Advertisement

2030ರ ವೇಳೆಗೆ ವಿದ್ಯುತ್‌ ಕಾರುಗಳ ಕಾರುಬಾರು!

10:28 AM May 01, 2017 | |

ಹೊಸದಿಲ್ಲಿ: 2030ರ ಹೊತ್ತಿಗೆ ಭಾರತದಲ್ಲಿ ಸಂಪೂರ್ಣವಾಗಿ ವಿದ್ಯುತ್‌ ಚಾಲಿತ ಕಾರುಗಳನ್ನೇ ಬಳಸಲು, ತೈಲದ ಮೇಲಿನ ಅವಲಂಬನೆಯನ್ನು ಕನಿಷ್ಠಕ್ಕೆ ತರುವ ಯೋಜನೆ ಇದೆ ಎಂದು ಕೇಂದ್ರ ಸರಕಾರ  ಹೇಳಿದೆ. 

Advertisement

ಒಂದು ವೇಳೆ ಕೇಂದ್ರದ ಈ ಉದ್ದೇಶ ಸಫ‌ಲವಾಗಿದ್ದೇ ಆದಲ್ಲಿ ಜಗತ್ತಿನ ಅತಿ ದೊಡ್ಡ ಆರ್ಥಿಕತೆಯೊಂದು ದೊಡ್ಡ ಪ್ರಮಾಣದಲ್ಲಿ ಹಸಿರು ಮನೆ ಅನಿಲ ಪರಿಣಾಮ ತಡೆಯಲು ಯತ್ನಿಸಿದಂತಾಗುತ್ತದೆ. ಉದ್ದೇಶಿತ ಯೋಜನೆ ಬಗ್ಗೆ ಕೈಗಾರಿಕಾ ಒಕ್ಕೂಟದ ವಾರ್ಷಿಕ ಸಭೆಯಲ್ಲಿ ಕೇಂದ್ರ ವಿದ್ಯುತ್‌ ಸಚಿವ ಪಿಯೂಶ್‌ ಗೋಯೆಲ್‌ ಮಾತನಾಡಿದ್ದಾರೆ. ಎಲ್‌ಇಡಿ ಬಲ್ಬ್ ನೀಡುವ ಉಜಾಲ ಯೋಜನೆಯಂತೆ ಪೆಟ್ರೋಲ್‌-ಡೀಸೆಲ್‌ ಕಾರುಗಳಿಗೆ ಸಂಪೂರ್ಣ ಟಾಟಾ ಹೇಳಿ ವಿದ್ಯುತ್‌, ಸೋಲಾರ್‌ ಚಾಲಿತ ವಾಹನಗಳನ್ನು ಬಳಸುವ ಯೋಜನೆ ತರ ಲಾಗುವುದು. ಈ ಬಗ್ಗೆ ಸರಕಾರ  ದೊಡ್ಡ ಮಟ್ಟದಲ್ಲಿ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಜತೆಗೆ ಇನ್ನೆರಡು ಮೂರು ವರ್ಷದಲ್ಲಿ ವಿದ್ಯುತ್‌ ಚಾಲಿತ ವಾಹನ ಉದ್ಯಮ ಭಾರತದಲ್ಲಿ ನೆಲೆ ಕಂಡುಕೊಳ್ಳಲು ಮತ್ತು ಮಾರುಕಟ್ಟೆ ವಿಸ್ತರಣೆಗೆ ಸರಕಾರ  ನೆರವು ನೀಡಲಿದೆ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next