Advertisement
ಪ್ರಪಂಚದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾದ ಕೇನ್ಸ್ ಫಿಲ್ಮ್ ಫೆಸ್ಟ್ ವಲ್ ನಲ್ಲಿ ವಿಶ್ವದ ಅನೇಕ ಸಿನಿ ಸೆಲೆಬ್ರಿಟಿಗಳು ಭಾಗಿಯಾಗುತ್ತಾರೆ. ಭಾರತದ ಸ್ಟಾರ್ ಗಳಾದ ಐಶ್ವರ್ಯಾ ರೈ ಬಚ್ಚನ್, ಅದಿತಿ ರಾವ್ ಹೈದರಿ, ಶೋಭಿತಾ ಧೂಲಿಪಾಲ,ಕಿಯಾರಾ ಅಡ್ವಾಣಿ ಕೇನ್ಸ್ ನಲ್ಲಿ ಭಾಗವಹಿಸಿದ್ದಾರೆ.
ಪಾಯಲ್ ಕಪಾಡಿಯಾ ನಿರ್ದೇಶಿಸಿದ ಈ ಸಿನಿಮಾವೂ ಸುಮಾರು 30 ವರ್ಷಗಳ ಬಳಿಕ ಕಾನ್ ಚಲನಚಿತ್ರೋತ್ಸವದಲ್ಲಿ ಪಾಮ್ ಡಿ’ಓರ್( ಕಾನ್ ಫೆಸ್ಟ್ ವಲ್ – ಅತ್ಯುನ್ನತ ಪ್ರಶಸ್ತಿ) ಪ್ರಶಸ್ತಿಗಾಗಿ ಸ್ಪರ್ಧಿಸುವ ಮೊದಲ ಭಾರತೀಯ ಚಲನಚಿತ್ರ ಇದಾಗಿರಲಿದೆ.
Related Articles
Advertisement
ಸಂತೋಷ್:( ನಿರ್ದೇಶನ – ಸಂಧ್ಯಾ ಸೂರಿ): ಬ್ರಿಟಿಷ್ – ಇಂಡಿಯನ್ ನಿರ್ದೇಶಕಿ ಸಂಧ್ಯಾ ಸೂರಿ ಅವರ ಈ ಸಿನಿಮಾ ಕೇನ್ಸ್ ಫೆಸ್ಟಿ ವಲ್ ನ ಉತ್ಸವದ ಅನ್ ಸರ್ಟೈನ್ ರಿಗಾರ್ಡ್ ವಿಭಾಗದಲ್ಲಿ ಪ್ರದರ್ಶನವಾಗಲಿದೆ. ಸಹಾನಾ ಗೋಸ್ವಾಮಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದ ಕಥೆ ಉತ್ತರ ಭಾರತದ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತದೆ. ವಿಧವೆ ಮಹಿಳೆ ತನ್ನ ಪತಿ ಕಾನ್ ಸ್ಟೇಬಲ್ ಹುದ್ದೆಯನ್ನು ವಹಿಸಿಕೊಂಡಾಗ ಏನೆಲ್ಲ ಆಗುತ್ತದೆ ಎನ್ನುವುದನ್ನು ಹೇಳಲಾಗಿದೆ.
‘ಸನ್‌ಫ್ಲವರ್ಸ್ ವೆರ್ ದಿ ಫಸ್ಟ್ ಒನ್ಸ್ ಟು ನೋ'( ಕನ್ನಡ ಕಿರುಚಿತ್ರ – ನಿರ್ದೇಶನ – ಚಿದಾನಂದ್ ನಾಯಕ್:
ಕೇನ್ಸ್ ಫಿಲ್ಮ್ ಫೆಸ್ಟಿ ವಲ್ ನಲ್ಲಿ ಕನ್ನಡಿಗರು ಖುಷಿಯ ಪಡುವ ವಿಚಾರವೆಂದರೆ ಕನ್ನಡದ ಕಿರುಚಿತ್ರವೊಂದು ಪ್ರದರ್ಶನ ಆಗಲಿದೆ. 15 ನಿಮಿಷಗಳ ಈ ಕಿರುಚಿತ್ರ ಸಿನೆಫೊಂಡೇಶನ್ ಅಥವಾ ಲಾ ಸಿನೆಫ್ ವಿಭಾಗದಲ್ಲಿ ಪ್ರದರ್ಶನ ಕಾಣಲಿದೆ. ಈ ಕಿರುಚಿತ್ರವನ್ನು FTII ವಿದ್ಯಾರ್ಥಿಯಾಗಿರುವ ಚಿದಾನಂದ್ ನಾಯಕ್ ನಿರ್ದೇಶನ ಮಾಡಿದ್ದಾರೆ.
ಮಂಥನ್( ನಿರ್ದೇಶನ- ಶ್ಯಾಮ್ ಬೆಂಗಾಲ್): 1976 ರಲ್ಲಿ ಶ್ಯಾಮ್ ಬೆನಗಲ್ ನಿರ್ದೇಶನದಲ್ಲಿ ಬಂದ ʼಮಂಥನ್ʼ ಈ ಬಾರಿ ಕೇನ್ಸ್ ಫೆಸ್ಟಿ ವಲ್ ನಲ್ಲಿ ಪ್ರದರ್ಶನ ಕಾಣಲಿದೆ. ಗಿರೀಶ್ ಕಾರ್ನಾಡ್, ಸ್ಮಿತಾ ಪಾಟೀಲ್, ನಾಸಿರುದ್ದೀನ್ ಶಾ ಮತ್ತು ಕುಲಭೂಷಣ್ ಖರಬಂದ ನಟಿಸಿರುವ ಈ ಸಿನಿಮಾ ಕ್ಲಾಸಿಕ್ ವಿಭಾಗದಲ್ಲಿ ಪ್ರದರ್ಶನ ಕಾಣಲಿದೆ.