Advertisement
ಆಗಸ್ಟ್ 9ರಂದು ಕಾರ್ಕಳದಲ್ಲಿ ಎಂ.ಡಿ. ಅಧಿಕಾರಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಆವೇಶ ಭರಿತ ಭಾಷಣ ಮಾಡಿದರು. ಪೊಲೀಸರು ಲಾಠಿ ಪೆಟ್ಟು ನೀಡಿದರಲ್ಲದೇ, ಅವರನ್ನು ಬಂಧಿಸಿದರು. ಈ ಘಟನೆ ಖಂಡಿಸಿ ಕಾರ್ಕಳದಲ್ಲಿ ಜನರು ಆಗಸ್ಟ್ 10ರಂದು ಹರತಾಳ ಆಚರಿಸಿದರು. ಶಾಲೆಗಳಲ್ಲೂ ಈ ಹರತಾಳದ ಬಿಸಿ ಇತ್ತು. ಆಗ ವೆಂಕಟೇಶ ಪ್ರಭು, ಕೇಶವ ಶೆಣೈ ಮತ್ತು ಸುಬ್ರಾಯ ನಾರಾಯಣ ಮಲ್ಯರಿದ್ದ ಕಾರ್ಯಕರ್ತರ ತಂಡವು ಚಿಕಿತ್ಸೆ ಪಡೆ ಯುತ್ತಿದ್ದ ಎಂ.ಡಿ. ಅಧಿಕಾರಿಯವರನ್ನು ಕಾಣಲು ಮಂಗಳೂರಿನ ನರ್ಸಿಂಗ್ ಹೋಂಗೆ ಹೋಗಿತ್ತು. ಅ. 9ಕ್ಕೆ ನಿಷೇಧಾಜ್ಞೆ ಮುರಿದು ಸತ್ಯಾಗ್ರಹ ಮಾಡಲು ಎಂ.ಡಿ. ಅಧಿಕಾರಿ ಸೂಚಿಸಿದರು.
ದೇಗುಲದಿಂದ ಮೆರವಣಿಗೆ ಹೊರಟಿತು. ಆಗ ನಿಷೇಧಾಜ್ಞೆ ಜಾರಿಯಲ್ಲಿತ್ತು. ಅದನ್ನು ಉಲ್ಲಂಘಿಸಿದ ಕಾರಣಕ್ಕೆ 40 ಜನ ಸಶಸ್ತ್ರ ಪೊಲೀಸ್ ಪಡೆಯೊಂದಿಗೆ ಅಧಿಕ ಸಂಖ್ಯೆಯಲ್ಲಿದ್ದ ಪೊಲೀಸರಿಗೆ ಆಗಿನ ವಲಯ ಅಧಿಕಾರಿ ಅಣ್ಣಪ್ಪಯ್ಯ ಸತ್ಯಾಗ್ರಹಿಗಳ ಮೇಲೆ ಲಾಠಿ ಪ್ರಹಾರಕ್ಕೆ ಆದೇಶವಿತ್ತರು. ಪೊಲೀಸರು ಲಾಠಿ ಕುಣಿದಾಡತೊಡಗಿದವು.
Related Articles
Advertisement
ಅವರು ನೆನಪಿಸಿಕೊಳ್ಳುವಂತೆ, “ನನ್ನ ಅಣ್ಣ ಕೃಷ್ಣ ಕಾಮತ್, ನರಸಿಂಹ ಕಾಮತ್ ಕೂಡ ಚಳವಳಿಯಲ್ಲಿ ಭಾಗವಹಿಸಿದ್ದರು. ಕಾರ್ಕಳದವರಷ್ಟೆ ಅಲ್ಲದೆ ಕುಂದಾಪುರ, ಮೂಡುಬಿದಿರೆ ಮತ್ತಿತರ ಕಡೆಯಿಂದಲೂ ಪ್ರತಿಭಟನೆ ನಡೆಸಿ ಜೈಲು ಸೇರಿದ್ದು ನೆನಪಿದೆ. ಅಂದಿನ ಬ್ರಿಟಿಷರ ದಬ್ಟಾಳಿಕೆ, ಪೊಲೀಸರ ದೌರ್ಜನ್ಯ ಇನ್ನೂ ಮರೆತಿಲ್ಲ’ ಎನ್ನುತ್ತಾರೆ. ಸ್ವಾತಂತ್ರ್ಯ ಸಂಗ್ರಾಮದ ಮೆರವಣಿಗೆ ನಡೆದ ಅನಂತಶಯನದಲ್ಲಿ ಸ್ಮಾರಕವಾಗಿ ಧ್ವಜಸ್ತಂಭ ಸ್ಥಾಪಿಸಲಾಗಿದ್ದು, 1957ರ ಆ. 15ರಂದು ಸ್ವಾತಂತ್ರ್ಯ ಹೋರಾಟಗಾರ ಕೆ. ವೆಂಕಟೇಶ ಪ್ರಭು ಶಂಕುಸ್ಥಾಪನೆ ನೆರವೇರಿಸಿದ್ದರು.