Advertisement
ನಗರದ ನೂತನ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಮಹಾರ್ಯಾಲಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನಸಾಗರ ನಡುವೆ ಈ ಘೋಷಣೆ ಮಾಡಿ, ಮುಂದಿನ ದಿನಗಳಲ್ಲಿ ರಾಜ್ಯ ರಾಜಧಾನಿ ಸೇರಿ ಇತರೆಡೆ ಹೋರಾಟದ ರ್ಯಾಲಿಗಳನ್ನು ಹಿಂದೆಂದಿಗಿಂತಲೂ ಯಶಸ್ವಿ ಯಾಗಿ ಸಂಘಟಿಸಲಾಗುವುದು. ಸುಪ್ರೀಂ ಕೋರ್ಟ್ ಮೆಟ್ಟಿಲೇರಿಯಾದರೂ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲಾಗುವುದು ಎಂದು ಪ್ರಕಟಿಸಿದರು. ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಮಹಾರ್ಯಾಲಿ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ ಮಾತನಾಡಿ, “12ನೇ ಶತಮಾನದ ಬಸವಣ್ಣನವರ ಕಲ್ಯಾಣ ಕ್ರಾಂತಿ ಈಗ ಪುನರಾವರ್ತನೆ ಮೂಲಕ ಸ್ವತಂತ್ರ ಧರ್ಮ ಪಡೆಯಬೇಕಾಗಿದೆ. ಹೀಗಾಗಿಯೇ ಸೆ.28ರಂದು ಚಿತ್ರದುರ್ಗದಲ್ಲಿ, ನವೆಂಬರ್ 5ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ, ನ.19ರಂದು ವಿಜಯಪುರದಲ್ಲಿ ಲಿಂಗಾಯತ ಮಹಾರ್ಯಾಲಿ ಆಯೋಜಿಸಲು ನಿರ್ಧರಿಸಲಾಗಿದೆ. ಕೊನೆಯ ದಾಗಿ ಡಿ. 10ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಮಹಾರ್ಯಾಲಿ ಆಯೋಜಿಸಿ 20ರಿಂದ 25 ಲಕ್ಷ ಜನರನ್ನು ಸೇರಿಸುವ ಮೂಲಕ ರಾಜ್ಯದಲ್ಲಿಹಿಂದೆಂದೂ ಆಗದ ಐತಿಹಾಸಿಕ ಮಹಾರ್ಯಾಲಿ ನಡೆಸಿ ಬಸವ ಶಕ್ತಿ ಪ್ರದರ್ಶನ ತೋರಿಸಲಾಗುವುದು’ ಎಂದು ಹೇಳಿದರು.
Related Articles
ವಚನದೀಪ್ತಿ ಕೃತಿ ಮೂಲಕ ಬಸವಣ್ಣನವರ ವಚನಾಂಕಿತ ಬದಲಾವಣೆ ಮಾಡಿ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ, ಕೃತಿ ನಿಷೇಧ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಿಸಿದರಲ್ಲದೇ “ಕೃತಿ ಮರು ಪ್ರಕಟಿಸುವುದಿಲ್ಲ’ ಎಂದು ಮಹಾರ್ಯಾಲಿಯಲ್ಲಿ ಘೋಷಿಸಿದರು. ಬಸವಣ್ಣನವರನ್ನು ಅಣ್ಣ ಎನ್ನದೇ ಅಪ್ಪ ಎಂದು ಕರೆಯುವಂತೆ ಹೇಳಿದ ಮಾತೆ ಮಹಾದೇವಿ, ಅಣ್ಣ ಎಂದರೆ ಅಪ್ಪ ಯಾರು ಎಂಬ ಪ್ರಶ್ನೆ ಎದುರಾಗುತ್ತದೆ. ಬಸವಣ್ಣನವರೇ ಲಿಂಗಾಯತ ಧರ್ಮದ ಸ್ಥಾಪಕರಾಗಿದ್ದರಿಂದ ಅಪ್ಪ ಎಂದು ಕರೆಯುವಂತೆ ಹೇಳಿದರು.
Advertisement
ಸಮನ್ವಯ ಸಮಿತಿ ರಚನೆಯಾಗಿಲ್ಲ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಬಸವ ರಾಜ ಹೊರಟ್ಟಿ ಮಾತನಾಡಿ, ವೀರಶೈವ ಹಾಗೂ ಲಿಂಗಾಯತ ನಡುವೆ ಸಮನ್ವಯ ತರುವ ನಿಟ್ಟಿನಲ್ಲಿ ಇಲ್ಲಿಯವರೆಗೆ ಯಾವುದೇ ಸಮಿತಿ ರಚನೆಯಾಗಿಲ್ಲ. ಸಮಿತಿ ರಚನೆಯಿಂದ ಏನೂ ಆಗುವುದಿಲ್ಲ. ವೀರಶೈವ ಬಿಟ್ಟು ಬಂದರೆ ಮಾತ್ರ ಒಮ್ಮತವಾಗುತ್ತದೆ. ಎಲ್ಲ ಕ್ಕಿಂತ ಮುಖ್ಯವಾಗಿ ಇಲ್ಲ-ಸಲ್ಲದ್ದನ್ನು ಮುಂದೆ ಮಾಡಿ ಬಸವಣ್ಣನ ವಿಷಯಕ್ಕೆ ಬಂದರೆ ನೆಟ್ಟಗಿರುವುದಿಲ್ಲ ಎಂದು ಹೇಳಿದರು. ಲಿಂಗಾಯತ ಸಮುದಾಯದ ರ್ಯಾಲಿಗೂ, ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಸಚಿವರು ಲಿಂಗಾಯತ ರ್ಯಾಲಿಯಲ್ಲಿ ಭಾಗಿಯಾಗುವುದು ಅವರ ವೈಯಕ್ತಿಕ ವಿಚಾರ.
ಸಿದ್ದರಾಮಯ್ಯ, ಮುಖ್ಯಮಂತ್ರಿ