Advertisement

Test rankings ; ಯಥಾ ಸ್ಥಾನ ಕಾಯ್ದುಕೊಂಡ ಅಶ್ವಿನ್, ಜಡೇಜಾ

07:02 PM Jul 05, 2023 | Team Udayavani |

ಹೊಸದಿಲ್ಲಿ: ಇತ್ತೀಚಿನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಂಬರ್ ಒನ್ ಬೌಲರ್ ಆಗಿ, ನಂಬರ್ ಒನ್ ಆಲ್ ರೌಂಡರ್ ಆಗಿ ರವೀಂದ್ರ ಜಡೇಜಾ ಯಥಾ ಸ್ಥಾನ ಕಾಯ್ದುಕೊಂಡಿದ್ದಾರೆ.

Advertisement

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಜೋ ರೂಟ್ ಅವರನ್ನು ಹಿಂದಿಕ್ಕಿ ಅಗ್ರ ಶ್ರೇಯಾಂಕದ ಬ್ಯಾಟ್ಸ್ ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ. ಇಂಗ್ಲೆಂಡ್ ಆಟಗಾರ ಜೋ ರೂಟ್ 5 ನೇ ಸ್ಥಾನಕ್ಕೆ ಇಳಿದಿದ್ದಾರೆ. ರಿಷಭ್ ಪಂತ್ 10 ನೇ ರ‍್ಯಾಂಕ್ ನಲ್ಲಿದ್ದಾರೆ . ಬೌಲಿಂಗ್ ನಲ್ಲಿ ಜಸ್ಪ್ರೀತ್ ಬುಮ್ರಾ 8 ನೇ, ಜಡೇಜಾ 9 ನೇ ರ‍್ಯಾಂಕ್ ನಲ್ಲಿದ್ದಾರೆ. ಅಶ್ವಿನ್ ಆಲ್ ರೌಂಡರ್ ಆಗಿ 2 ನೇ ಸ್ಥಾನದಲ್ಲಿದ್ದಾರೆ. ಅಕ್ಷರ್ ಪಟೇಲ್ 5 ನೇ ಸ್ಥಾನದಲ್ಲಿದ್ದಾರೆ.

ಬ್ಯಾಟಿಂಗ್ ನಲ್ಲಿ ರೋಹಿತ್ ಶರ್ಮಾ 12 ನೇ ,ವಿರಾಟ್ ಕೊಹ್ಲಿ 14 ನೇ ಸ್ಥಾನದಲ್ಲಿದ್ದಾರೆ. ಚೇತೇಶ್ವರ ಪೂಜಾರ 27, ಅಜಿಂಕ್ಯ ರಹಾನೆ 36 ಮತ್ತು ಶ್ರೇಯಸ್ ಅಯ್ಯರ್ 37 ಮತ್ತು ಜಡೇಜಾ 42 ನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ನಲ್ಲಿ ಮೊಹಮ್ಮದ್ ಶಮಿ 20, ಅಕ್ಷರ್ ಪಟೇಲ್ 31, ಉಮೇಶ್ ಯಾದವ್ 34,ಮೊಹಮ್ಮದ್ ಸಿರಾಜ್ 40 ನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್ ತಂಡವಾಗಿ ಭಾರತ ಆಗ್ರ ಸ್ಥಾನದಲ್ಲಿದ್ದು, ಆ ಬಳಿಕ ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಪಾಕಿಸ್ತಾನ ತಂಡಗಳು ಇವೆ.

Advertisement

Udayavani is now on Telegram. Click here to join our channel and stay updated with the latest news.

Next