Advertisement
ಬೆಳಗಾವಿಯ ಕೆಎಸ್‌ಸಿಎ ಮೈದಾನದಲ್ಲಿ ಗುರುವಾರ ನಡೆದ ಮೊದಲ ಏಕ ದಿನ ಪಂದ್ಯದಲ್ಲಿ ಭಾರತ ಎ ತಂಡ ಶ್ರೀಲಂಕಾ ಎ ತಂಡದ ವಿರುದ್ಧ 48 ರನ್‌ಗಳ ಅರ್ಹ ಜಯಸಾಧಿಸಿ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡ ನಿಗದಿತ 42 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 317 ರನ್‌ಗಳನ್ನು ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ ದಿಟ್ಟತನದ ಪ್ರತಿರೋಧ ಒಡ್ಡಿದರೂ 42 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿ ಸೋಲು ಅನುಭವಿಸಿತು. ಬೆಳಗಿನ ಜಾವ ಮಳೆಬಿದ್ದಿದ್ದರಿಂದ ಮೈದಾನ ಸಂಪೂರ್ಣ ಒದ್ದೆಯಾಗಿತ್ತು. ಇದರಿಂದ ಪಂದ್ಯ ಒಂದೂವರೆ ಗಂಟೆ ತಡವಾಗಿ ಆರಂಭವಾಗಿ 42 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು.
Related Articles
Advertisement
ಭಾರತ ಎ ತಂಡದ ಬೃಹತ್ ಮೊತ್ತ ಬೆನ್ನೆಟ್ಟುವ ಸವಾಲು ಪಡೆದ ಶ್ರೀಲಂಕಾಗೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ಖಾತೆಯಲ್ಲಿ ಕೇವಲ ಒಂದು ರನ್ ಸೇರಿದ್ದಾಗ ಸಮರವಿಕ್ರಮ ಶೂನ್ಯಕ್ಕೆ ನಿರ್ಗಮಿಸಿದರು. ಇದಾದ ಸ್ವಲ್ಪೇ ಹೊತ್ತಿನಲ್ಲಿ ಎನ್ ಡಿಕ್ವೆಲ್ಲಾ ರೂಪದಲ್ಲಿ ಎರಡನೇ ವಿಕೆಟ್ ಕಳೆದುಕೊಂಡ ಶ್ರೀಲಂಕಾ ಸೋಲಿನ ಹಾದಿ ಹಿಡಿಯಿತು. ಆಗ ಜೊತೆಗೂಡಿದ ರಾಜಪಕ್ಷ ಹಾಗೂ ಎಸ್ ಜಯಸೂರ್ಯ ತಂಡದ ಪತನವನ್ನು ತಡೆಹಿಡಿದರು. ಮೂರನೇ ವಿಕೆಟ್‌ಗೆ ಈ ಜೋಡಿ 59 ರನ್ ಸೇರಿಸಿದ್ದಾಗ ಶಿವಮ್ ದುಬೆ ಈ ಜೊತೆಯಾಟವನ್ನು ಮುರಿದು ಭಾರತದ ಶಿಬಿರದಲ್ಲಿ ಸಂತಸ ಮೂಡಿಸಿದರು. ನಾಲ್ಕನೇ ವಿಕೆಟ್‌ಗೆ ಜಯಸೂರ್ಯ ಹಾಗೂ ನಾಯಕ ಎ ಪ್ರಿಯಂಜನ್ (29) ಮತ್ತು ಏಳನೇ ವಿಕೆಟ್‌ಗೆ ಜಯಸೂರ್ಯ ಮತ್ತು ಜಯರತ್ನೆ (ಅಜೇಯ 44) ಉತ್ತಮ ಆಟ ಪ್ರದರ್ಶಿಸಿದರೂ ಭಾರತದ ಬೃಹತ್ ಮೊತ್ತವನ್ನು ತಲುಪಲು ಸಾಕಾಗಲಿಲ್ಲ.
ಒಂದು ಕಡೆ ಆಗಾಗ ವಿಕೆಟ್ ಬೀಳುತ್ತಿದ್ದರೂ ಇನ್ನೊಂದು ಕಡೆ ಗಟ್ಟಿಯಾಗಿ ನಿಂತಿದ್ದ ಜಯಸೂರ್ಯ ಅಜೇಯ ಶತಕ ಗಳಿಸಿ ಗಮನ ಸೆಳೆದರು. 120 ಎಸೆತಗಳನ್ನು ಎದುರಿಸಿದ ಜಯಸೂರ್ಯ ತಮ್ಮ ಅಜೇಯ 108 ರನ್‌ಗಳಲ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್ ಹೊಡೆದರು.ಸಂಕ್ಷಿಪ್ತ ಸ್ಕೋರು: ಭಾರತ ಎ ತಂಡ: 42 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 317. ( ಗಾಯಕವಾಡ ಅಜೇಯ 187.ಶುಬ್ಮನ್ ಗಿಲ್ 5, ಅನಮೋಲ 65. ಇಶಾನ್ ಕಿಶನ್ 45. ಶಿವಮ್ ದುಬೆ 6. ರಿಕಿ ಭುಯಿ ಅಜೇಯ 7. ಲಹಿರು ಕುಮಾರ 62 ಕ್ಕೆ 3.ವಿಕಟ್. ಪ್ರಿಯಂಜನ್ 29 ಕ್ಕೆ 1. ಶ್ರೀಲಂಕಾ ಎ ತಂಡ: 42 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 269. (ಎನ್ ಡಿಕ್ವೆಲ್ಲಾ 19, ಬಾನುಕಾ ರಾಜಪಕ್ಷ 29, ಸೇಹನ್ ಆಜೇಯ 108. ಎ. ಪ್ರಿಯಂಜನ್ 29. ಕಮಿಂದು ಮೆಂಡಿಸ್ 9. ದಸುನ್ 44, ಇಶಾನ್ ಜಯರತ್ನೆ ಅಜೇಯ 20. ಮಯಾಂಕ ಮಾರ್ಕಂಡೆ 66 ಕ್ಕೆ 2. ದೀಪಕ ಹೂಡಾ 24 ಕ್ಕೆ 1, ತುಷಾರ ದೇಶಪಾಂಡೆ 48 ಕ್ಕೆ 1. ಸಂದೀಪ ವಾರಿಯರ್ 39 ಕ್ಕೆ 1. ಶಿವಮ್ ದುಬೆ 35 ಕ್ಕೆ 1.
•ಕೇಶವ ಆದಿ