ನವದೆಹಲಿ: ಮೂಗಿನ ಮೂಲಕ ಹಾಕುವ ಕೋವಿಡ್ 19 ಲಸಿಕೆ ಬಳಸಲು ಕೇಂದ್ರ ಸರ್ಕಾರ ಶುಕ್ರವಾರ (ಡಿಸೆಂಬರ್ 23) ಅನುಮತಿ ನೀಡಿದ್ದು, ಇದನ್ನು ಭಿನ್ನರೂಪದ ಬೂಸ್ಟರ್ ಆಗಿ ಬಳಸಲಾಗುವುದು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಒಕ್ಕಲಿಗ ಮೀಸಲಾತಿ ವಿಚಾರದ ಬಗ್ಗೆ ಆದಷ್ಟು ಶೀಘ್ರದಲ್ಲಿ ವರದಿ ಸಲ್ಲಿಸಲು ಸೂಚನೆ: ಸಿಎಂ ಬೊಮ್ಮಾಯಿ
ವರದಿಯ ಪ್ರಕಾರ, ನಾಸಲ್ ಲಸಿಕೆ (ಮೂಗಿನ ಮೂಲಕ ಹಾಕುವ ಲಸಿಕೆ)ಯನ್ನು ಇಂದು ಕೋ-ವಿನ್ ಪೋರ್ಟಲ್ ಗೆ ಸೇರಿಸುವ ಸಾಧ್ಯತೆ ಇದೆ ಎಂದು ಹೇಳಿದೆ. ಕೋವಿಡ್ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ 19 ಲಸಿಕಾ ಅಭಿಯಾನದಲ್ಲಿ ನಾಸಲ್ ಲಸಿಕೆಯನ್ನು ಸೇರ್ಪಡೆಗೊಳಿಸಲಾಗುವುದು. ನಾಸಲ್ ಲಸಿಕೆ ಇಂದಿನಿಂದ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದೆ ಎಂದು ವರದಿ ವಿವರಿಸಿದೆ.
ನಾಸಲ್ ಲಸಿಕೆಗೆ ಅನುಮತಿ ನೀಡಿರುವ ಬಗ್ಗೆ ಪ್ರಸಾರ್ ಭಾರತಿ ಖಚಿತಪಡಿಸಿದ್ದು, ಭಾರತ್ ಬಯೋ ಟೆಕ್ ನ ನಾಸಲ್ ಲಸಿಕೆಯನ್ನು ಬಳಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ದೇಶದಲ್ಲಿನ ಕೋವಿಡ್ 19 ಸೋಂಕಿನ ಕುರಿತು ಅವಲೋಕನ ನಡೆಸುವ ನಿಟ್ಟಿನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ಪರೀಕ್ಷೆ ಸೇರಿದಂತೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು.