Advertisement
ಪಾಕಿಸ್ಥಾನದ ಪ್ರಧಾನಿ ಇಂದಿನಿಂದ(ಫೆ.23) ಎರಡು ದಿನಗಳ ಕಾಲ ಶ್ರೀಲಂಕಾ ಪ್ರವಾಸದಲ್ಲಿದ್ದು, ಅಫ್ಘಾನಿಸ್ಥಾನದ ಭೇಟಿಯ ಕೆಲವು ತಿಂಗಳುಗಳ ನಂತರ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಎರಡನೇ ಪ್ರವಾಸ ಇದಾಗಿದೆ.
Related Articles
Advertisement
ಗಮನಿಸಬೇಕಾದ ವಿಷಯವೇನೆಂದರೇ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಿದ ನಂತರ ಪಾಕಿಸ್ಥಾನ ಸರ್ಕಾರ, ಒಂದು ಭಾರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ, ಹಾಗೂ ಎರಡು ಭಾರಿ ಪ್ರಧಾನಿ ಮೋದಿಯವರ ಅತಿಯಾದ ವಿಮಾನ ಹಾರಾಟಕ್ಕೆ ಅನುಮತಿಯನ್ನು ನಿರಾಕರಿಸಿತ್ತು.
ಓದಿ : ಮುರುಗೇಶ್ ನಿರಾಣಿಗೆ ಅಮಿತ್ ಶಾ ದಿಢೀರ್ ಬುಲಾವ್: ಕುತೂಹಲ ಮೂಡಿಸಿದ ನಿರಾಣಿ ದಿಲ್ಲಿ ಭೇಟಿ!
ಇನ್ನು, 2019ರ ಸಪ್ಟೆಂಬರ್ ನಲ್ಲಿ ರಾಷ್ಟ್ರಪತಿ ಕೋವಿಂದ್ ಅವರ ಯೂರೋಪ್ ಪ್ರವಾಸದ ಸಂದರ್ಭದಲ್ಲಿ ಪಾಕಿಸ್ಥಾನದ ವಾಯು ಸರಹದಿನಲ್ಲಿ ಅನುಮತಿಯನ್ನು ನಿರಾಕರಿಸಿತ್ತು. ಯು ಎನ್ ಜಿ ಎ ಅಧಿವೇಶನಕ್ಕೆ ತೆರಳಲು ಪ್ರಧಾನಿ ಮೋದಿಯವರ ವಿಮಾನ ಹಾರಾಟಕ್ಕೂ ಅನುಮತಿಯನ್ನು ನೀಡಿರಲಿಲ್ಲ. ಮತ್ತು ಏರ್ ಇಂಡಿಯಾ ಒನ್ ಗೆ ಮೋದಿಯವರು ಅಕ್ಟೋಬರ್ 2019ರಲ್ಲಿ ಸೌದಿ ಅರೇಬಿಯಾ ಪ್ರವಾಸದ ಸಂದರ್ಭದಲ್ಲೂ ಅನುಮತಿಯನ್ನು ನೀಡಿರಲಿಲ್ಲ.
ಭಾರತ ಈ ವಿಷಯವನ್ನು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯಿಂದ ಪಡೆದುಕೊಂಡಿದೆ ಎಂದು ವರದಿಯಾಗಿದೆ.
ಓದಿ : ಫೆ. 23 : ತಮಿಳುನಾಡು ಸರ್ಕಾರದಿಂದ ಮಧ್ಯಂತರ ಬಜೇಟ್ ಘೋಷಣೆ