Advertisement
ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಶಿವಲಿಂಗಪ್ರಭು ವಾಲಿ ಆಯ್ಕೆಯನ್ನು ಘೋಷಿಸಿದರು. ಶಾಸಕ, ಸಂಸದರು ಸೇರಿ 18 ಜನ ಸದಸ್ಯರಲ್ಲಿ ಸಂಸದ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯ ಚುನಾವಣಾ ಪ್ರಕ್ರಿಯೆಗೆ ಗೈರು ಹಾಜರಾದರು.
Related Articles
Advertisement
ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳುವ ಮೊದಲು ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅನ್ನಪೂರ್ಣ ಉಳ್ಳಿ ಕೂಡಾ ಸೋಲುವ ಭೀತಿಯಿಂದ ನಾಮಪತ್ರ ಹಿಂದಕ್ಕೆ ಪಡೆದು ಅಚ್ಚರಿ ಮೂಡಿಸಿದರು. ಇದು ನೀಲಮ್ಮ ದೊಡಮನಿ ಅವಿರೋಧ ಆಯ್ಕೆಗೆ ದಾರಿಯಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಶಂಕರಲಿಂಗ ಗೌಡರ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಅವರು ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೂ ಬಿಜೆಪಿ ಸ್ಪರ್ಧಿಸದಿರುವುದು ಹಲವು ಬಿಜೆಪಿ ಕಾರ್ಯಕರ್ತರ
ಆಕ್ರೋಶಕ್ಕೂ ಕಾರಣವಾಯಿತು. ಒಟ್ಟಾರೆ ಬಿಜೆಪಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣಕ್ಕೆ ಕಾರಣವಾಯಿತು. ಪಕ್ಷ ಸೂಚಿಸಿದ್ದರೂ ಅಧ್ಯಕ್ಷ ಸ್ಥಾನಕ್ಕೆ ಸ್ಪ ರ್ಧಿಸದ ಅನ್ನಪೂರ್ಣ ಉಳ್ಳಿ ಮೇಲೆ ಪಕ್ಷ ವಿರೋಧಿ ಚಟುವಟಿಕೆಯ ಕ್ರಮ ಕೈಗೊಳ್ಳುವಂತೆ ಹಲವು ಬಿಜೆಪಿ ಕಾರ್ಯಕರ್ತರು ಮಂಡಳಅಧ್ಯಕ್ಷರಿಗೆ ಒತ್ತಾಯಿಸಿದ ಘಟನೆಯೂ ನಡೆಯಿತು. ವಿಜಯೋತ್ಸವ: ಆಯ್ಕೆಯಾದ ನೀಲಮ್ಮ ದೊಡಮನಿ ಹಾಗೂ ಶಂಕರಲಿಂಗ ಗೌಡರ ಅವರ ವಿಜಯೋತ್ಸವ ಜರುಗಿತು. ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರೂ ಪರಿಶಿಷ್ಟ ಜಾತಿಗೆ ಸೇರಿದ ನನ್ನನ್ನು ಕಾಂಗ್ರೆಸ್ ಪಕ್ಷ ಪಪಂ ಅಧ್ಯಕ್ಷರನ್ನಾಗಿ ಮಾಡಿತು. ಶಾಸಕ ಶಿವಾನಂದ ಪಾಟೀಲ ಹಾಗೂ ಪಪಂ ಸದಸ್ಯರಿಗೆ ಧನ್ಯವಾದ ಅರ್ಪಿಸುತ್ತೇನೆ. ಲಭ್ಯವಿರುವ ಆರು ತಿಂಗಳ ಅವಧಿ ಯಲ್ಲಿ ಪಟ್ಟಣದಸರ್ವಾಂಗೀಣ ಅಭಿವೃದ್ಧಿ ಗೆ ಶ್ರಮಿಸುತ್ತೇನೆ. –ನೀಲಮ್ಮ ದೊಡಮನಿ, ಪಪಂ ನೂತನ ಅಧ್ಯಕ್ಷೆ