Advertisement

“ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ದೇಶ ದ್ರೋಹ’

08:25 PM May 27, 2019 | Sriram |

ಮಹಾನಗರ: ದೇಶದ ಸ್ವಾತಂತ್ರ್ಯಕ್ಕಾಗಿ ಕೇವಲ ಒಂದು ದಿನ ಜೈಲಿಗೆ ಹೋದವರು ಕೂಡ ಗೌರವಕ್ಕೆ ಪಾತ್ರರಾದ ವ್ಯಕ್ತಿಗಳು. ಅವರನ್ನು ಅವಮಾನಿಸುವವರು ದೇಶ ದ್ರೋಹಿಗಳು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ನಡೆದ ದೇಶದ ಪ್ರಥಮ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರೂ ಅವರ ಪುಣ್ಯ ತಿಥಿ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಅನೇಕ ಮಂದಿ ಜೈಲಿಗೆ ಹೋಗಿದ್ದಾರೆ, ಬಲಿದಾನ ಮಾಡಿದ್ದಾರೆ. ಜವಾಹರಲಾಲ್‌ ನೆಹರೂ ಅವರು ಸ್ವಾತಂತ್ರ್ಯ ಸಂಗ್ರಾಮ ದಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಲವು ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದರು. ಅವರನ್ನು ಅವಮಾನಿ ಸುವುದು ಎಷ್ಟು ಸರಿ ಎಂಬುದನ್ನು ಪ್ರಜ್ಞಾವಂತರು ಆಲೋಚನೆ ಮಾಡ ಬೇಕು. ರಾಜಕೀಯ ಇರಬಹುದು; ಆದರೆ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸ ಬಾರದು. ಅವರ ಶ್ರಮವನ್ನು ನಾವು ಎಂದೂ ಮರೆಯ ಕೂಡದು. ಮೋತಿಲಾಲ್‌ ನೆಹರೂ ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ವಾಸದ ಮನೆಯನ್ನು ಕೂಡ ಬಿಟ್ಟು ಕೊಟ್ಟಿದ್ದರು ಎಂದು ವಿವರಿಸಿದರು.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಮಾತನಾಡಿ, ದೇಶ ಅಭಿವೃದ್ಧಿ ಆಗಿದ್ದರೆ ಮತ್ತು ಭಾರತೀಯರಿಗೆ ಅಚ್ಛೇ ದಿನ್‌ ಬಂದಿದ್ದರೆ ಅದು ಜವಾಹರಲಾಲ್‌ ನೆಹರೂ ಅವರು ಹಮ್ಮಿಕೊಂಡ ಆರ್ಥಿಕ ನೀತಿಗಳಿಂದ ಎಂದರು.

ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ನೆಹರೂ ಅವರು ದೇಶದ ಬಗ್ಗೆ ದೂರದೃಷ್ಟಿ ಇಟ್ಟು ಕಾರ್ಯಪ್ರವೃತ್ತರಾಗಿದ್ದರು. ಗಾಂಧಿ ಹತ್ಯೆ ಸಮರ್ಥಿಸುವವರು ಕೂಡ ಸಂಸತ್‌ ಪ್ರವೇಶಿಸುವ ಪರಿಸ್ಥಿತಿ ಇದೆ. ಕೆಲವರು ಸೋತ ಅಭ್ಯರ್ಥಿಗಳಿಗೆ ಕೊಲೆ ಬೆದರಿಕೆ ಹಾಕುವಷ್ಟು ಕೀಳು ಮಟ್ಟಕ್ಕೆ ಹೋಗಿದ್ದಾರೆ. ಇದು ದೇಶದ ದುರಾದೃಷ್ಟ ಎಂದರು.

Advertisement

ಹಿರಿಯ ಕಾಂಗ್ರೆಸ್‌ ನಾಯಕ ಇಬ್ರಾಹಿಂ ಕೋಡಿಜಾಲ್‌ ಸ್ವಾಗತಿಸಿದರು. ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಸದಸ್ಯ ಗಣೇಶ್‌ ಪೂಜಾರಿ ವಂದಿಸಿದರು. ಸೇವಾ ದಳ ಘಟಕದ ಜಿಲ್ಲಾಧ್ಯಕ್ಷ ಅಶ್ರಫ್‌, ಮಾಜಿ ಕಾರ್ಪೊರೇಟರ್‌ ನವೀನ್‌ ಆರ್‌. ಡಿ’ಸೋಜಾ, ಮಾಜಿ ಮೇಯರ್‌ ಹಿಲ್ಡಾ ಆಳ್ವಾ , ಕಾಂಗ್ರೆಸ್‌ ಮುಖಂಡರಾದ ಎ. ಸುರೇಶ್‌ ಶೆಟ್ಟಿ, ವಿಶ್ವಾಸ್‌ ಕುಮಾರ್‌ ದಾಸ್‌, ಸದಾಶಿವ ಬಂಗೇರ, ಟಿ.ಕೆ. ಸುಧೀರ್‌, ಎ.ಸಿ. ವಿನಯರಾಜ್‌, ಸಿ. ಎಂ. ಮುಸ್ತಾಫ, ಗಿರೀಶ್‌ ಆಳ್ವ, ಜಯಶೀಲೆ ಅಡ್ಯಂತಾಯ, ಯು.ಎಚ್‌. ಖಾಲಿದ್‌, ಪ್ರಶಾಂತ್‌ ಬಂಟ್ವಾಳ್‌, ಪಿಯುಸ್‌ ಮೊಂತೇರೊ, ಭಾಸ್ಕರ ರಾವ್‌, ತೆರೇಸಾ ಪಿಂಟೊ, ಎಸ್‌.ಕೆ. ಸೋಹನ್‌, ಕೇಶವ ಮರೋಳಿ, ಎಚ್‌.ಎಂ. ಅಶ್ರಫ್‌ ಮತ್ತಿತರರು ಭಾಗವಹಿಸಿದ್ದರು. ನೆಹರೂ ಅವರ ಭಾವಚಿತ್ರಕ್ಕೆ ಹೂವು ಗಳನ್ನು ಅರ್ಪಿಸುವ ಮೂಲಕ ಕಾಂಗ್ರೆಸ್‌ ಮುಖಂಡರು ನಮನ ಸಲ್ಲಿಸಿದರು.

ಪ್ರಧಾನಿ ಹುದ್ದೆಗಾಗಿ ಹೋರಾಟ ಮಾಡಿಲ್ಲ
ತಾನು ಸಚಿವನಾಗುತ್ತೇನೆ ಅಥವಾ ಪ್ರಧಾನಿ ಆಗುತ್ತೇನೆ ಎಂದು ಹೇಳಿ ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿಲ್ಲ. ಮೋತಿಲಾಲ್‌ ನೆಹರೂ ಜತೆ ಸೇರಿ ಮಹಾತ್ಮಾ ಗಾಂಧಿ ಅಹಿಂಸಾ ಚಳವಳಿ ನಡೆಸಿದ್ದರು. ಸ್ವಾತಂತ್ರ್ಯ ದೊರೆತ ಬಳಿಕ ಎಲ್ಲ ಹಿರಿಯರ ಒಪ್ಪಿಗೆ ಮೇರೆಗೆ ಜವಾಹಾರಲಾಲ್‌ ನೆಹರೂ ಪ್ರಧಾನಿಯಾದರು .
 - ಬಿ. ರಮಾನಾಥ ರೈ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next