ಪ್ರಿಟೋರಿಯ: ರೋಮಾಂಚಕವಾಗಿ ಸಾಗಿದ “ಎ’ ತಂಡಗಳ ತ್ರಿಕೋನ ಸರಣಿಯ ಪಂದ್ಯದಲ್ಲಿ ಭಾರತ “ಎ’ ತಂಡವು ಎರಡು ವಿಕೆಟ್‌ಗಳಿಂದ ಸೋಲನ್ನು ಕಂಡು ಆಘಾತಕ್ಕೆ ಒಳಗಾಗಿದೆ.
ಅಲ್ಪ ಮೊತ್ತದ ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿತು. ನಾಯಕ ಮನೀಷ್ ಪಾಂಡೆ ಹೊರತುಪಡಿಸಿ ಉಳಿದವರ್ಯಾರೂ ಉತ್ತಮವಾಗಿ ಆಡಲು ವಿಫಲರಾದರು. ಪಾಂಡೆ ಅವರ 55 ರನ್ ನೆರವಿನಿಂದ ಭಾರತ “ಎ’ ತಂಡವು 41.5 ಓವರ್‌ಗಳಲ್ಲಿ 152 ರನ್ನಿಗೆ ಆಲೌಟಾಯಿತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ “ಎ’ ತಂಡವು ಬ್ಯಾಟಿಂಗ್ ಕುಸಿತಕ್ಕೆ ಒಳಗಾದರೂ 37.4 ಓವರ್‌ಗಳಲ್ಲಿ 8 ವಿಕೆಟಿಗೆ 153 ರನ್ ಪೇರಿಸಿ ರೋಚಕ ಗೆಲುವು ದಾಖಲಿಸಿತು.
ಡ್ವೇನ್ ಪ್ರಿಟೋರಿಯಸ್ ಅವರ ಆಲ್‌ರೌಂಡ್ ಆಟದಿಂದಾಗಿ ಆತಿಥೇಯ ತಂಡ ಜಯಭೇರಿ ಬಾರಿಸುವಂತಾಯಿತು. ಅವರು 24 ರನ್ನಿಗೆ 3 ವಿಕೆಟ್ ಕಿತ್ತರಲ್ಲದೇ 54 ಎಸೆತ ಎದುರಿಸಿ 38 ರನ್ ಹೊಡೆದು ತಂಡದ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು.
ಸಂಕ್ಷಿಪ್ತ ಸ್ಕೋರು: ಭಾರತ “ಎ’ 41.5 ಓವರ್‌ಗಳಲ್ಲಿ 152 (ಕರುಣ್ ನಾಯರ್ 25, ಮನೀಷ್ ಪಾಂಡೆ 55, ಯಜ್ವೇಂದ್ರ ಚಾಹಲ್ 24, ಡ್ವೇನ್ ಪ್ರಿಟೋರಿಯಸ್ 24ಕ್ಕೆ 3, ಅರಾನ್ ಫಾಂಗಿಸೊ 30ಕ್ಕೆ 4, ಬ್ಯುರನ್ ಹೆಂಡ್ರಿಕ್ಸ್ 15ಕ್ಕೆ 2);
ದಕ್ಷಿಣ ಆಫ್ರಿಕಾ “ಎ’ 37.4 ಓವರ್‌ಗಳಲ್ಲಿ 8 ವಿಕೆಟಿಗೆ 153 (ಹೆನ್ರಿಚ್ ಕ್ಲಾಸನ್ 24, ಫರ್ಹಾನ್ ಬೆಹರ್‌ಡೀನ್ 37, ಡ್ವೇನ್ ಪ್ರಿಟೋರಿಯಸ್ 38, ಯಜ್ವೇಂದ್ರ ಚಾಹಲ್ 41ಕ್ಕೆ 3, ಅಕ್ಷರ್ ಪಟೇಲ್ 35ಕ್ಕೆ 2).