ನರಗುಂದ: ಪಟ್ಟಣದ ಪುರಸಭೆ ಚುನಾವಣೆಗೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಇಂದಿನವರೆಗೆ ಒಟ್ಟು 67 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಜತೆಗೆ ಪಕ್ಷೇತರರು ಕೂಡ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ.
ಮೇ 29ರಂದು ಮತದಾನ ನಡೆಯಲಿರುವ ಪುರಸಭೆ 23 ವಾರ್ಡ್‌ಗಳಲ್ಲಿ ಮೇ 15ರ ವರೆಗೆ 27 ಜನರು ನಾಮಪತ್ರ ಸಲ್ಲಿಸಿದ್ದರು. ಗುರುವಾರ 33 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಒಟ್ಟು 12 ಮಂದಿ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧೆಗಿಳಿದಿದ್ದಾರೆ.
1ನೇ ವಾರ್ಡ್‌ಗೆ ಬಸೀರಸಾಬ್ ಕಿಲ್ಲೇದಾರ (ಕಾಂಗ್ರೆಸ್), 3ನೇ ವಾರ್ಡ್‌ಗೆ ದಿವಾನಸಾಬ್ ಕಿಲ್ಲೇದಾರ (ಕಾಂಗ್ರೆಸ್), 4ನೇ ವಾರ್ಡ್‌ಗೆ ದೇವಪ್ಪ ಕಟ್ಟಿಮನಿ (ಕಾಂಗ್ರೆಸ್), ಬಸಪ್ಪ ಭಜಂತ್ರಿ (ಪಕ್ಷೇತರ), ರಾಜಪ್ಪ ರಂಗಣ್ಣವರ (ಕಾಂಗ್ರೆಸ್), 5ನೇ ವಾರ್ಡ್‌ಗೆ ಬಸನಗೌಡ ಪಾಟೀಲ (ಕಾಂಗ್ರೆಸ್), ರಾಜೀವ ಈಟಿ (ಪಕ್ಷೇತರ). 6ನೇ ವಾರ್ಡ್‌ಗೆ ರಾಜೇಶ್ವರಿ ಹವಾಲ್ದಾರ (ಬಿಜೆಪಿ)(2), ಇಂದ್ರಾಬಾಯಿ ಮಾನೆ (ಕಾಂಗ್ರೆಸ್), 7ನೇ ವಾರ್ಡ್‌ಗೆ ರಜಿಯಾಬೇಗಂ ತಹಶೀಲ್ದಾರ (ಬಿಜೆಪಿ), 8ನೇ ವಾರ್ಡ್‌ಗೆ ಶಾಂತಾ ಮಠಪತಿ (ಕಾಂಗ್ರೆಸ್), 9ನೇ ವಾರ್ಡ್‌ಗೆ ಗಂಗವ್ವ ಬಿದರಗಡ್ಡಿ (ಕಾಂಗ್ರೆಸ್), ಅನ್ನಪೂರ್ಣ ಪವಾರ (ಪಕ್ಷೇತರ), 10ನೇ ವಾರ್ಡ್‌ಗೆ ಪ್ರಕಾಶ ಹುಂಬಿ (ಪಕ್ಷೇತರ), ರಾಜು ಮುಳಿಕ (ಕಾಂಗ್ರೆಸ್). 11ನೇ ವಾರ್ಡ್‌ಗೆ ಫಕ್ಕೀರಪ್ಪ ಸವದತ್ತಿ (ಕಾಂಗ್ರೆಸ್), 12ನೇ ವಾರ್ಡ್‌ಗೆ ರೇಣವ್ವ ಘಾಟಗೆ (ಕಾಂಗ್ರೆಸ್), 13ನೇ ವಾರ್ಡ್‌ಗೆ ಮೌಲಾಸಾಬ್ ಅರಬಜಮಾದಾರ (ಕಾಂಗ್ರೆಸ್), 14ನೇ ವಾರ್ಡ್‌ಗೆ ನಾಸೀರಹ್ಮದ್ ಖಾಜಿ (ಪಕ್ಷೇತರ), 16ನೇ ವಾರ್ಡ್‌ಗೆ ದೇವರಾಜ ಕಲಾಲ (ಬಿಜೆಪಿ), 17ನೇ ವಾರ್ಡ್‌ಗೆ ಶಂಕ್ರಪ್ಪ ಸುರೇಬಾನ, ಫಕ್ಕೀರಪ್ಪ ಹಾದಿಮನಿ, ವಿಜಯ ಚಲವಾದಿ ಸ್ಪರ್ಧಿಸಿದ್ದಾರೆ.
18ನೇ ವಾರ್ಡ್‌ಗೆ ಕವಿತಾ ಅರ್ಭಾಣದ (ಬಿಜೆಪಿ), ಹೇಮಾಕ್ಷಿ ದೊಡ್ಡಮನಿ (ಕಾಂಗ್ರೆಸ್), ಉಮೇಶ ತಳವಾರ (ಪಕ್ಷೇತರ), 19ನೇ ವಾರ್ಡ್‌ಗೆ ಚನ್ನಪ್ಪಗೌಡ ಪಾಟೀಲ (ಬಿಜೆಪಿ), 20ನೇ ವಾರ್ಡ್‌ಗೆ ನೀಲವ್ವ ಹಟ್ಟಿ (ಕಾಂಗ್ರೆಸ್), 21ನೇ ವಾರ್ಡ್‌ಗೆ ಹುಸೇನಸಾಬ್ ಗೋಟೂರ (ಬಿಜೆಪಿ), ಹನಮಂತ ಲಮಾಣಿ (ಕಾಂಗ್ರೆಸ್), 22ನೇ ವಾರ್ಡ್‌ಗೆ ಯಲ್ಲವ್ವ ಕೊರವರ (ಕಾಂಗ್ರೆಸ್), ಫಕ್ಕೀರವ್ವ ಮೂಲಿಮನಿ (ಪಕ್ಷೇತರ), 23ನೇ ವಾರ್ಡ್‌ಗೆ ಬಸವ್ವ ಮೇಟಿ (ಬಿಜೆಪಿ), ರಾಜೇಶ್ವರಿ ವೀರನಗೌಡ್ರ (ಕಾಂಗ್ರೆಸ್) ನಾಮಪತ್ರ ಸಲ್ಲಿಸಿದ್ದಾರೆ.
ಮೀಸಲಾತಿ: 23 ವಾರ್ಡ್‌ಗಳಲ್ಲಿ ಮಹಿಳೆಗೆ 10 ಕ್ಷೇತ್ರಗಳು ಮೀಸಲಿವೆ. ಸಾಮಾನ್ಯ 6, ಸಾಮಾನ್ಯ ಮಹಿಳೆ 6, ಹಿಂದುಳಿದ ವರ್ಗ 7, ಪರಿಶಿಷ್ಟ ಜಾ 2, ಪರಿಶಿಷ್ಟ ಜಾತಿ ಮಹಿಳೆ 1 ಹಾಗೂ ಪಪಂಕ್ಕೆ 1 ಕ್ಷೇತ್ರ ಮೀಸಲಾಗಿವೆ.