Advertisement

ಪ್ರಧಾನಿಯಲ್ಲ, ಪ್ರತಿನಿಧಿ: ವಿಶ್ವ ಆರ್ಥಿಕ ಒಕ್ಕೂಟ ಸಮ್ಮೇಳನಲ್ಲಿ ಮೋದಿ

03:27 PM Jan 20, 2018 | Sharanya Alva |

ನವದೆಹಲಿ: ವಿಶ್ವದ ದೈತ್ಯ ನಾಯಕರ ಜತೆ ನಾನು ಯಾವುದೇ ವೇದಿಕೆ ಹಂಚಿಕೊಂಡಾಗ ನಾನು ಕೇವಲ ಭಾರತದ ಪ್ರಧಾನಿಯಲ್ಲ, ಭಾರತದ 125 ಕೋಟಿ ಜನರ ಪ್ರತಿನಿಧಿ ಎಂದೆನಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಇದೇ ತಿಂಗಳ 23ರಿಂದ 26ರವರೆಗೆ ಸ್ವಿಜರ್ಲೆಂಡ್‌ನ‌ ದಾವೋಸ್‌ ನಲ್ಲಿ ವಿಶ್ವ ಆರ್ಥಿಕ ಒಕ್ಕೂಟದ ವಾರ್ಷಿಕ ಮಹಾ ಸಮ್ಮೇಳನದಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಶುಕ್ರವಾರ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ತಮ್ಮ ಹಲವಾರು ಆಡಳಿತಾತ್ಮಕ ದೃಷ್ಟಿಕೋನಗಳನ್ನು ಹಂಚಿಕೊಂಡರು.

2014ರ ಮಹಾ ಚುನಾವಣೆಯಲ್ಲಿ 30 ವರ್ಷಗಳ ನಂತರ, ಭಾರತದಲ್ಲಿ ಸಂಪೂರ್ಣ ಬಹುಮತದ ಸರ್ಕಾರವೊಂದು ರಚನೆಯಾಗಿತು. ಇದು, ಇಡೀ ವಿಶ್ವವೇ ಭಾರತದಲ್ಲೇ ಆಗುತ್ತಿದೆ ಎಂದು ಇತ್ತ ತಿರುಗಿ ನೋಡುವಂತೆ ಮಾಡಿತಲ್ಲದೆ, ಭಾರತದೊಂದಿಗೆ ವಿಶ್ವದ ಇತರ ದೇಶಗಳು ವ್ಯವಹರಿಸುವ ರೀತಿಯನ್ನೇ ಬದಲಿಸಿತು ಎಂದಿದ್ದಾರೆ. 

ಸಂದರ್ಶನದ ಆಯ್ದ ಭಾಗ
*ಪ್ರಪಂಚದ ನಾನಾ ದೇಶಗಳ ಮಾರುಕಟ್ಟೆಗಳು ಪರಸ್ಪರ ಅವಲಂಬಿತವಾಗಿರುವುದರಿಂದ ಎಲ್ಲಾ ದೇಶಗಳೊಂದಿಗೆ ಭಾರತ ಉತ್ತಮ ಬಾಂಧವ್ಯ ಹೊಂದಬೇಕಾಗುತ್ತದೆ.

* ಜಿ 20 ಶೃಂಗ ಸಭೆಯಲ್ಲಿ ಆರ್ಥಿಕ ಹಾಗೂ ಬ್ಯಾಂಕಿಂಗ್‌ ಕ್ಷೇತ್ರದ ಸುಧಾರಣೆ ಬಗ್ಗೆ ನಾವು ಪ್ರತಿಪಾದಿಸಿದ್ದೆವು. ಇದನ್ನೀಗ ಇಡೀ ವಿಶ್ವವೇ ಕೊಂಡಾಡುತ್ತಿದೆ.

Advertisement

*ನಾವು ಕೆಲವೇ ವಿಚಾರಗಳಿಗೆ ಸೀಮಿತವಾಗಬಾರದು. ಪ್ರತಿಯೊಂದನ್ನೂ ಸಕಾರಾತ್ಮಕವಾಗಿಯೇ ಎದುರಿಸಬೇಕು. (ಪುಟಿನ್‌-ಟ್ರಂಪ್‌*ಮೋದಿ ಜೋಡಿಯ ಬಗ್ಗೆ ಕೇಳಲಾದ ಪ್ರಶ್ನೆಗೆ)

* ಉಜಾಲದ ಮೂಲಕ ಹಲವಾರು ಬಡಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ನೀಡಿದ್ದೇವೆ. ಬಡವರಿಗೆ 90 ಪೈಸೆಯಲ್ಲಿ ಆರೋಗ್ಯ ವಿಮೆ ನೀಡಲಾಗಿದೆ. ವಿದ್ಯುತ್‌ ದೀಪ ಕಾಣದ ಮನೆಗಳಿಗೆ ಎಲ್‌ಇಡಿ ಬಲುºಗಳನ್ನು ವಿತರಿಸಲಾಗಿದೆ.

* ಯುಪಿಎ ಸರ್ಕಾರವು ರಾಜ್ಯಗಳ ಸಮಸ್ಯೆಗೆ ಕಿವಿಗೊಡಲಿಲ್ಲ. ನಾವು ಅಂಥ ತಪ್ಪು ಮಾಡಲಿಲ್ಲ. 

*ಜಿಎಸ್‌ಟಿಯಿಂದ ಇಡೀ ಭಾರತದಲ್ಲಿ ಏಕಮೇವ ತೆರಿಗೆ ಪದ್ಧತಿ ಜಾರಿಗೆ ತಂದಿದ್ದೇವೆ.

* ಇಷ್ಟು ವರ್ಷಗಳ ನನ್ನ ಅಧಿಕಾರಾವಧಿಯಲ್ಲಿ ನನಗೆ ತಿಳಿದಿದ್ದೇನೆಂದರೆ, ಜನರು ಸರ್ಕಾರವನ್ನು ನೆಚ್ಚಿ ಮತ ಹಾಕುವುದಿಲ್ಲ. ಅವರನ್ನು ಎಲ್ಲಾ ರೀತಿಯಲ್ಲೂ  ಸಬಲರನ್ನಾಗಿಸಿದ,  ಆತ್ಮಗೌರವದಿಂದ ಬಾಳುವಂತೆ ಮಾಡಿದವರಿಗಷ್ಟೇ ಮತಹಾಕುತ್ತಾರೆ.

* ಕೇಂದ್ರ ಹಾಗೂ ರಾಜ್ಯಗಳಿಗೆ ಒಂದೇ ಅವಧಿಯಲ್ಲಿ ಚುನಾವಣೆ ನಡೆಯುವಂತೆ ಮಾಡುವ ಆಲೋಚನೆಯಿದೆ. 

Advertisement

Udayavani is now on Telegram. Click here to join our channel and stay updated with the latest news.

Next