Advertisement
ಇದೇ ವೇಳೆ ಐಪಿಎಲ್ ಮುಗಿಸಿ ಆಗಮಿಸಲಿರುವ ಭಾರತ ಮತ್ತು ಆಸ್ಟ್ರೇಲಿಯ ತಂಡದ ಆಟಗಾರರು ಸಿಡ್ನಿಯಲ್ಲೇ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಯುಎಇಯಿಂದ ನೇರವಾಗಿ ಬ್ರಿಸ್ಬೇನ್‌ಗೆ ಆಗಮಿಸಿ, 72 ಗಂಟೆಗಳ ಬಳಿಕ ಸಿಡ್ನಿಗೆ ಬರುವಂತೆ ಇವರಿಗೆ ಸೂಚಿಸಲಾಗಿತ್ತು. ಆದರೆ ಇದರಲ್ಲೀಗ ಬದಲಾವಣೆ ಮಾಡಲಾಗಿದ್ದು, ಕ್ರಿಕೆಟಿಗರೆಲ್ಲ ನೇರವಾಗಿ ಸಿಡ್ನಿಗೆ ಆಗಮಿಸಲಿದ್ದಾರೆ. ಐಪಿಎಲ್ ಆಡದ ಚೇತೇಶ್ವರ್ ಪೂಜಾರ, ಹನುಮ ವಿಹಾರಿ ಮೊದಲಾದ ಕ್ರಿಕೆಟಿಗರು ನೇರವಾಗಿ ಯುಎಇಗೆ ಹೋಗಿ, ಅಲ್ಲಿಯೇ ಕ್ವಾರಂಟೈನ್ ಪೂರೈಸಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.
Related Articles
Advertisement
32 ಸದಸ್ಯರ ಜಂಬೋ ತಂಡ
ಈ ಸರಣಿಗಾಗಿ ಭಾರತ 32 ಆಟಗಾರರ ಬೃಹತ್ ತಂಡವೊಂದನ್ನು ಪ್ರಕಟಿಸುವ ಸಾಧ್ಯತೆ ಇದೆ. ಕೋವಿಡ್ ಮುನ್ನೆಚ್ಚರಿಕೆಯ ಕಾರಣ ತಂಡದಲ್ಲಿ ಆಗಾಗ ಬದಲಾವಣೆ ಮಾಡಿಕೊಳ್ಳಲು ಅಸಾಧ್ಯವಾಗಿರುವುದರಿಂದ ಒಮ್ಮೆಲೇ ಅಧಿಕ ಸಂಖ್ಯೆಯ ಆಟಗಾರರನ್ನು ಆರಿಸುವುದು ಬಿಸಿಸಿಐ ಯೋಜನೆ. ಈ ವಾರಾಂತ್ಯದೊಳಗೆ ತಂಡ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ನ. 27ರಿಂದ ಸರಣಿ ಆರಂಭ
ಭಾರತ ಏಕದಿನ ಸರಣಿಯೊಂದಿಗೆ ಆಸ್ಟ್ರೇಲಿಯ ಪ್ರವಾಸವನ್ನು ಆರಂಭಿಸಲಿದೆ. ಮೊದಲೆರಡು ಪಂದ್ಯಗಳನ್ನು ನ. 27 ಮತ್ತು 29ರಂದು “ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ಆಡಲಾಗುವುದು. ಕ್ಯಾನ್‌ಬೆರಾದಲ್ಲಿ ಅಂತಿಮ ಏಕದಿನ (ಡಿ.1) ಮತ್ತು ಮೊದಲ ಟಿ20 ಪಂದ್ಯ (ಡಿ. 4) ನಡೆಯಲಿದೆ. ಬಳಿಕ ಎರಡೂ ತಂಡಗಳು ಸಿಡ್ನಿಗೆ ವಾಪಸಾಗಿ ಉಳಿದೆರಡು ಟಿ20 ಪಂದ್ಯಗಳಲ್ಲಿ ಪಾಲ್ಗೊಳ್ಳಲಿವೆ (ಡಿ. 6 ಮತ್ತು ಡಿ. 8)