Advertisement

ಕಿಲೋಗ್ರಾಂ ವ್ಯಾಖ್ಯಾನ ಬದಲು

01:54 AM May 21, 2019 | sudhir |

ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಾನ ದಂಡದ ಪ್ರಕಾರ ಸೋಮವಾರದಿಂದ ಇಡೀ ದೇಶದಲ್ಲಿ ಕಿಲೋಗ್ರಾಮ್‌, ಆಂಪಿಯರ್‌, ಮೋಲ್‌ ಹಾಗೂ ಕ್ಯಾಂಡೆಲಾದ ವ್ಯಾಖ್ಯಾನ ಮತ್ತು ಅಳತೆಯ ಮೂಲ ವಿಧಾನದಲ್ಲಿ ಬದಲಾವಣೆಯಾಗಿದೆ. ಆದರೆ ಜನಸಾಮಾನ್ಯರಿಗೆ ಇದರಲ್ಲಿ ಯಾವುದೇ ಬದಲಾವಣೆಯಾಗದು. ಭಾನುವಾರ ಒಂದು ಕಿಲೋ ಸೇಬುಹಣ್ಣಿನ ತೂಕಕ್ಕೂ ಮಂಗಳವಾರದ ಒಂದು ಕಿಲೋ ಸೇಬುಹಣ್ಣಿನ ತೂಕಕ್ಕೂ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದರೆ ಈ ವ್ಯಾಖ್ಯಾನದ ಮೂಲ ವಿವರವನ್ನು ಪಠ್ಯಪುಸ್ತಕಗಳಲ್ಲಿ ಬದಲಾವಣೆ ಮಾಡಬೇಕಾಗುತ್ತದೆ ಮತ್ತು ಭೌತ ವಿಜ್ಞಾನಿಗಳಿಗೆ ಇದು ಅತ್ಯಂತ ಮಹತ್ವದ ಬದಲಾವಣೆಯಾಗಿದೆ.

Advertisement

ಆದರೆ ಕಿಲೋಗ್ರಾಮ್‌ ಅನ್ನು ಅಳೆಯುವ ಮೂಲ ವಿಧಾನದಲ್ಲಿ ಬದಲಾವಣೆಯಾಗಲಿದೆ. ಅಂದರೆ ಈವರೆಗೆ 1889 ರಲ್ಲಿ ಶೇ. 90 ರಷ್ಟು ಪ್ಲಾಟಿನಂ ಹಾಗೂ ಶೇ. 10ರಷ್ಟು ಇರಿಡಿಯಂ ಬಳಸಿ ತಯಾರಿಸಿದ್ದ ಅಂತಾರಾಷ್ಟ್ರೀಯ ಕಿಲೋಗ್ರಾಮ್‌ ಮಾದರಿಯನ್ನು ಕಿಲೋಗ್ರಾಮ್‌ ತೂಕ ಆಧರಿಸಿತ್ತು. ಇದೇ ರೀತಿ ವಿಶ್ವದ ವಿವಿಧೆಡೆಯಲ್ಲೂ ಈ ಮಾದರಿಗಳು ಇದ್ದವು.

ಈ ಮಾದರಿಗಳನ್ನು ನಿಗದಿತ ಅವಧಿಯಲ್ಲಿ ಫ್ರಾನ್ಸ್‌ಗೆ ಕಳುಹಿಸಿ ಮೂಲ ಮಾದರಿಯ ಜತೆಗೆ ಹೋಲಿಕೆ ಮಾಡಲಾಗುತ್ತಿತ್ತು. ಕಾಲ ಕಳೆದಂತೆ ಈ ಹೋಲಿಕೆಯಲ್ಲಿ ವ್ಯತ್ಯಾಸವಾಗುತ್ತಿದ್ದು, ಮೂಲ ಮಾದರಿಯ ತೂಕ ಹೆಚ್ಚಿತೇ ಅಥವಾ ವಿಶ್ವದ ವಿವಿಧೆಡೆ ಇರುವ ಮಾದರಿಗಳಲ್ಲಿ ತೂಕ ಹೆಚ್ಚಾಗಿದೆಯೇ ಎಂಬುದು ತಿಳಿದುಬಂದಿರ ಲಿಲ್ಲ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಕಿಲೋ ಗ್ರಾಮ್‌ನ ಮೂಲ ವ್ಯಾಖ್ಯಾನವನ್ನು ಬದಲಿ ಸುವ ಪ್ರಸ್ತಾವ ಮಾಡಿದ್ದರು.

ಕೆಲವೇ ವರ್ಷಗಳ ಹಿಂದೆ ಇದಕ್ಕೆ ಸಂಬಂಧಿಸಿದಂತೆ ಅಂತಾ ರಾಷ್ಟ್ರೀಯ ತೂಕ ಮತ್ತು ಅಳತೆ ಸಮ್ಮೇಳನದಲ್ಲಿ ಸಮ್ಮತಿಸಲಾಗಿದೆ. ಹೀಗಾಗಿ ಈಗ ಬೆಳಕಿನ ವೇಗ ಮತ್ತು ಸೀಸಿಯಂ ಅಣುವಿನ ತರಂಗಾಂತರ ಪ್ರತಿಫ‌ಲನದ ಅನುಪಾತವನ್ನು ಆಧರಿಸಿ ಕಿಲೋಗ್ರಾಮ್‌ ಅನ್ನು ಅಳೆಯಲಾಗುತ್ತದೆ. ಈವರೆಗೆ ಆಂಪಿಯರ್‌, ಮೋಲ್‌ ಹಾಗೂ ಕ್ಯಾಂಡೆಲಾವನ್ನು ಮಾತ್ರ ಭೌತವಿಜ್ಞಾನದ ಮಾದರಿಯಲ್ಲಿ ವ್ಯಾಖ್ಯಾನಿಸಲಾಗುತ್ತಿಲ್ಲ. ಉಳಿದ ಎಲ್ಲ ತೂಕ ಮತ್ತು ಅಳತೆಯನ್ನೂ ಭೌತ ವಿಜ್ಞಾನದ ಆಧಾರದಲ್ಲಿ ಅಳೆಯಲಾಗುತ್ತದೆ. ಉದಾಹರಣೆಗೆ ಮೀಟರ್‌ ಅನ್ನು ನಿರ್ಯಾತದಲ್ಲಿ ಬೆಳಕಿನ ಕಿರಣಗಳು 1/2997 92458 ಸೆಕೆಂಡಿನಲ್ಲಿ ಪ್ರವಹಿಸುವ ವೇಗವನ್ನು ಆಧರಿಸಿ ಅಳೆಯಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next