Advertisement

ಭೂಮಿ ಸ್ವಾಧೀನ ವಿರೋಧಿಸಿ ರೈತರ ಅನಿರ್ದಿಷ್ಟ ಧರಣಿ

06:44 PM Sep 21, 2022 | Shwetha M |

ಬಾದಾಮಿ: ಸರಕಾರದ ಕೈಗಾರಿಕೆ ಮತ್ತು ವಿಮಾನ ನಿಲ್ದಾಣಕ್ಕೆ ತಾಲೂಕಿನ ಹಲಕುರ್ಕಿ ಗ್ರಾಮದ ಜಮೀನು ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ, ಅಧಿಸೂಚನೆ ರದ್ದಾಗುವವರೆಗೂ ರೈತರು ಹಲಕುರ್ಕಿ ಗ್ರಾಮದ ದಿಗಂಬರೇಶ್ವರಮಠದ ಷಡಕ್ಷರ ಸ್ವಾಮೀಜಿಗಳ ನೇತೃತ್ವದಲ್ಲಿ ಅನಿರ್ದಿಷ್ಟ ಧರಣಿ ಹಲಕುರ್ಕಿ ಗ್ರಾಮದ ಅಗಸಿ ಮುಂದಿನ ಜಾಗೆಯಲ್ಲಿ ಮಂಗಳವಾರದಿಂದ ಆರಂಭಿಸಿದ್ದಾರೆ.

Advertisement

ಪ್ರತಿ ದಿನ 8 ಜನ ರೈತರು ಅನಿರ್ದಿಷ್ಟ ಧರಣಿಯಲ್ಲಿ ಭಾಗವಹಿಸಲಿದ್ದಾರೆ. ಬಹುತೇಕ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳಿಗೆ ಸೇರಿದ ಜಮೀನನ್ನು ಕೈಗಾರಿಕೆ ಮತ್ತು ವಿಮಾನ ನಿಲ್ದಾಣ ಮಾಡಲು 1842 ಎಕರೆ ಜಮೀನನ್ನು 500 ಜನ ರೈತರ ಜಮೀನನ್ನು ಸ್ವಾಧೀನಕ್ಕೆ ಸರಕಾರ ಅಧಿಸೂಚನೆ ಹೊರಡಿಸಿದೆ. ಇದನ್ನು ವಿರೋಧಿಸಿ ಜಿಲ್ಲಾಧಿಕಾರಿಗಳಿಗೆ ಮತ್ತು ಸಚಿವ ಮುರಗೇಶ ನಿರಾಣಿಯವರಿಗೂ ಸಲ್ಲಿಸಿದ್ದಾರೆ. ಅಧಿಸೂಚನೆ ರದ್ದಾಗುವವರೆಗೂ ಧರಣಿ ಮುಂದುವರಿಯಲಿದೆ ಎಂದು ರೈತರು ತಿಳಿಸಿದರು.

ರೈತ ಮುಖಂಡರಾದ ರುದ್ರಗೌಡ ಪಾಟೀಲ, ಪ್ರಕಾಶ ನಾಯ್ಕರ, ಮುತ್ತು ನಾಯ್ಕರ, ಶಾಮಣ್ಣ, ಮಾಗುಂಡಪ್ಪ ಕಟಗೇರಿ, ರಂಗಪ್ಪ ಬಂಡಿವಡ್ಡರ, ಶೇಖಣ್ಣ ಬನ್ನಿ, ಯಮನಪ್ಪ ದಳವಾಯಿ ಸೇರಿದಂತೆ ರೈತರು, ಹಿರಿಯರು, ಯುವಕರು, ಮಹಿಳೆಯರು ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next