ಇಂಡೀಸ್ – 235
- ಅಫ್ಘಾನಿಸ್ತಾನ – 232
- ಶ್ರೀಲಂಕಾ – 231
- ಬಾಂಗ್ಲಾದೇಶ – 231