Advertisement

ಮಂಗಳವಾರ ದಾಖಲೆಯ 1.21 ಕೋಟಿ ಮಂದಿಗೆ ಲಸಿಕೆ

09:04 AM Sep 01, 2021 | Team Udayavani |

ಹೊಸದಿಲ್ಲಿ/ಬೆಂಗಳೂರು: ದೇಶದಲ್ಲಿ ಲಸಿಕೆ ವಿತರಣೆಯಲ್ಲಿ ಗಣನೀಯವಾದ ಏರಿಕೆಯಾಗಿದೆ. ಮಂಗಳವಾರ ದಾಖಲೆಯ 1.21 ಕೋಟಿ ಮಂದಿಗೆ ಲಸಿಕೆ ಹಾಕಲಾಗಿದೆ.

Advertisement

ಉತ್ತರ ಪ್ರದೇಶದಲ್ಲಿ 14 ಲಕ್ಷ, ಮಧ್ಯಪ್ರದೇಶದಲ್ಲಿ 9 ಲಕ್ಷ, ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನಗಳಲ್ಲಿ ತಲಾ ಸುಮಾರು 8 ಲಕ್ಷ ಡೋಸ್‌ ಲಸಿಕೆ ಹಾಕಲಾಗಿದೆ. ಕರ್ನಾಟಕದಲ್ಲಿ ಸುಮಾರು 6 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ.

ಆ. 27ರಂದು ದೇಶದಲ್ಲಿ ಒಂದೇ ದಿನ 1.07 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿತ್ತು. ಮಂಗಳವಾರ ಮತ್ತೆ ಒಂದೂಕಾಲು ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.

ಸದ್ಯ ದೇಶದಲ್ಲಿ ಎಂಟು ರಾಜ್ಯಗಳು ಶೇ. 75ರಷ್ಟು ಮಂದಿಗೆ ಲಸಿಕೆ ಒದಗಿಸಿವೆ. ಹಿಮಾಚಲ ಪ್ರದೇಶದಲ್ಲಿ ಪೂರ್ಣ ಫ‌ಲಾನುಭವಿ ಜನಸಂಖ್ಯೆಗೆ ಒಂದು ಡೋಸ್‌ ಲಸಿಕೆ ಪೂರೈಸಲಾಗಿದೆ. ದೇಶಾದ್ಯಂತ ಈಗಾಗಲೇ 65 ಕೋಟಿ ಜನರಿಗೆ ಲಸಿಕೆ ನೀಡಲಾಗಿದ್ದು, ಅಮೆರಿಕದ ಎರಡು ಪಟ್ಟು ಜನಸಂಖ್ಯೆಗೆ ಲಸಿಕೆ ಹಾಕಿದಂತಾಗಿದೆ.

ಇಂದು ಲಸಿಕೋತ್ಸವ :

Advertisement

ಕರ್ನಾಟಕದಲ್ಲಿ ಬುಧವಾರ ಲಸಿಕೋತ್ಸವ ನಡೆಯಲಿದ್ದು, ಒಂದೇ ದಿನ 15 ಲಕ್ಷ ಮಂದಿಗೆ ಲಸಿಕೆ ಹಾಕಲು ತಯಾರಿ ನಡೆದಿದೆ. ಲಸಿಕೆ ಸಿಗದವರು ಹತ್ತಿರದ ಲಸಿಕೆ ಕೇಂದ್ರಗಳಿಗೆ ತೆರಳಿ ಪಡೆಯಬಹುದಾಗಿದೆ. ಪ್ರತೀ ಬುಧವಾರ ರಾಜ್ಯದಲ್ಲಿ ಲಸಿಕೋತ್ಸವ ನಡೆಯಲಿದ್ದು, ಡಿಸೆಂಬರ್‌ ವೇಳೆಗೆ ಪೂರ್ಣ ಫ‌ಲಾನುಭವಿ ಜನಸಂಖ್ಯೆಗೆ ಲಸಿಕೆ ಕೊಡುವ ಗುರಿ ಹಾಕಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next