Advertisement
ಯುದ್ಧಗ್ರಸ್ತ ಅಫ್ಘಾನಿಸ್ಥಾನದಿಂದ ಬರುವ ಎಲ್ಲರಿಗೂ “ಇ-ಎಮರ್ಜೆನ್ಸಿ ಎಕ್ಸ್-ಮಿಸ್ಕ್ ವೀಸಾ’ ಎಂಬ ಹೊಸ ವರ್ಗದ ಎಲೆಕ್ಟ್ರಾನಿಕ್ ವೀಸಾ ಒದಗಿಸಲು ಸರಕಾರ ನಿರ್ಧರಿಸಿದೆ. ಈ ವೀಸಾವನ್ನು ಧರ್ಮಾಧಾರಿತ ಆದ್ಯತೆ ಮೇರೆಗೆ ನೀಡಲಾಗುವುದಿಲ್ಲ. ಎಲ್ಲ ಅಫ್ಘಾನ್ ನಾಗರಿಕರೂ ಅರ್ಜಿ ಸಲ್ಲಿಸಬಹುದು ಎಂದು ಸರಕಾರ ತಿಳಿಸಿದೆ. ಈವರೆಗೆ ಇದ್ದ ನಿಯಮದ ಪ್ರಕಾರ ಅಫ್ಘಾನ್ ನಾಗರಿಕರನ್ನು ಈ ವರ್ಗದ ವೀಸಾದಿಂದ ಹೊರಗಿಡಲಾಗಿತ್ತು. ವೀಸಾಕ್ಕಾಗಿ ಅರ್ಜಿ ಸಲ್ಲಿಸುವ ವ್ಯಕ್ತಿ ಸ್ವತಃ ಅಲ್ಲಿನ ರಾಯಭಾರ ಕಚೇರಿಗೆ ಭೇಟಿ ನೀಡ ಬೇಕಾಗಿತ್ತು. ಆದರೆ ಈಗ ಕಾಬೂಲ್‌ನ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಇ-ವೀಸಾ ಸೌಲಭ್ಯ ಕಲ್ಪಿಸಲು ಸರಕಾರ ನಿರ್ಧರಿಸಿದೆ.
Related Articles
Advertisement
ಮಂಗಳವಾರ ಸಂಜೆ ಪ್ರಧಾನಿ ಮೋದಿ ಸಂಪುಟ ಸಮಿತಿಯೊಂದಿಗೆ ಉನ್ನತ ಸಭೆ ನಡೆಸಿದ್ದಾರೆ. ಅಫ್ಘಾನ್ ಪರಿಸ್ಥಿತಿ ಚರ್ಚಿಸಲಾಗಿದ್ದು, ಗೃಹ ಸಚಿವ ಅಮಿತ್ ಶಾ, ರಕ್ಷಣ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಾಷ್ಟ್ರೀಯ ಭದ್ರತ ಸಲಹೆಗಾರ ಅಜಿತ್ ದೋವಲ್ ಭಾಗಿಯಾಗಿದ್ದರು.
ಕಾಬೂಲ್ ಹಾಗೂ ಇತರ ನಗರ ಗಳಿಗೆ ಎಷ್ಟು ಬೇಕಾ ದರೂ ವಿಮಾನಗಳನ್ನು ಕಳುಹಿಸಿ ಅಲ್ಲಿರುವ ಎಲ್ಲ ಭಾರತೀಯರನ್ನು ಕರೆತನ್ನಿ ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ.
ಅಫ್ಘಾನ್‌ನಲ್ಲಿ ರಾಜ್ಯದ ನಾಗರಿಕರು ತೊಂದರೆಗೆ ಸಿಲುಕಿ ದ್ದಾರೆಯೇ ಅಥವಾ ರಾಜ್ಯದಲ್ಲಿರುವ ಅಫ್ಘಾನ್ ಪ್ರಜೆಗಳಿಗೆ ಸಮಸ್ಯೆ ಇದೆಯೇ ಎನ್ನುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು. ನಮ್ಮ ರಾಜ್ಯ ದವರು ತೊಂದರೆಗೆ ಸಿಲುಕಿದ್ದರೆ ಅವ ರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಪಡೆಯಲು ಸೂಚಿಸಲಾಗುವುದು.– ಅರಗ ಜ್ಞಾನೇಂದ್ರ, ಗೃಹ ಸಚಿವ