Advertisement

“ಸಂಘದ ಕಟ್ಟಡ ಪುನರ್‌ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ’

01:52 PM Aug 22, 2021 | Team Udayavani |

ಮುಂಬಯಿ: ಗೋರೆಗಾಂವ್‌ ಕರ್ನಾಟಕ ಸಂಘದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಆ. 15ರಂದು ನಡೆಯಿತು. ಸಂಘದ ಉಪಾಧ್ಯಕ್ಷೆ ಪದ್ಮಜಾ ಮಣ್ಣೂರು ಧ್ವಜಾರೋಹಣಗೈದು ಧ್ವಜವಂದನೆ ಸ್ವೀಕರಿಸಿದರು.

Advertisement

ಬಳಿಕ ಸಂಘದ ಕಿರು ಸಭಾಗೃಹದಲ್ಲಿ ನಡೆದ ಸಭಾ ಕಾರ್ಯಕ್ರಮವು ವಸಂತಿ ಕೋಟೆಕಾರ್‌, ಶಾಂತಾ ಶೆಟ್ಟಿ ಮತ್ತು ಸುಕನ್ಯಾ ನಾಯಕ್‌ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಗುಣೋದಯ ಎಸ್‌. ಐಲ್‌ ಸ್ವಾಗತಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷೆ ಪದ್ಮಜಾ ಮಣ್ಣೂರು ಮಾತನಾಡಿ, ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಇಲ್ಲಿ ಸೇರಿದ್ದೇವೆ. ನಮ್ಮ
ದೇಶಕ್ಕೆ ಸ್ವಾತಂತ್ರ್ಯ ಒದಗಿಸಲು ಕಾರಣರಾದ ಎಲ್ಲರನ್ನೂ ಸ್ಮರಿಸೋಣ. ಸಂಘದ ಕಟ್ಟಡ ಪುನರ್‌ ನಿರ್ಮಾಣಕ್ಕೆ ನಮಗೆ ನಿಧಿಯ ಅಗತ್ಯವಿದ್ದು, ಕರ್ನಾಟಕ ಸರಕಾರದ ಸಹಕಾರವನ್ನು ಪಡೆಯ ಬೇಕಾಗಿದೆ ಎಂದರು.

ಇದನ್ನೂ ಓದಿ:ಗೋವಾ ವಿ.ಸ ಚುನಾವಣೆಯಲ್ಲಿ ಬಿಜೆಪಿ ಜೊತೆ ಎಂಜಿಪಿ ಮೈತ್ರಿ ಸಾಧ್ಯತೆಯ ಸುಳಿವು ಕೊಟ್ಟ ಧವಳೀಕರ್

ಸಂಘದ ಹಿರಿಯ ಸದಸ್ಯ ನಿತ್ಯಾನಂದ ಕೋಟ್ಯಾನ್‌ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯದೊರಕಿಸುವಲ್ಲಿ ಶ್ರಮಿಸಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸಬೇಕಾಗಿದೆ. ನಮ್ಮ ಸಂಘದ ಕಟ್ಟಡವು ಬೇಗನೇ ಪುನರ್‌ನಿರ್ಮಾಣವಾಗಲಿದೆ ಎಂದು ತಿಳಿಸಿದರು.

Advertisement

ಸಚ್ಚೀಂದ್ರ ಕೋಟ್ಯಾನ್‌ ಮಾತನಾಡಿ, ಈ ಬಾರಿ ಓಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಮಹಿಳೆಯರು ಇಲ್ಲಿ ತಮ್ಮ ಸಾಧನೆಯನ್ನು ತೋರಿಸಿದ್ದಾರೆ ಎಂದರು.

ಸಂಘದ ಪಾರುಪತ್ಯಗಾರ ಪಯ್ನಾರು ರಮೇಶ್‌ ಶೆಟ್ಟಿ ಅವರು ಸಂಘದ ಕಟ್ಟಡದ ಪುನರ್‌ನಿರ್ಮಾಣದ ಬಗ್ಗೆ ತಿಳಿಸಿ, ಹಿರಿಯರಾದ ಎಸ್‌. ಎಂ. ಶೆಟ್ಟಿ ಅವರು ಹೆಚ್ಚಿನ ಮಟ್ಟದಲ್ಲಿ ಶ್ರಮಿಸಿದ್ದು, ಕಟ್ಟಡದ ಶಂಕುಸ್ಥಾಪನೆಯ ಸಂದರ್ಭ ಅವರನ್ನು ಮುಖ್ಯ ಅತಿಥಿಯಾಗಿ ಆಮಂತ್ರಿಸಬೇಕೆಂದು ತಿಳಿಸಿದರು. ಶಾಂತಾ ಶೆಟ್ಟಿ, ನಿತ್ಯಾನಂದ ಕಾಂಚನ್‌ ಮೊದಲಾದವರು ಶುಭ ಹಾರೈಸಿದರು.

ಗೌರವ ಪ್ರಧಾನ ಕಾರ್ಯದರ್ಶಿ ಗುಣೋದಯ ಎಸ್‌. ಐಲ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next