Advertisement

ಏರ್‌ ಇಂಡಿಯಾ ಸ್ಫೋಟ ಪ್ರಕರಣ:ಇಂದ್ರಜಿತ್‌ ಸಿಂಗ್‌ ಕೆನಡಾದಿಂದ ಬಿಡುಗಡೆ

10:20 AM Feb 16, 2017 | Team Udayavani |

ಒಟ್ಟಾವಾ: 1985 ರಲ್ಲಿ ಸ್ವರ್ಣ ಮಂದಿರ ಕಾರ್ಯಾಚರಣೆ ವಿರೋಧಿಸಿ ಏರ್‌ ಇಂಡಿಯಾ ವಿಮಾನ ಸ್ಫೋಟಿಸಿ 329 ಜನರ ಸಾವಿಗೆ ಕಾರಣವಾಗಿದ್ದ  ಭೀಕರ ಹತ್ಯಾಕಾಂಡಕ್ಕೆ ಸಂಬಂಧಿಸಿ ಶಿಕ್ಷೆಗೊಳಾಗಿದ್ದ ಏಕೈಕ ಅಪರಾಧಿ ಇಂದ್ರಜಿತ್‌ ಸಿಂಗ್‌ ರೆಯಾತ್‌ ನನ್ನು ಕೆನಡಾ ಬಿಡುಗಡೆ ಮಾಡಿದೆ. 

Advertisement

ಭಾರತೀಯ ಮೂಲದ ಇಂದ್ರಜಿತ್‌ 2 ದಶಕಗಳ ಕಾಲ ಸೆರೆಮನೆ ವಾಸ ದ ಬಳಿಕ ಕಳೆದ ವರ್ಷ ಶಿಕ್ಷೆ ಮುಕ್ತಾಯವಾಗಿತ್ತು. ಆದರೆ ಪೇರೋಲ್ ಬೋರ್ಡ್ ವಿಶೇಷ  ಪರಿಸ್ಥಿತಿಗಳಿಗೆ ಅನುಗುಣವಾಗಿ  ಹೇರಿದ ನಿರ್ಬಂಧದಿಂದಾಗಿ  ಇನ್ನೂ ಒಂದು ವರ್ಷ ಜೈಲಿನಲ್ಲೇ ಕಳೆ‌ಯಬೇಕಾಯಿತು.  ಇದೀಗ ಆತ ಸ್ವದೇಶಕ್ಕೆ  ಮರಳಬಹುದು ಮತ್ತು ಸಾಮಾನ್ಯ ಜೀವನ ನಡೆಸಬಹುದು ಎಂದು ಕೆನಡಾ ತಿಳಿಸಿದೆ.

ಬಾಂಬ್‌ ಇರಿಸಲಾಗಿದ್ದ  ಏರ್‌ಇಂಡಿಯಾ ವಿಮಾನ ಐರ್‌ಲ್ಯಾಂಡ್‌ ನಲ್ಲಿ  ಸ್ಫೋಟಗೊಂಡು 329 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಇನ್ನೊಂದು ಪ್ರಕರಣದಲ್ಲಿ  ಜಪಾನ್‌ನ ನರಿಟಾ ವಿಮಾನ ನಿಲ್ದಾಣಲ್ಲಿ ಬಾಂಬ್‌ ನ್ಪೋಟಗೊಂಡು  ಲಗೇಜು ಸಾಗಿಸುವ ಕಾರ್ಮಿಕರಿಬ್ಬರು ಸಾವನ್ನಪ್ಪಿದ್ದರು. ಸ್ವರ್ಣ ಮಂದಿರದಲ್ಲಿ ನಡೆಸಲಾಗಿದ್ದ ಕಾರ್ಯಾಚರಣೆ ವಿರೋಧಿಸಿ  ಸೇಡು ತೀರಿಸಿಕೊಳ್ಳುವ ಸಲುವಾಗಿ ಬಾಂಬ್‌ ಇಡಲಾಗಿತ್ತು. 

ಕೆನಡಾದಲ್ಲಿ ಮೆಕಾನಿಕ್‌ ಆಗಿ ಕೆಲಸ ಮಾಡುತ್ತಿದ್ದ  ಇಂದ್ರಜಿತ್‌ ಡೈನಾಮೇಟ್‌ಗಳನ್ನು ಖರೀದಿಸಿ ಬಾಂಬ್‌ ಸಿದ್ದಪಡಿಸಿ ವಿಮಾನಗಳಲ್ಲಿ ಇರಿಸಿದ್ದ. ಈತನಿಗೆ ಇನ್ನಿಬ್ಬರು ಸಹಕರಿಸಿದ್ದರಾದರೂ ಸೂಕ್ತ ಸಕ್ಷಾಧಾರಗಳ ಕೊರತೆಯಿಂದ ಖುಲಾಸೆಗೊಂಡಿದ್ದರು. ಒಟ್ಟಾರೆ ವಿಶ್ವವನ್ನೇ ತಲ್ಲಣ ಗೊಳಿಸಿದ್ದ ಪ್ರಕರಣದಲ್ಲಿ  ಇಂದ್ರಜಿತ್‌ ಸಿಂಗ್‌ ಒಬ್ಬನೇ ಜೈಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯಾಗಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next