Advertisement

577 PSI ಹುದ್ದೆಗಳಿಗೆ ಸ್ವತಂತ್ರ ಪ್ರಭಾರ ವ್ಯವಸ್ಥೆ

11:23 PM Aug 17, 2023 | Team Udayavani |

ಬೆಂಗಳೂರು: ಪಿಎಸ್‌ಐ ನೇಮಕಾತಿ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಇರುವುದರಿಂದ 577 ಪಿಎಸ್‌ಐ ಹುದ್ದೆಗಳಿಗೆ ಸ್ವತಂತ್ರ ಪ್ರಭಾರ ವ್ಯವಸ್ಥೆ ಮಾಡಲು ಸರಕಾರ ನಿರ್ಧರಿಸಿದೆ.

Advertisement

ರಾಜ್ಯದಲ್ಲಿ 2020-21ರಲ್ಲಿ 545 ಹಾಗೂ 2021-22 ರಲ್ಲಿ 402 ಪಿಎಸ್‌ಐ (ಸಿವಿಲ್‌) ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳು ವಾಗ ಹಲವು ಆರೋಪಗಳು ಕೇಳಿಬಂದಿದ್ದವು. ಒಂದೆಡೆ ಈ ಹಗರಣದ ತನಿಖೆ ನಡೆಯುತ್ತಿದ್ದು, ಇನ್ನೊಂದೆಡೆ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ.

ಇದರಿಂದ 1 ಸಾವಿರದಷ್ಟು ಪಿಎಸ್‌ಐ ಹುದ್ದೆಗಳು ಖಾಲಿ ಆಗಿದ್ದು, ಎಎಸ್‌ಐಗಳನ್ನೇ ಪಿಎಸ್‌ಐಗಳಾಗಿ ಮುಂಭಡ್ತಿ ನೀಡುವ ಮೂಲಕ ಹುದ್ದೆಗಳ ಭರ್ತಿಗೆ ಕ್ರಮ ವಹಿಸುವುದಾಗಿ ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಹೇಳಿದ್ದರು.

ಅದರಂತೆ ಈಗ ಸರಕಾರ ಆದೇಶ ಹೊರಡಿಸಿದ್ದು, ಒಟ್ಟು 577 ಪಿಎಸ್‌ಐ ಹುದ್ದೆಗಳನ್ನು ತಾತ್ಕಾಲಿಕವಾಗಿ 6 ತಿಂಗಳವರೆಗೆ ಸ್ವತಂತ್ರ ಪ್ರಭಾರ ವ್ಯವಸ್ಥೆ ಮೂಲಕ ತುಂಬಲು ಕ್ರಮ ಕೈಗೊಂಡಿದೆ.

ಮುಂಭಡ್ತಿ ಪ್ರಕ್ರಿಯೆ ಅಲ್ಲ
ನಿಯಮ 32ರ ಅನ್ವಯ ಮಾಡಲಾಗುವ ಸ್ವತಂತ್ರ ಪ್ರಭಾರ ವ್ಯವಸ್ಥೆಯು ಕ್ರಮಬದ್ಧ ಮುಂಭಡ್ತಿ ಪ್ರಕ್ರಿಯೆ ಅಲ್ಲ. ಯಾವುದೇ ಸಂದರ್ಭದಲ್ಲಾದರೂ ಆದೇಶ ಹಿಂಪಡೆಯಬಹುದು. ನೇರ ನೇಮಕಾತಿ ಪ್ರಕ್ರಿಯೆ ನಡೆದ ಕೂಡಲೇ ಈ ವ್ಯವಸ್ಥೆ ರದ್ದಾಗಲಿದೆ. ಸ್ವತಂತ್ರ ಪ್ರಭಾರ ನಿರ್ವಹಿಸಿದ ದಿನಾಂಕದಿಂದ ಪೂರ್ವಾನ್ವಯ ಮುಂಭಡ್ತಿಗೂ ಅವಕಾಶಗಳಿಲ್ಲ. ಹಕ್ಕೊತ್ತಾಯವನ್ನೂ ಮಾಡುವಂತಿಲ್ಲ ಎಂದು ಷರತ್ತು ವಿಧಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next