Advertisement

ದ್ವಿಶತಕ ವಂಚಿತ ಕಾರ್ಟರ್‌; ಉತ್ತಮ ಸ್ಥಿತಿಯಲ್ಲಿ ನ್ಯೂಜಿಲ್ಯಾಂಡ್‌ “ಎ’

11:34 PM Sep 02, 2022 | Team Udayavani |

ಬೆಂಗಳೂರು: ಭಾರತ “ಎ’ ತಂಡದೆದುರಿನ ಮೊದಲ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ “ಎ’ ತಂಡದ ಜೋ ಕಾರ್ಟರ್‌ ಸ್ವಲ್ಪದರಲ್ಲಿ ದ್ವಿಶತಕ ಬಾರಿಸಲು ವಿಫ‌ಲರಾಗಿದ್ದಾರೆ. ಅವರ 197 ರನ್‌ ನೆರವಿನಿಂದ ನ್ಯೂಜಿಲ್ಯಾಂಡ್‌ “ಎ’ ತಂಡವು 400 ರನ್‌ ಗಳಿಸಿ ಆಲೌಟಾಗಿದೆ.

Advertisement

73 ರನ್ನಿನಿಂದ ದಿನದಾಟ ಆರಂಭಿಸಿದ್ದ ಕಾರ್ಟರ್‌ ಒಟ್ಟಾರೆ 305 ಎಸೆತ ಎದುರಿಸಿ 197 ರನ್‌ ಗಳಿಸಿದ್ದರು. ಇದರಿಂದಾಗಿ ನ್ಯೂಜಿಲ್ಯಾಂಡ್‌ “ಎ’ 400 ರನ್‌ ಗಳಿಸಿ ಆಲೌಟಾಯಿತು.

ಇದಕ್ಕುತ್ತರವಾಗಿ ಬ್ಯಾಟಿಂಗ್‌ ನಡೆಸಿದ ಭಾರತ “ಎ’ ತಂಡವು ಒಂದು ವಿಕೆಟಿಗೆ 156 ರನ್‌ ಗಳಿಸಿದೆ. ಅಭಿಮನ್ಯು ಈಶ್ವರನ್‌ 87 ಮತ್ತು ಗಾಯಕ್ವಾಡ್‌ 20 ರನ್‌ ಗಳಿಸಿ ಆಡುತ್ತಿದ್ದಾರೆ. ನಾಯಕ ಪ್ರಿಯಾಂಕ್‌ ಪಾಂಚಾಲ್‌ 47 ರನ್‌ ಗಳಿಸಿ ಔಟಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next