Advertisement

ಬಾಹ್ಯಾಕಾಶ ಯುದ್ಧಕ್ಕೆ ಭಾರತ ಸಿದ್ಧತೆ ಪರೀಕ್ಷೆ

01:37 AM Jul 25, 2019 | mahesh |

ನವದೆಹಲಿ: ಮಿಷನ್‌ ಶಕ್ತಿ ಅಡಿಯಲ್ಲಿ ಎ-ಸ್ಯಾಟ್ ಪ್ರಯೋಗಿಸಿದ್ದ ಭಾರತ ಈಗ ಚೀನಾವನ್ನು ಎದುರಿಸುವ ನಿಟ್ಟಿನಲ್ಲಿ ಬಾಹ್ಯಾಕಾಶ ಯುದ್ಧ ಸಾಮರ್ಥ್ಯವನ್ನು ಪರೀಕ್ಷಿಸಲು ನಿರ್ಧರಿಸಿದೆ.

Advertisement

ಈ ವಾರ ನವ ದೆಹಲಿಯಲ್ಲಿ ನಡೆಯಲಿರುವ ಇಂಡ್‌ಸ್ಪೇಸ್‌ ಎಕ್ಸ್‌ ಎಂಬ ಈ ಪ್ರಯೋಗದಲ್ಲಿ ಭಾರತದ ಬಾಹ್ಯಾಕಾಶ ಯುದ್ಧ ಸಾಮರ್ಥ್ಯ, ಕೊರತೆ ಹಾಗೂ ಸಾಧ್ಯತೆಗಳನ್ನು ಪರೀಕ್ಷಿಸಲಾಗುತ್ತದೆ. ವಾಯುಪಡೆ, ಸೇನಾಪಡೆ ಹಾಗೂ ನೌಕಾಪಡೆಗಳು ಇದರಲ್ಲಿ ಭಾಗವಹಿಸಲಿವೆ. ಎರಡು ದಿನಗಳ ಈ ಕಾರ್ಯಕ್ರಮ ಭಾರತದಲ್ಲಿ ಮೊದಲನೆಯದಾಗಿದೆ.

ಕಳೆದ ಮಾರ್ಚ್‌ನಲ್ಲಿ ಭಾರತ ಉಪಗ್ರಹ ಹೊಡೆದುರುಳಿಸುವ ಸಾಮರ್ಥ್ಯವಿರುವ ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಿತ್ತು. ಆದರೆ ಚೀನಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಲೇಸರ್‌ಗಳು, ಎಲೆಕ್ಟ್ರೋ ಮ್ಯಾಗ್ನೆಟಿಕ್‌ನಂಥ ಪರ್ಯಾಯ ವಿಧಾನಗಳಿಂದಲೂ ಉಪಗ್ರಹಗಳ ಮೇಲೆ ದಾಳಿ ನಡೆಸುವ ತಂತ್ರಗಳ ಪ್ರಯೋಗ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಭಾರತ ತನ್ನ ಬಾಹ್ಯಾಕಾಶ ಸ್ವತ್ತು ಕಾಯ್ದುಕೊಳ್ಳಲು ಹೊಸ ತಂತ್ರಗಳಲ್ಲಿ ಪರಿಣಿತಿ ಸಾಧಿಸುವ ಅಗತ್ಯ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next