Advertisement

ಮಾವೋವಾದಿ ನಾಯಕರ ಸ್ಮಾರಕಗಳ ಮೇಲೂ ತ್ರಿವರ್ಣ ಧ್ವಜ!

08:29 PM Aug 15, 2022 | Team Udayavani |

ಒಡಿಶಾ: ಈ ಬಾರಿಯ ಸ್ವಾತಂತ್ರ್ಯೋತ್ಸವ ಅನೇಕ ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಮಾವೋವಾದಿ ನಾಯಕರ ಸ್ಮಾರಕಗಳ ಮೇಲೂ ತ್ರಿವರ್ಣ ಧ್ವಜ ಹಾರಿಸಲಾಗಿದೆ.

Advertisement

ಜಂತ್ರಿ, ಗೊರಸೇಟು, ಘನಬೇದ ಮತ್ತು ಒರಪಾದರ್‌ನಲ್ಲಿನ ಮಾವೋವಾದಿ ನಾಯಕರುಗಳ ಸ್ಮಾರಕಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಲಾಗಿದೆ.

ಈ ಸ್ಥಳಗಳಲ್ಲಿ ಈ ಹಿಂದೆ ಭದ್ರತಾ ಪಡೆಗಳ ಪ್ರವೇಶಕ್ಕೂ ಕಷ್ಟವಿದ್ದು, ಪ್ರತಿ ವರ್ಷ ಮಾವೋವಾದಿಗಳು ಕಪ್ಪು ಧ್ವಜ ಹಾರಿಸುತ್ತಿದ್ದರು.

ಆದರೆ ಇದೀಗ ಭದ್ರತಾ ಪಡೆಗಳು ಸ್ಥಳಗಳ ನಿಯಂತ್ರಣ ಪಡೆದಿದ್ದು, ಈ ಸ್ಥಳಗಳಲ್ಲೂ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next