Advertisement

ವಿಶ್ವಬ್ಯಾಂಕ್‌ನೊಂದಿಗೆ ಭಾರತ 2 ಸಾಲ ಒಪ್ಪಂದ

09:46 PM Mar 03, 2023 | Team Udayavani |

ನವದೆಹಲಿ: ದೇಶದ ಆರೋಗ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿಶ್ವಬ್ಯಾಂಕ್‌ನೊಂದಿಗೆ ತಲಾ 4,092ಕೋಟಿ ರೂ. (500 ದಶಲಕ್ಷ ಡಾಲರ್‌) ಮೊತ್ತದ 2 ಸಾಲ ಒಪ್ಪಂದಗಳಿಗೆ ಭಾರತ ಸಹಿಹಾಕಿದೆ.

Advertisement

ಒಪ್ಪಂದದ ಅನ್ವಯ ವಿಶ್ವಬ್ಯಾಂಕ್‌ 8,200 ಕೋಟಿ ರೂ. ಹಣವನ್ನು, ಭಾರತಕ್ಕೆ ಸಾಲ ರೂಪದಲ್ಲಿ ನೀಡಲಿದ್ದು, ಈ ಮೂಲಕ ದೇಶಾದ್ಯಂತ ಸಾರ್ವಜನಿಕ ಮೂಲಸೌಕರ್ಯ ವೃದ್ಧಿಗೆ 2021ರಲ್ಲಿ ಪ್ರಾರಂಭಿಸಲಾದ ಪ್ರಧಾನಮಂತ್ರಿ ಆಯುಷ್ಮಾನ್‌ ಭಾರತ್‌ ಆರೋಗ್ಯ ಯೋಜನೆಯನ್ನು ಬೆಂಬಲಿಸುವುದಾಗಿ ತಿಳಿಸಿದೆ.

ಅಲ್ಲದೇ, 1 ಸಾಲ ಒಪ್ಪಂದವು ಆಂಧ್ರಪ್ರದೇಶ, ಮೇಘಾಲಯ, ಕೇರಳ, ಒಡಿಶಾ, ಪಂಜಾಬ್‌, ತಮಿಳುನಾಡು ಹಾಗೂ ಉತ್ತರ ಪ್ರದೇಶದಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಯನ್ನು ಆದ್ಯತೆಯನ್ನಾಗಿ ಪರಿಗಣಿಸಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next