Advertisement
ಉಡುಪಿಯಲ್ಲಿ ಹೊಂಗಿರಣ ಶಿವಮೊಗ್ಗ ಇವರಿಂದ ಡಾ| ಸಾಸ್ವೆಹಳ್ಳಿ ರಚಿಸಿ ಮತ್ತು ನಿರ್ದೇಶಿಸಿದ ಪೌರಾಣಿಕ ನಾಟಕ “ವೀರ ಉತ್ತರಕುಮಾರ’ ಜನಜನಿತವಾದ ಕಥೆಯೊಂದನ್ನು ರಂಗಕ್ಕಿಳಿಸುವ ಪ್ರಯತ್ನವಾಗಿತ್ತು. ತನ್ನಲ್ಲಿ ಇಲ್ಲದ ಪೌರುಷವನ್ನು ಆವಾಹಿಸಿಕೊಂಡು ಇತರರನ್ನು ತುಚ್ಛಿàಕರಿಸುತ್ತಾ, ಪೊಳ್ಳು ಪ್ರತಿಷ್ಠೆಯನ್ನು ವೈಭವೀಕರಿಸುತ್ತಾ ಇದಿರನ್ನು ಹಳಿಯುವ ನೀತಿಯನ್ನು ಮೈಗೂಡಿಸಿಕೊಂಡ ಉತ್ತರಕುಮಾರನ ಅಪರಾವತಾರ ಇಂದಿನ ರಾಜಕಾರಣಿಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಉತ್ತರಕುಮಾರನ ಇಬ್ಬಗೆ ನೀತಿಯನ್ನು ಅರಗಿಸಿಕೊಂಡು ರಂಗದಲ್ಲಿ ಅಭಿನಯಿಸಿ ಯಶಸ್ವಿಯಾದ ಪಾತ್ರಧಾರಿ ಬಹುಕಾಲ ಪ್ರೇಕ್ಷಕರ ನೆನಪಿನಲ್ಲಿ ಉಳಿಯಬಲ್ಲರು. ಕಂಪೆನಿ ನಾಟಕದ ರಂಗಗೀತೆಗಳನ್ನು ಈ ನಾಟಕದಲ್ಲಿ ಆಳವಡಿಸಿಕೊಳ್ಳುವ ಪ್ರಯತ್ನ ಪೂರಕವಾಗುವ ಬದಲು ನಾಟಕದಿಂದ ದೂರನಿಂತಂತೆ ಭಾಸವಾಯಿತು. ಆಸ್ಥಾನದ ದೃಶ್ಯದಲ್ಲೆ ಉದ್ಯಾನವನ, ಯುದ್ಧಭೂಮಿ ಹೀಗೆ ಎಲ್ಲವೂ ಮೂಡಿಬಂದದ್ದು ಅಭಾಸವಾಯಿತು. ಆದರೆ ಸಣ್ತೀಪೂರ್ಣ ಸಂಭಾಷಣೆ ಹಾಗೂ ಸ್ಪಷ್ಟ ಉಚ್ಚಾರ ನಾಟಕದ ಧನಾತ್ಮಕ ಅಂಶಗಳು. ಆಧುನಿಕಯುಗದಲ್ಲಿ ತಮ್ಮ ಮಗುವಿನ ಆಸಕ್ತಿ ಏನೆಂದು ತಿಳಿದುಕೊಳ್ಳದೆ ತನ್ನಿಷ್ಟದಂತೆ ಆಗಬೇಕು ಎನ್ನುವ ಮಿಥ್ಯೆಯ ಬೆನ್ನು ಹಿಡಿದು ಮಗುವಿನ ಭವಿಷ್ಯಕ್ಕೆ ಮಾರಕವಾಗುವ, ಅತಿಮುದ್ದಿನಿಂದ ಬೆಳೆಸಿ ವ್ಯಾವಹಾರಿಕ ಜ್ಞಾನದಿಂದ ವಂಚಿತರನ್ನಾಗಿಸುವ ತಾಯಂದಿರಿಗೆ ಒಂದು ನೀತಿಪಾಠ ಉತ್ತರಕುಮಾರನ ಈ ಮಾತಿನಲ್ಲಿ ಅಡಗಿದೆ. “ಬಾಲ್ಯದಲ್ಲಿ ಅತಿಮುದ್ದಿನಿಂದ ಬೆಳೆಸಿ ಯುದ್ಧವಿದ್ಯೆಗಳನ್ನು ಕಲಿಸದೆ, ವ್ಯಾವಹಾರಿಕ ಜ್ಞಾನವನ್ನು ತಿಳಿಸದೆ, ನನ್ನ ಕಾರ್ಯ ಚಟುವಟಿಕೆಗಳನ್ನು ರಾಣಿಯರ ಅಂತಃಪುರಕ್ಕೆ ಸೀಮಿತಗೊಳಿಸಿ ನನ್ನನ್ನು ಹೇಡಿಯಾಗಿಸಿ ಪ್ರಪಂಚದ ಮುಂದೆ ನಗೆಪಾಟಲಿಗೀಡಾಗುವಂತೆ ಮಾಡಿದ ಮಾತಾಪಿತರೇ ನನ್ನ ಇಂದಿನ ಈ ದುಃಸಿತಿ§ಗೆ ಕಾರಣ’. ಸಮಕಾಲೀನ ವಸ್ತು ಸ್ಥಿತಿಯನ್ನು ನಾಟಕದ ಒಟ್ಟಂದಕ್ಕೆ ಚ್ಯುತಿ ಬಾರದಂತೆ ಅಳವಡಿಸಿಕೊಡ ನಿರ್ದೇಶಕರ ಜಾಣ್ಮೆ ಮೆಚ್ಚಬೇಕಾದದ್ದು.
Advertisement
ವೀರ ಉತ್ತರಕುಮಾರನಿಂದ ಗುಲಾಮನ ಸ್ವಾತಂತ್ರ್ಯಯಾತ್ರೆ
05:12 PM Apr 11, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.