Advertisement

ತಪ್ಪಿದ ಬಿಜೆಪಿ ಟಿಕೆಟ್: ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ

02:54 PM Mar 30, 2021 | Team Udayavani |

ಬೀದರ್: ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಬಂಡಾಯ ಎದ್ದಿದ್ದು, ಸ್ವಾಭಿಮಾನಿಗಳ ವೇದಿಕೆ ಮೂಲಕ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

Advertisement

ಬಸವಕಲ್ಯಾಣದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಮಂಗಳವಾರ ಬಸವಕಲ್ಯಾಣ ಸ್ವಾಭಿಮಾನ ಬಳಗದಿಂದ ನಡೆದ ‘ನಮ್ಮ ಊರು ನಮಗೆ ಬೇಕು, ನಮ್ಮೂರಿನ ಅಭ್ಯರ್ಥಿ’ ಸಮಾವೇಶದಲ್ಲಿ ಖೂಬಾ ಅವರು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದರು. ಈ ವೇಳೆ ಕಣ್ಣಿರು ಹಾಕಿದ ಖೂಬಾ, ನನಗೆ ಅಧಿಕಾರದ ಆಸೆ ಇಲ್ಲ. ಸ್ವಾಭಿಮಾನಕ್ಕಾಗಿ ಕಣಕ್ಕಿಳಿಯುತ್ತೇನೆ. ಸ್ವಾಭಿಮಾನ ಹೊಂದಿದರೆಲ್ಲರೂ ನನಗೆ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಸಿ.ಡಿ ಪ್ರಕರಣ: ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ

ಟಿಕೆಟ್ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ನಲ್ಲಿ ಎಡವಟ್ಟಾಗಿದೆ. ಅಲ್ಲಿ ಸೂಟ್ ಕೇಸ್ ಕೆಲಸ ಮಾಡಿದೆ. ಜೆಡಿಎಸ್ ನಿಂದ ಎರಡು ಬಾರಿ ಶಾಸಕರಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇ. ಮಾಜಿ ಪ್ರಧಾನಿ ದೇವೇಗೌಡರು ನನ್ನನ್ನು ಒಬ್ಬ ಕೂಸಿನಂತೆ ನೋಡುತ್ತಿದ್ದರು. ಆದರೆ, 2018ರಲ್ಲಿ ಯಡಿಯೂರಪ್ಪ ಅವರ ಕೈ ಬಲಪಡಿಸಬೇಕೆಂಬ ಉದ್ದೇಶದಿಂದ ಬಿಜೆಪಿಗೆ ಸೇರಿದೆ. ಆದರೆ, ಉಪ ಚುನಾವಣೆಯಲ್ಲಿ ಟಿಕೆಟ್ ನೀಡದೆ ಬಿಎಸ್ ವೈ ಮತ್ತು ಬಿಜೆಪಿ ನನಗೆ ದ್ರೋಹ ಮಾಡಿದೆ. ಆದರೂ ಬಸವಕಲ್ಯಾಣದ ಸ್ವಾಭಿಮಾನಿ ಜನರು ನನ್ನನ್ನು ಕೈಹಿಡಿಯಲಿದ್ದಾರೆ ಎಂದು ಹೇಳಿದರು.

ಬಸವಕಲ್ಯಾಣದ 16 ಜನ ಸ್ಥಳೀಯರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ, ಇವರಲ್ಲಿ ಯಾರು ಅರ್ಹರಾಗಿರಲಿಲ್ಲವೇ? ಕಳೆದ ಬಾರಿ ಸೋತಿದ್ದ ನನಗೆ ಟಿಕೆಟ್ ಕೊಡಬೇಕಾಗಿತ್ತು. ಆದರೆ, ಹೊರಗಿನವರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಪಕ್ಷ ಟಿಕೆಟ್ ಮಾರಾಟ ಮಾಡಿಕೊಂಡಿದೆ ಎಂದು ಕಿಡಿಕಾರಿದರು.

Advertisement

ಇದನ್ನೂ ಓದಿ: ಬೆಳಗಾವಿ ಉಪ ಚುನಾವಣೆ : ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ್

ಎಲ್ಲ ಟಿಕೆಟ್ ಆಕಾಂಕ್ಷಿಗಳ ಒಮ್ಮತದ ಬೆಂಬಲ ಮತ್ತು ಸ್ವಾಭಿಮಾನಿ ಜನತೆಯ ಆಶೀರ್ವಾದದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಎಲ್ಲರ ಸಹಕಾರ ನನಗೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಖೂಬಾ ಬೆಂಬಲಿಗರು ಮಾತನಾಡಿ, ಬಸವಕಲ್ಯಾಣದ ಸ್ವಾಭಿಮಾನಕ್ಕಾಗಿ ಎಲ್ಲ 16 ಟಿಕೆಟ್ ಆಕಾಂಕ್ಷಿಗಳು ಒಂದಾಗಿದ್ದಾರೆ. ನಾವು ಬಿಜೆಪಿಯ ಕಾರ್ಯಕರ್ತರೇ, ಯಾರ ವಿರೋಧಿಗಳಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಯಾರ ಸ್ವತ್ತು ಇಲ್ಲ. ಅವರ ಫೋಟೋ ಹಿಡಿದು ಖೂಬಾ ಅವರ ಪರ ಪ್ರಚಾರ ಮಾಡುತ್ತೇವೆ. ಅವರ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದು ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next