Advertisement

Independence Day; ತಮಿಳುನಾಡಿಗೆ ನೀರು ಅಸಾಧ್ಯ: ಸಚಿವ ಭೋಸರಾಜು

01:13 AM Aug 16, 2023 | Team Udayavani |

ಮಡಿಕೇರಿ: ಪ್ರಸ್ತುತ ಪರಿಸ್ಥಿತಿ ಯಲ್ಲಿ ನೆರೆಯ ರಾಜ್ಯ ತಮಿಳುನಾಡಿನ ಬೇಡಿಕೆಯಂತೆ ಕಾವೇರಿ ನದಿಯ ನೀರು ಹರಿಸಲಾಗದು. ಮೊದಲು ನಮ್ಮ ರಾಜ್ಯದ ರೈತರ ಹಿತ ಮುಖ್ಯವೆಂದು ಸಣ್ಣ ನೀರಾವರಿ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಸ್‌. ಭೋಸರಾಜು ತಿಳಿಸಿದ್ದಾರೆ.

Advertisement

ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡು ಸರಕಾರ, ಬೆಳೆಗಳ ರಕ್ಷಣೆಗಾಗಿ ನಿತ್ಯ 24 ಸಾವಿರ ಕ್ಯುಸೆಕ್‌ ಕಾವೇರಿ ನದಿ ನೀರನ್ನುಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇ ಕೆಂದು ಕೋರಿ ಸರ್ವೋಚ್ಚ ನ್ಯಾಯಾಲ ಯಕ್ಕೆ ಮನವಿ ಮಾಡಿದೆ. ಆದರೆ ಇದು ಸಾಧ್ಯವಾಗದು ಎಂದರು.

ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ರೈತರ ಹಿತ ಬಲಿ ಕೊ ಡಲು ಸಾಧ್ಯವಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಹೇಳಿದರು.

ಮರೆಯಲಾಗದ ರತ್ನಗಳು
ಜಿಲ್ಲಾಡಳಿತದ ವತಿಯಿಂದ ನಗರದ ಕೋಟೆ ಆವರಣದಲ್ಲಿ ಆಯೋಜಿತ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾ ರೋಹಣ ಮಾಡಿ ಅವರು ಸಂದೇಶ ನೀಡಿದ ಅವರು, ಕೊಡಗು ಸ್ವಾತಂತ್ರ್ಯ ಹೋರಾಟಕ್ಕೆ ಹಲ ಮಹನೀಯರನ್ನು ನೀಡಿದ ಪುಣ್ಯ ಭೂಮಿಯಾಗಿದ್ದು, ಸ್ವಾತಂತ್ರ್ಯ ಚಳವಳಿಯಲ್ಲಿ ಕೊಡಗು ಒಂದು ಭಾಗವಾಗಿ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಭಾರ ತೀಯ ಸೈನ್ಯಕ್ಕೂ ಈ ಜಿಲ್ಲೆ ವೀರ ಸೇನಾನಿಗಳನ್ನು, ಯೋಧರನ್ನು ನೀಡಿದೆ. ಈ ಪೈಕಿ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ, ಜನರಲ್‌ ಕೆ.ಎಸ್‌. ತಿಮ್ಮಯ್ಯ ಭಾರತೀಯ ಸೇನಾ ಇತಿಹಾಸದಲ್ಲಿ ಎಂದಿಗೂ ಮರೆಯ  ಲಾಗದ ರತ್ನಗಳೆಂದು ಬಣ್ಣಿಸಿದರು.

ಕಾಫಿ ಬ್ರ್ಯಾಂಡಿಂಗ್‌
ಕೊಡಗು ಪ್ರವಾಸೋದ್ಯಮ ಅಭಿವೃ ದ್ಧಿಗೆ ಇಕೋ ಟೂರಿಸಂ ಯೋಜನೆ ಯನ್ನು ಜಾರಿಗೊಳಿಸಲು ಹಾಗೂ ಕಾಫಿ ಬ್ರ್ಯಾಂಡಿಂಗ್‌ ಮಾಡಲಾಗುವುದು ಎಂದು ಹೇಳಿದರು.

Advertisement

ಶಾಸಕ ಡಾ| ಮಂತರ್‌ ಗೌಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಎನ್‌.ಪಿ. ಅನಿತಾ, ಜಿಲ್ಲಾಧಿಕಾರಿ ವೆಂಕಟ್‌ ರಾಜಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ರಾಮರಾಜನ್‌, ಜಿ.ಪಂ. ಸಿಇಒ ವರ್ಣಿತ್‌ ನೇಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ| ನಂಜುಂಡೇಗೌಡ, ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next