Advertisement

INDIA alliance; ವಯನಾಡ್ ಅಭ್ಯರ್ಥಿ ಪ್ರಕಟಿಸಿದ ಸಿಪಿಐ!: ರಾಹುಲ್ ರಾಯ್ ಬರೇಲಿಗೆ?

06:48 PM Feb 26, 2024 | Team Udayavani |

ಹೊಸದಿಲ್ಲಿ: ಇಂಡಿಯಾ ಮೈತ್ರಿಕೂಟದೊಳಗಿನ ದೊಡ್ಡ ಗೊಂದಲಕ್ಕೆ ಸಾಕ್ಷಿ ಎಂಬಂತೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಕೇರಳದಲ್ಲಿ ಲೋಕಸಭೆ ಚುನಾವಣೆಗೆ ನಾಲ್ಕು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರತಿನಿಧಿಸುತ್ತಿರುವ ವಯನಾಡ್ ನಿಂದ ಅನ್ನಿ ರಾಜಾ ಅವರ ಹೆಸರನ್ನು ಘೋಷಿಸಿದೆ.

Advertisement

ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಸಿಪಿಐ ತಿರುವನಂತಪುರಂನಿಂದ ಪನ್ನಿಯನ್ ರವೀಂದ್ರನ್.ತ್ರಿಶೂರ್ ನಿಂದ ವಿಎಸ್ ಸುನಿಲ್ ಕುಮಾರ್ ಮತ್ತು ಅರುಣ್ ಕುಮಾರ್ ಮಾವೇಲಿಕರದಿಂದ ಸ್ಪರ್ಧಿಸಲಿದ್ದಾರೆ.

ಭಾರೀ ಕುತೂಹಲ

ಕೇರಳದ ರಾಜಕೀಯದಲ್ಲಿ ಎಡ ಪಕ್ಷಗಳ ಎಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದ ನಡುವೆ ನಿರಂತರವಾಗಿ ರಾಜಕೀಯ ಹೋರಾಟ ನಡೆದುಕೊಂಡು ಬಂದಿದೆ. ಇಂಡಿಯಾ ಮೈತ್ರಿಕೂಟದ ಭಾಗವಾಗಿ ಬಿಜೆಪಿ ವಿರುದ್ಧ ಹೋರಾಟ ಸಂಘಟಿಸುವುದಾಗಿ ಘೋಷಿಸಿದ ಎಡ ಪಕ್ಷಗಳ ಪೈಕಿ ಒಂದಾದ ಸಿಪಿಐ ಅಭ್ಯರ್ಥಿ ಘೋಷಿಸಿರುವುದು ತೀವ್ರ ಕುತೂಹಲ ಮೂಡಿಸಿದೆ. ಎಡಿಎಫ್ ಮತ್ತು ಯುಡಿಎಫ್ ಒಂದಾಗಿ ಚುನಾವಣೆ ಎದುರಿಸಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ರಾಹುಲ್ ಗಾಂಧಿ ಅವರು ಗಾಂಧಿ ಕುಟುಂಬದ ಭದ್ರ ಕೋಟೆ ಎಂದು ಪರಿಗಣಿಸಲ್ ಪಟ್ಟಿರುವ ಸದ್ಯ ಸೋನಿಯಾ ಗಾಂಧಿ ಅವರು ಪ್ರತಿನಿಷಿಸುತ್ತಿರುವ ರಾಯ್ ಬರೇಲಿಯಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

Advertisement

ಇನ್ನೊಂದು ಗಮನಾರ್ಹ ವಿಚಾರವೆಂದರೆ ಕಾಂಗ್ರೆಸ್ ನ ಹಿರಿಯ ನಾಯಕ ಶಶಿ ತರೂರ್ ಅವರು ತಿರುವನಂತಪುರಂ ನ ಹಾಲಿ ಸಂಸದ ರಾಗಿದ್ದಾರೆ.ಅಲ್ಲಿಯೂ ಸಿಪಿಐ ಅಭ್ಯರ್ಥಿ ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next