ಇಪೊ (ಮಲೇಷ್ಯಾ): ಸುಲ್ತಾನ್ ಅಜ್ಲಾನ್ ಶಾ ಹಾಕಿ ಕೂಟದಲ್ಲಿ ಈಗಾಗಲೇ ಫೈನಲ್ ಹಂತಕ್ಕೆ ತಲುಪಿರುವ ಭಾರತೀಯ ಪುರುಷರ ತಂಡ ಶುಕ್ರವಾರ ನಡೆಯಲಿರುವ ಲೀಗ್‌ನ ಕೊನೆಯ ಪಂದ್ಯದಲ್ಲಿ ಪೋಲೆಂಡ್ ತಂಡವನ್ನು ಎದುರಿಸಲಿದೆ. ಕೆನಡಾ ವಿರುದ್ದ ಸಾಧಿಸಿರುವಂತೆ ಭಾರತ ಈ ಪಂದ್ಯದಲ್ಲೂ ಭಾರೀ ಅಂತರದ ಗೆಲುವಿನ ನಿರೀಕ್ಷೆಯನ್ನು ಇಟ್ಟುಕೊಂಡಿದೆ.
ಸುಲಭ ತುತ್ತಾಗಲಿದೆ ಪೋಲೆಂಡ್: ವಿಶ್ವ ಮಟ್ಟದಲ್ಲಿ ಪೋಲೆಂಡ್ ತಂಡ ಅತ್ಯಂತ ಕಳಪೆ ಶ್ರೇಯಾಂಕ (21ನೇ ಸ್ಥಾನ )ಹೊಂದಿದೆ. ಇಂತಹ ತಂಡದ ಎದುರು ಅಗ್ರ ಶ್ರೇಯಾಂಕಿತ ಭಾರತ (5ನೇ ಸ್ಥಾನ) ಅಬ್ಬರಿಸುವ ಸಾಧ್ಯತೆ ಹೆಚ್ಚು ಎನ್ನುವುದು ಹಾಕಿ ಪಂಡಿತರ ಲೆಕ್ಕಾಚಾರ. ಭಾರತ ಈಗಾಗಲೇ ಗುಂಪಿನಲ್ಲಿ ತಾನಾಡಿರುವ ಪಂದ್ಯದಲ್ಲಿ ಕ್ರಮವಾಗಿ ಮೂರು ಗೆಲುವು ಹಾಗೂ ಒಂದು ಡ್ರಾ ಅನುಭವಿಸಿದೆ. ಸದ್ಯ ಭಾರತ ಲೀಗ್‌ನಲ್ಲಿ ಒಟ್ಟಾರೆ 10 ಅಂಕವನ್ನು ಸಂಪಾದಿಸಿ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ.
ಭಾರತ ಗುಂಪಿನ ಮೊದಲ ಪಂದ್ಯದಲ್ಲಿ ಜಪಾನ್ ತಂಡ ವಿರುದ್ಧ 2-0 ಅಂಕಗಳ ಅಂತರದಿಂದ ಗೆಲುವು ಸಾಧಿಸಿತ್ತು. ಆ ಬಳಿಕ ನಡೆದ ಪಂದ್ಯದಲ್ಲಿ ಬಲಿಷ್ಠ ಕೊರಿಯಾ ವಿರುದಟಛಿದ ಪಂದ್ಯದಲ್ಲಿ 1-1 ಗೋಲುಗಳ ಡ್ರಾ ಸಾಧಿಸಿತ್ತು. ಭಾರತೀಯರು ಲೀಗ್‌ನ ಮೂರನೇ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 4-2 ಗೋಲುಗಳ ಅಂತರದ ಗೆಲುವು ಸಾಧಿಸಿದ್ದರೆ ನಾಲ್ಕನೇ ಪಂದ್ಯದಲ್ಲಿ ಕೆನಡಾ ವಿರುದಟಛಿ 7-2 ಅಂತರದ ಜಯವನ್ನು ಸಾಧಿಸಿತ್ತು. ಒಟ್ಟಾರೆ ಭಾರತ ತಂಡ ಕೂಟದಲ್ಲೇ ಅಜೇಯವಾಗಿ ಮುನ್ನಡೆದಿದೆ. ಕಪ್ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಕೆನಡಾ ವಿರುದಟಛಿ ಹ್ಯಾಟ್ರಿಕ್ ಗೋಲು ಬಾರಿಸಿರುವ ಮನ್‌ದೀಪ್, ವರುಣ್ ಕುಮಾರ್ ತಂಡದ ತಾರಾ ಆಟಗಾರರಾಗಿ ಗಮನ ಸೆಳೆದಿದ್ದಾರೆ.