Advertisement

ಇಶಾಂತ್‌ ಬೊಂಬಾಟ್‌ ಬೌಲಿಂಗ್‌ ಗೆ ವಿಂಡೀಸ್ ಉಡೀಸ್‌

09:32 AM Aug 25, 2019 | keerthan |

ಆಂಟಿಗುವಾ: ಮೊದಲಾರ್ಧದಲ್ಲಿ ಜಡೇಜಾ – ಇಶಾಂತ್‌ ತಾಳ್ಮೆಯ ಬ್ಯಾಟಿಂಗ್‌, ದ್ವಿತೀಯಾರ್ಧದಲ್ಲಿ ಇಶಾಂತ್‌ ಶರ್ಮಾ ಮಾರಕ ಬೌಲಿಂಗ್‌ ನಿಂದಾಗಿ ಪ್ರಥಮ ಟೆಸ್ಟ್‌ ನ ಮೊದಲ ಇನ್ನಿಂಗ್ಸ್‌ ನಲ್ಲಿ ಭಾರತ, ವಿಂಡೀಸ್ ವಿರುದ್ಧ ಮೇಲುಗೈ ಸಾಧಿಸಿದೆ.

Advertisement

ಮೊದಲ ದಿನದಾಟದಲ್ಲಿ ಆರು ವಿಕೆಟ್‌ ಗೆ 206 ರನ್‌ ಗಳಿಸಿದ್ದ ಭಾರತ ನಿನ್ನೆ ಎರಡನೇ ದಿನದಲ್ಲಿ ಮೊದಲ ವಿಕೆಟ್‌ ನ್ನು ಬೇಗನೇ ಕಳೆದುಕೊಂಡಿತ್ತು. ಮೊತ್ತಕ್ಕೆ ಕೇವಲ ಒಂದು ರನ್‌ ಸೇರಿದಾಗ ರಿಷಭ್‌ ಪಂತ್‌ ಔಟಾದರು. ನಂತರ ಜಡೇಜಾ ಜೊತೆ ಸೇರಿದ ಇಶಾಂತ್‌ ಕೆಳ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರು. ಇವರಿಬ್ಬರು ಉಪಯುಕ್ತ 60 ರನ್‌ ಸೇರಿಸಿದರು. 62 ಬಾಲ್‌ ಎದುರಿಸಿ 19 ರನ್‌ ಗಳಿಸಿದ ಇಶಾಂತ್‌, ಜಡೇಜಾಗೆ ಉತ್ತಮ ಸಾಥ್‌ ನೀಡಿದರು. ಜಡೇಜಾ 58 ರನ್‌ ಗಳಿಸಿ ಔಟಾಗುವುದರೊಂದಿಗೆ ಭಾರತ 297 ರನ್‌ ಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು.

ತನ್ನ ಪ್ರಥಮ ಇನ್ನಿಂಗ್ಸ್‌ ಆರಂಭಿಸಿದ ವಿಂಡೀಸ್‌ ಗೂ ಉತ್ತಮವೆನಿಸುವ ಆರಂಭ ಸಿಗಲಿಲ್ಲ. 36  ರನ್‌ ಗೆ ಮೊದಲ ವಿಕೆಟ್‌ ಕಳೆದುಕೊಂಡ ವಿಂಡಿಸ್‌ ನಂತರ ಇಶಾಂತ್‌ ಶರ್ಮಾ ದಾಳಿಗೆ ವಿಕೆಟ್‌  ಕಳೆದುಕೊಳ್ಳುತ್ತಾ ಹೋಯಿತು. ರೋಸ್ಟನ್‌ ಚೇಸ್‌ 48 ರನ್‌ ಗಳಸಿದ್ದೇ ವಿಂಡೀಸ್‌ ಇನ್ನಿಂಗ್ಸ್‌ ನ ಅತ್ಯುತ್ತಮ ಸ್ಕೋರ್.‌  ಅಂತಿಮವಾಗಿ ದಿನದಾಟದ ಅಂತ್ಯಕ್ಕೆ ಎಂಟು ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿದೆ. ಮೊದಲ ಇನ್ನಿಂಗ್ಸ್‌ ಮುನ್ನಡೆಗೆ ವಿಂಡೀಸ್‌ ಇನ್ನೂ 108 ರನ್‌ ಗಳಿಸಬೇಕಿದೆ.

ಬಿಗು ದಾಳಿ ಸಂಘಟಿಸಿದ ಇಶಾಂತ್‌ ಐದು ವಿಕೆಟ್‌ ಕಿತ್ತರೆ, ಬುಮ್ರಾ, ಶಮಿ, ಜಡೇಜಾ ತಲಾ ಒಂದು ವಿಕೆಟ್‌ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next