Advertisement

“ಎ’ತಂಡಗಳ 2ನೇ ಟೆಸ್ಟ್‌ ನೀರಸ ಡ್ರಾ

06:45 AM Nov 27, 2018 | |

ಹ್ಯಾಮಿಲ್ಟನ್‌: ಭಾರತ “ಎ’-ನ್ಯೂಜಿಲ್ಯಾಂಡ್‌ “ಎ’ ತಂಡಗಳ ನಡುವಿನ ದ್ವಿತೀಯ ಟೆಸ್ಟ್‌ ಪಂದ್ಯ ಮಳೆಯ ಹೊಡೆತಕ್ಕೆ ಸಿಲುಕಿ ನೀರಸ ಡ್ರಾದಲ್ಲಿ ಅಂತ್ಯ ಕಂಡಿದೆ. 

Advertisement

ಮೊದಲ ಟೆಸ್ಟ್‌ ಪಂದ್ಯ ಕೂಡ ಡ್ರಾದಲ್ಲೇ ಅಂತ್ಯ ಕಂಡಿತ್ತು. ನ್ಯೂಜಿಲ್ಯಾಂಡ್‌ “ಎ’ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟಿಗೆ 303 ರನ್‌ ಗಳಿಸಿ ಡಿಕ್ಲೇರ್‌ ಮಾಡಿದರೆ, ಭಾರತ “ಎ’ 2 ವಿಕೆಟಿಗೆ 159 ರನ್‌ ಮಾಡಿದ ಹಂತಕ್ಕೆ ಪಂದ್ಯ ಮುಗಿಯಿತು. ಮಳೆಯಿಂದ ದ್ವಿತೀಯ ದಿನದಾಟ ಸಂಪೂರ್ಣ ರದ್ದುಗೊಂಡಿತ್ತು. 

3ನೇ ದಿನ ಹಾಗೂ ಅಂತಿಮ ದಿನವಾದ ಸೋಮವಾರ ಕೂಡ ಪಂದ್ಯಕ್ಕೆ ಮಳೆ ಕಾಡಿತು. ಪಂದ್ಯ ನಿಂತಾಗ ಆರ್‌. ಸಮರ್ಥ್ 50 ಮತ್ತು ನಾಯಕ ಕರುಣ್‌ ನಾಯರ್‌ 8 ರನ್‌ ಮಾಡಿ ಔಟಾಗದೆ ಉಳಿದಿದ್ದರು. 47 ರನ್‌ ಗಳಿಸಿದ ಅಭಿಮನ್ಯು ಈಶ್ವರನ್‌ ಮತ್ತು 42 ರನ್‌ ಹೊಡೆದ ಮಾಯಾಂಕ್‌ ಅಗರ್ವಾಲ್‌ ಔಟಾಗಿದ್ದರು.

ಆತಿಥೇಯರ ಇನ್ನಿಂಗ್ಸ್‌ನಲ್ಲಿ ನಾಯಕನೂ ಆಗಿರುವ ಓಪನರ್‌ ವಿಲ್‌ ಯಂಗ್‌ ಶತಕ ಬಾರಿಸಿ ಮಿಂಚಿದ್ದರು (123). ಮೊಹಮ್ಮದ್‌ ಸಿರಾಜ್‌ (59ಕ್ಕೆ 4) ಮತ್ತು ರಜನೀಶ್‌ ಗುರ್ಬಾನಿ (60ಕ್ಕೆ 2) ಭಾರತದ ಯಶಸ್ವಿ ಬೌಲರ್‌ಗಳಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next