ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವ ಕಾರಣಕ್ಕಾಗಿ ಪಕ್ಷ
ವಿಳಂಬ ಮಾಡುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ.
ಇದರಿಂದ ಪಕ್ಷದ ಕಾರ್ಯಕರ್ತರಿಗೆ ಹಿಂಸೆಯಾಗಿದೆ. ಪಕ್ಷೇತರ ಸ್ಪರ್ಧೆ ನನಗೆ ಅಸಾಧ್ಯ ಅಂತೇನಿಲ್ಲ. ಹಿಂದೆ ವಿಧಾನಸಭೆಗೆ ಪಕ್ಷೇತರನಾಗಿ ಗೆಲುವು ಸಾಧಿಸಿದ ಉದಾಹರಣೆಯಿದೆ ಎಂದು ಮಾಜಿ ಸಚಿವ ಹಾಗೂ ಟಿಕೆಟ್ ಆಕಾಂಕ್ಷಿ ವಿನಯ ಕುಲಕರ್ಣಿ ಹೇಳಿದರು.
Advertisement
ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷ ಹಾಗೂ ಪಕ್ಷದಮುಖಂಡರನ್ನು ನಂಬಿದ್ದೇನೆ. ಅವರು ಯಾವ ನಿರ್ದೇಶನ
ನೀಡುತ್ತಾರೋ ಅಂದರಂತೆ ನಡೆದುಕೊಳ್ಳುತ್ತೇನೆ. ನಾಮಪತ್ರ ಸಲ್ಲಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇನೆ. ಸಾಕಷ್ಟು ದಾಖಲೆಗಳು ಬೇಕಾಗಿರುವ ಕಾರಣಕ್ಕೆ ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಬಿ
ಫಾರಂಗಾಗಿ ಕಾಯುತ್ತಿದ್ದೇನೆ ಎಂದರು.
ಅನುಭವಿಸುವಂತಾಗಿದೆ. ಇಷ್ಟೆಲ್ಲ ಆದ ನಂತರ ಟಿಕೆಟ್ ಕೊಡುವುದು ಸೂಕ್ತವಲ್ಲ ಎನ್ನಿಸುತ್ತಿದೆ. ನಿತ್ಯವೂ ಪಕ್ಷದ ಕಾರ್ಯಕರ್ತರಿಗೆ ಉತ್ತರ ನೀಡಿ ಬೇಸರ ಮೂಡಿದೆ ಎಂದರು. ಶಾಕೀರ್ ಸನದಿ ಸ್ಪರ್ಧೆ ವಿರುದ್ಧ ವೈರಲ್
ಬೆಂಗಳೂರು: ಶಾಕೀರ್ ಸನದಿ ಧಾರವಾಡ ಲೋಕಸಭಾ ಅಭ್ಯರ್ಥಿ ಎಂದು ಸುಳ್ಳು ಪಟ್ಟಿ ಬಿಡುಗಡೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಶಾಕೀರ್ ಸನದಿ ಅವರಿಗೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಅನೇಕರು ಸಲಹೆ ನೀಡಿದ್ದಾರೆ.
ಶಾಕೀರ್ ಸನದಿ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಕೆಪಿಸಿಸಿ ಅಧಿಕೃತ ಫೇಸ್‌ಬುಕ್ ಹಾಗೂ ಮಾಧ್ಯಮ ವಿಭಾಗದ ವಾಟ್ಸ್‌ಅಪ್ ಗ್ರೂಪ್‌ನಲ್ಲಿ ಪ್ರಕಟಿಸಲಾಯಿತು. ತಕ್ಷಣ ಅದು ಫೇಕ್ ಪಟ್ಟಿ ಎಂದು ಅರಿತ ಕೆಪಿಸಿಸಿ ಮಾಧ್ಯಮ ವಿಭಾಗ ಪ್ರಕಟಿಸಿರುವ ಪಟ್ಟಿಯನ್ನು ಅಳಿಸಿ ಹಾಕಿ, ಅದು ನಕಲಿ ಆಯ್ಕೆ ಪಟ್ಟಿ ಎಂದು ಸ್ಪಷ್ಟೀಕರಣ ನೀಡಲಾಯಿತು. ಅಭ್ಯರ್ಥಿ ಆಯ್ಕೆಯಾಗಿದೆ ಎಂಬ ಫೇಕ್ ಪಟ್ಟಿ ಬಿಡುಗಡೆಯಾಗಿರುವ ಬಗ್ಗೆ ಶಾಕೀರ್ ಸನದಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ರೀತಿ ಸುಳ್ಳು ಸುದ್ದಿ ಪ್ರಕಟಿಸದಂತೆ ಮನವಿ ಮಾಡಿದ್ದಾರೆ. ಕೆಲವರು ಅವರಿಗೆ ಟಿಕೆಟ್ ಸಿಕ್ಕಿದೆ ಎಂಬ ಭಾವನೆಯಲ್ಲಿ ಅಭಿನಂದನೆ ಸಲ್ಲಿಸಿದ್ದರೆ, ಕೆಲವು ಕಾಂಗ್ರೆಸ್ ಕಾರ್ಯಕರ್ತರು. ಶಾಕೀರ್ ಸನದಿಗೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಸಲಹೆ ನೀಡಿದ್ದಾರೆ.
Related Articles
ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಏಳ್ಗೆಯಲ್ಲಿ ಕೇಂದ್ರದ ಮಾಜಿ ಸಚಿವ ದಿ| ಅನಂತಕುಮಾರ ಅವರ ಆಶೀರ್ವಾದ ದೊಡ್ಡದು. ಆದರೆ, ಸಹೋದರಿ ತೇಜಸ್ವಿನಿ ಅನಂತಕುಮಾರ ಅವರಿಗೆ ಟಿಕೆಟ್ ತಪ್ಪಿದಾಗ ಪ್ರಹ್ಲಾದ ಜೋಶಿ ತುಟಿ ಬಿಚ್ಚಲಿಲ್ಲ. ಅನಂತಕುಮಾರ ಅವರ ಋಣ ತೀರಿಸುವ ನಿಟ್ಟಿನಲ್ಲಿ
ತೇಜಸ್ವಿನಿ ಅವರಿಗೆ ಟಿಕೆಟ್ ಕೊಡಿಸುವ ಪ್ರಯತ್ನ ಕೂಡ ಮಾಡಲಿಲ್ಲ. ಹಿಂದೆ ಈ ಭಾಗದ ಪ್ರಭಾವಿ ನಾಯಕ ರಾಜೇಂದ್ರ ಗೋಖಲೆ ಅವರ ಟಿಕೆಟ್ ತಪ್ಪಿಸಿ ರಾಜಕಾರಣ ಮಾಡಿದ್ದ ಜೋಶಿಯವರು ಕಾರ್ಯರ್ತರನ್ನು ಬೆಳೆಸುವುದು ಹಾಗೂ ತೇಜಸ್ವಿನಿ ಅವರ ಪರವಾಗಿ ನಿಲ್ಲುವುದು ದೂರದ ಮಾತು ಎಂದು ವಿನಯ ಹೇಳಿದರು.
Advertisement