Advertisement

ಸೆ.6ಕ್ಕೆ 2+2 ಮಾತುಕತೆ

09:59 AM Jul 21, 2018 | |

ವಾಷಿಂಗ್ಟನ್: ಅಮೆರಿಕ ಮತ್ತು ಭಾರತದ ನಡುವೆ ಇದೇ ಮೊದಲ ಬಾರಿಯ 2+2 ಮಾತುಕತೆ ಸೆ.6ರಂದು ಹೊಸದಿಲ್ಲಿಯಲ್ಲಿ ನಡೆಯಲಿದೆ. ಅಮೆರಿಕ ಮತ್ತು ಭಾರತದ ವಿದೇಶಾಂಗ ಇಲಾಖೆಗಳು ಈ ಮಾಹಿತಿ ಖಚಿತಪಡಿಸಿವೆ. ಜಾಗತಿಕ ಮಟ್ಟದ ಮತ್ತು ಪ್ರಾದೇಶಿಕ ವಿಚಾರಗಳ ಬಗ್ಗೆ ಎರಡೂ ದೇಶಗಳ ವಿದೇಶಾಂಗ ಮತ್ತು ರಕ್ಷಣಾ ಸಚಿವರು ಚರ್ಚಿಸಲಿದ್ದಾರೆ. ಈ ಹಿಂದೆ ಜು.6ರಂದು ವಾಷಿಂಗ್ಟನ್‌ನಲ್ಲಿ ಮಾತುಕತೆ ನಿಗದಿಯಾಗಿದ್ದು, ಮುಂದೂಡಿಕೆಯಾಗಿತ್ತು. ಜು.27ರಂದು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಿಕೆಯಾಗಿತ್ತು. ಈ ಮಾತುಕತೆ ಎರಡೂ ದೇಶಗಳ ವ್ಯೂಹಾತ್ಮಕ ಪಾಲುದಾರಿಕೆ ವೃದ್ಧಿಗೆ ಅದು ನೆರವಾಗಲಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next