Advertisement

ಸ್ವಾತಂತ್ರ್ಯೋತ್ಸವ ದಿನ ಭಾರತ ಪಾಲಿಗೆ ಸಂತಸದ ದಿನ: ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌

12:39 PM Aug 15, 2019 | Sriram |

ನವದೆಹಲಿ: ಸ್ವಾತಂತ್ರ್ಯೋತ್ಸವ ದಿನ ಭಾರತ ಪಾಲಿಗೆ ಸಂತಸದ ದಿನ ಎಂದು ರಾಷ್ಟ್ರಪತಿ ಬಣ್ಣಿಸಿದ್ದಾರೆ.

Advertisement

ಭಾರತದ 73 ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನದಂದು ರಾಷ್ಟ್ರಪತಿ ರಾಮ್‌ ನಾಥ್‌ ಕೋವಿಂದ್‌ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು ದೇಶದ ಜನತೆಗೆ ಶಾಂತಿ ,ಸಾಮರಸ್ಯ ಮತ್ತು ಸಾದ್ಭಾವನೆಯ ಸಂದೇಶ ನೀಡಿದರು.

ಗಾಂಧೀಜಿ ಮಾರ್ಗದರ್ಶನ ಇಂದಿಗೂ ನಮಗೆ ಪ್ರಸ್ತುತವಾಗಿದೆ. ಸ್ವಾತಂತ್ರ್ಯೋತ್ಸವ ಅಂಗವಾಗಿ ಕ್ರಾಂತಿಕಾರಿಗಳನ್ನು ಸ್ಮರಿಸುತ್ತೇವೆ.

ಭಾರತ ಸ್ವತಂತ್ರವಾಗಿರಲು ಹೋರಾಡಿದ ಪೀಳಿಗೆಯು ಭಾರತೀಯರಿಗೆ ರಾಜಕೀಯ ಶಕ್ತಿಯ ಬಗ್ಗೆ ಮಾತ್ರವಲ್ಲ, ಸಮಾಜದ ಅಭಿವೃದ್ಧಿ ಮತ್ತು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಆಸಕ್ತಿ ಹೊಂದಿದೆ” ಎಂದು ಅವರು ಹೇಳಿದರು.

ದೇಶದ ಸಂಪತ್ತನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ .

Advertisement

ಜಮ್ಮು-ಕಾಶ್ಮೀರ,ಲಡಾಕ್‌ ವಿಭಜನೆಯಿಂದ ಜನತೆ ಅಲ್ಲಿ ಖುಷಿಯಲ್ಲಿ ಇದ್ದಾರೆ.
ಚುನಾವಣೆಯಲ್ಲಿ ಈ ಬಾರಿ ಮತ್ತೆ ಜನತೆಯಿಂದ ವಿಶ್ವಾಸ ಮೂಡಲಿದೆ.ಜಮ್ಮ-ಕಾಶ್ಮೀರ
ದಲ್ಲಿ ಶಿಕ್ಷಣ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳೂ ಸಿಗಲಿವೆ.

ನಮ್ಮ ಗುರಿ ಏನಿದ್ದರೂ ರಾಷ್ಟ್ರದ ಅಭಿವೃದ್ಧಿಯ ವೇಗ ಹೆಚ್ಚಿಸುವುದು. ಸಾಮಾನ್ಯ ಜನರಿಗೆ ಬ್ಯಾಂಕಿಂಗ್‌ ಸೌಲಭ್ಯ ಹೆಚ್ಚಳಕ್ಕೆ ಕ್ರಮ. ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಅಲ್ಲದೇ ಪ್ರತಿ ಮನೆಯಲ್ಲೊಂದು ಶೌಚಾಲಯದ ವ್ಯವಸ್ಥೆಯಾಗ ಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next