ಬೆಂಗಳೂರು : ಮುಳಬಾಗಿಲು ಪಕ್ಷೇತರ ಶಾಸಕ, ಮಾಜಿ ಸಚಿವ ಹೆಚ್.ನಾಗೇಶ್ ಅವರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗುವ ಸಿದ್ಧತೆ ನಡೆಸಿದ್ದಾರೆ.
ಹೆಚ್.ನಾಗೇಶ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಶಾಸಕ ನಾರಾಯಣಸ್ವಾಮಿ ಅವರು ನಾಗೇಶ್ ಅವರ ಜತೆ ಮಾತುಕತೆ ಯಲ್ಲಿ ಭಾಗಿಯಾಗಿದ್ದರು.
ಭೇಟಿ ಬಳಿಕ ಹೇಳಿಕೆ ನೀಡಿದ ಶಾಸಕ ಹೆಚ್.ನಾಗೇಶ್, ವರುಣಾ ಕ್ಷೇತ್ರದ ಕೆಲಸದ ನಿಮಿತ್ತ ಬಂದಿದ್ದೆ. ನಮ್ಮ ಸಂಬಂದಿಯೊಬ್ಬರ ಕೆಲಸ ಆಗುವುದಿತ್ತು. ಹಾಗಾಗಿ ಅವರ ಮಗನ ಭೇಟಿಗೆ ಬಂದೆ, ಅವರಿಲ್ಲಹೋಗುತ್ತಿದ್ದೇನೆ. ಪ್ರತಿಪಕ್ಷ ನಾಯಕರಲ್ಲವೇ , ಗೌರವ ಕೊಡಲು ಬಂದಿದ್ದೆ. ನಾನು ಬಿಜೆಪಿ ಜತೆಯೇ ಗುರುತಿಸಿಕೊಂಡಿದ್ದೇನೆ. ಹಾಗಾಗಿ ಮುಂದೆ ಟಿಕೆಟ್ ಕೊಡಬೇಕಲ್ವೇ? ನೊಡೋಣ ಇನ್ನೂ ಚುನಾವಣೆಗೆ ಸಮಯವಿದೆ. ಕ್ಷೇತ್ರದ ಜನ ಏನು ಹೇಳುತ್ತಾರೆ ಅದರಂತೆ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಸೇರ್ಪಡೆ ಬಗ್ಗೆ ದ್ವಂದ್ವ ಹೇಳಿಕೆ ನೀಡಿದ ನಾಗೇಶ್, ಅವರು ಪ್ರತಿಪಕ್ಚ ನಾಯಕರು ಹಾಗಾಗಿ ಅವರಿಗೆ ಗೌರವ ಕೊಡಲು ಬಂದೆ. ಬಂಗಾರಪೇಟೆ ಶಾಸಕರು ನಮ್ಮವರೇ, ಹಾಗಾಗಿ ಅವರ ಜೊತೆ ಇಲ್ಲಿಗೆ ಬಂದೆ ಎಂದರು.
ಸಚಿವ ಸ್ಥಾನದಿಂದ ಕೈಬಿಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಗ ಮುಂದೆ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಈಗ ಆಸಮಯ ಬಂದಿದೆ ಏನು ಮಾಡುತ್ತಾರೆ ನೋಡೋಣ. ಸಚಿವ ಸ್ಥಾನ ಕೊಟ್ಟರೆ ಯಾರಿಗೆ ಬೇಡ ಹೇಳಿ. ನಾನು ಕಾಂಗ್ರೆಸ್ ಸೇರುವ ಬಗ್ಗೆ ಇನ್ನು ಚರ್ಚಿಸಿಲ್ಲ. ಕ್ಷೇತ್ರದ ಜನರು ಏನುಹೇಳ್ತಾರೆ ಆಮೇಲೆ ನಿರ್ಧರಿಸೋಣ ಎಂದರು.
ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಮಾತನಾಡಿ, ನಾಗೇಶ್ ಅವರು ನಮ್ಮ ಸಂಬಂಧಿಕರು. ನನ್ನ ಜತೆ ಅವರು ಬರಲಿಲ್ಲ. ಇಲ್ಲಿ ಇಬ್ಬರೂ ಭೇಟಿಯಾದೆವು. ಅವರು ಸಿದ್ದರಾಮಯ್ಯ ಮಗನನ್ನ ನೋಡಲು ಬಂಡಿದ್ದರು. ಕಾಂಗ್ರೆಸ್ ಸೇರುವ ಬಗ್ಗೆ ಅಲ್ಲ ಎಂದು ನಗುತ್ತಲೇ ಹೊರಟರು.
ಬಿಜೆಪಿ ಜೊತೆ ಕೈಜೋಡಿಸಿದ್ದ ಹೆಚ್.ನಾಗೇಶ್ ಬಿಎಸ್ ವೈ ಸರ್ಕಾರದಲ್ಲಿ ಸಚಿವರಾಗಿದ್ದರು.