Advertisement
ಗೆಲುವಿಗೆ 373 ರನ್ ಗುರಿ ಪಡೆದ ವೆಸ್ಟ್ ಇಂಡೀಸ್, ಪಂದ್ಯ ಕೊನೆಗೊಂಡಾಗ 6 ವಿಕೆಟ್ ಕಳೆದುಕೊಂಡು 314 ರನ್ ಮಾಡಿತ್ತು. ಆರಂಭಕಾರ ಜೆರೆಮಿ ಸೊಲೊಜಾನೊ ಮ್ಯಾರಥಾನ್ ಇನ್ನಿಂಗ್ಸ್ ಒಂದನ್ನು ಕಟ್ಟಿ ತಂಡದ ರಕ್ಷಣೆಗೆ ನಿಂತರು. ಅವರ ಕೊಡುಗೆ 252 ಎಸೆತಗಳಿಂದ92 ರನ್.
ಇನ್ನೊಂದೆಡೆ ನಂ.3 ಬ್ಯಾಟ್ಸ್‌ಮನ್ ಬ್ರ್ಯಾಂಡನ್ ಕಿಂಗ್ ಆಕ್ರಮಣಕಾರಿ ಆಟವಾಡಿ ಭಾರತಕ್ಕೆ ಭೀತಿ ಮೂಡಿಸಿದರು (77 ಎಸೆತಗಳಿಂದ 84 ರನ್). ಸುನೀಲ್ ಆ್ಯಂಬ್ರಿಸ್ 142 ಎಸೆತ ನಿಭಾಯಿಸಿ 69 ರನ್ ಹೊಡೆದರು. ವಿಕೆಟ್ ನಷ್ಟವಿಲ್ಲದೆ 37 ರನ್ ಮಾಡಿದಲ್ಲಿಂದ ವಿಂಡೀಸ್ ಅಂತಿಮ ದಿನದಾಟ ಮುಂದುವರಿಸಿತ್ತು. ಭಾರತದ ಪರ ಎಡಗೈ ಸ್ಪಿನ್ನರ್ ಶಾಬಾಜ್ ನದೀಮ್ 103ಕ್ಕೆ 5 ವಿಕೆಟ್ ಉರುಳಿಸಿ ಗಮನ ಸೆಳೆದರು. ಕ್ರಮವಾಗಿ 55 ಮತ್ತು ಅಜೇಯ 118 ರನ್ ಬಾರಿಸಿದ ಹನುಮ ವಿಹಾರಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
Related Articles
Advertisement
ಸಂಕ್ಷಿಪ್ತ ಸ್ಕೋರ್:ಭಾರತ “ಎ’ 201 ಮತ್ತು 4 ವಿಕೆಟಿಗೆ 365 ಡಿಕ್ಲೇರ್. ವೆಸ್ಟ್ ಇಂಡೀಸ್ “ಎ’-194 ಮತ್ತು 6 ವಿಕೆಟಿಗೆ 314 (ಸೊಲೊಜಾನೊ 92, ಕಿಂಗ್ 77, ಆ್ಯಂಬ್ರಿಸ್ 69, ನದೀಮ್ 103ಕ್ಕೆ 5). ಪಂದ್ಯಶ್ರೇಷ್ಠ: ಹನುಮ ವಿಹಾರಿ.