Advertisement

ಪಕ್ಷಗಳಿಗಿಂತ ಪಕ್ಷೇತರ ಅಭ್ಯರ್ಥಿಗಳದ್ದೇ ಪ್ರಾಬಲ್ಯ!

09:07 AM May 28, 2019 | Team Udayavani |

ಹಿರಿಯೂರು: ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ಇದೇ ಮೊದಲ ಬಾರಿ ಇಲ್ಲಿನ ನಗರಸಭೆಗೆ ಚುನಾವಣೆ ಎದುರಾಗಿದೆ.

Advertisement

ಈ ಹಿಂದೆ ಪುರಸಭೆಯಾಗಿದ್ದಾಗ 27 ವಾರ್ಡ್‌ಗಳಿದ್ದವು. ಕ್ಷೇತ್ರ ಪುನರ್‌ ವಿಂಗಡಣೆ ನಂತರ ವಾರ್ಡ್‌ಗಳ ಸಂಖ್ಯೆ 31ಕ್ಕೇರಿದೆ. ಮೇ 29 ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ನ 22, ಬಿಜೆಪಿಯ 26, ಜೆಡಿಎಸ್‌ನ 8, ಬಿಎಸ್‌ಪಿಯ 1 ಹಾಗೂ 60 ಜನ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 117 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳ ನಾಯಕರಿಗೆ ನಗರಸಭೆ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಾಂಗ್ರೆಸ್‌ ಪರವಾಗಿ ಮಾಜಿ ಸಚಿವ ಡಿ. ಸುಧಾಕರ್‌, ಮಾಜಿ ಸಂಸದ ಬಿ. ಎನ್‌. ಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಫಾತ್ಯರಾಜನ್‌, ಜಿಲ್ಲಾ ಪಂಚಾಯತ್‌ ಸದಸ್ಯ ಆರ್‌. ನಾಗೇಂದ್ರ ನಾಯ್ಕ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್‌ನ ಕೆಲವು ಅಭ್ಯರ್ಥಿಗಳಿಗೆ ಜೆಡಿಎಸ್‌ ಪಕ್ಷದವರು ಬೆಂಬಲ ವ್ಯಕ್ತಪಡಿಸಿದ್ದು, ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ. ಯಶೋಧರ, ತಾಲೂಕು ಅಧ್ಯಕ್ಷ ಶಿವಪ್ರಸಾದ್‌ ಗೌಡ ಪ್ರಚಾರ ಮಾಡಿದ್ದಾರೆ.

ಮತ್ತೂಂದೆಡೆ ಈ ಬಾರಿ ನಗರಸಭೆಯಲ್ಲಿ ಕಮಲ ಅರಳಿಸಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ಮಾಜಿ ಶಾಸಕರಾದ ಆರ್‌. ರಾಮಯ್ಯ, ಬಿಜೆಪಿಯ ಒಬಿಸಿ ರಾಜ್ಯ ಘಟಕದ ಉಪಾಧ್ಯಕ್ಷ ಡಿ.ಟಿ. ಶ್ರೀನಿವಾಸ್‌,

ಎಂ.ಎಸ್‌. ರಾಘವೇಂದ್ರ ಗೆಲುವಿಗೆ ತಂತ್ರ ಹೆಣೆದಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ.

Advertisement

ಕಳೆದ ಬಾರಿ ಏನಾಗಿತ್ತು?: ಕಳೆದ ಬಾರಿ 27 ಸ್ಥಾನಗಳ ಪೈಕಿ ಕಾಂಗ್ರೆಸ್‌ 8, ಬಿಎಸ್‌ ಆರ್‌ಸಿ ಮತ್ತು ಜೆಡಿಎಸ್‌ ಸೇರಿ 5 ಹಾಗೂ 14 ಜನ ಪಕ್ಷೇತರರು ಚುನಾಯಿತರಾಗಿದ್ದರು. ಮೊದಲ ಅವಧಿಗೆ ಪಕ್ಷೇತರರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು. ಕಾಂಗ್ರೆಸ್‌ ಪಕ್ಷದ ಜಬೀಉಲ್ಲಾ ಮತ್ತು ಈ. ಮಂಜುನಾಥ್‌ ಅಧ್ಯಕ್ಷರಾಗಿ

ಅಧಿಕಾರ ನಡೆಸಿದ್ದರು. ಎರಡನೇ ಅವಧಿಗೆ ಪಕ್ಷೇತರರು ಮತ್ತು ಕಾಂಗ್ರೆಸ್‌ನ ಕೆಲ ಸದಸ್ಯರು ಬಿಜೆಪಿಗೆ ನಿಷ್ಠೆ ವ್ಯಕ್ತಪಡಿಸಿದ್ದರು. ಎರಡು ವರ್ಷ ಟಿ. ಚಂದ್ರಶೇಖರ್‌ ಮತ್ತು ಆರು ತಿಂಗಳು ಮಂಜುಳಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next