Advertisement

ಹೌಡಿ ಮೋದಿ ನಂತರ ಅಮೆರಿಕಾ ಭಾರತ ಸಂಬಂಧ ವೃದ್ಧಿಸಿದೆ : ಪಿಯೂಷ್‌ ಗೋಯಲ್‌

09:42 AM Oct 22, 2019 | Team Udayavani |

ಹೊಸದಿಲ್ಲಿ: ಮೋದಿ – ಟ್ರಂಪ್‌ ನಡುವೆ ಇದ್ದ  ಸ್ನೇಹ ಸಂಬಂಧ ವೃದ್ಧಿಸಿದ್ದು, ಎರಡು ದೇಶಗಳ ಜನರ ಮನಸ್ಥಿತಿಯೂ ಸುಧಾರಿಸಿದೆ ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಹೇಳಿದ್ದಾರೆ.

Advertisement

ಭಾರತ ನಾಯಕತ್ವ ಸಭೆ ಆಯೋಜಿಸಿರುವ ಎರಡನೇ ವಾರ್ಷಿಕ ಯು.ಎಸ್‌. ಸ್ಟ್ರಾಟೆಜಿಕ್‌ ಫೋರಮ್‌ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹೌಡಿ ಮೋದಿ ಸಭೆಯ ನಂತರ ಭಾರತ-ಅಮೆರಿಕಾ ನಡುವೆ ಇದ್ದ ಸ್ನೇಹ-ಸಂಬಂಧ ಮತ್ತಷ್ಟು ಗಟ್ಟಿಯಾಗಿದ್ದು, ಭಾರತ ಹಾಗೂ ಅಮೆರಿಕಾ ನಡುವೆ ನಡೆಯುತ್ತಿರುವ ವ್ಯಾಪಾರ ಸಮಾಲೋಚನೆ ಯೋಜನೆ ಕೂಡ ಒಂದು ಹಂತಕ್ಕೆ ಬಂದು ತಲುಪಿದೆ ಎಂದು ಹೇಳಿದರು.

ಜನರ ಹಿತಾಸಕ್ತಿಯನ್ನು ಕಾಪಾಡುವುದು ಮೋದಿ ಸರಕಾರ ಪ್ರಮುಖ ಉದ್ದೇಶವಾಗಿದ್ದು, ಇತರ ಯಾವುದೇ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ನೂರು ಬಾರಿ ಯೋಚನೆ ಮಾಡುತ್ತೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next